ಮಂಗಳವಾರ, ಅಕ್ಟೋಬರ್ 5, 2021

ದೇಹದ ಜೀವಾತ್ಮ (ಕವಿತೆ) - ಶ್ರೀಮತಿ ಭಾಗ್ಯ ಗಿರೀಶ್, ಹೊಸದುರ್ಗ. ಚಿತ್ರದುರ್ಗ (ಜಿ).

ದೇಹದ ಜೀವಾತ್ಮ

ಈ ದೇಹದ ಜೀವಾತ್ಮವೀ ಪುಟ್ಟ ಹೃದಯ
ಲಬ್ ಡಬ್ ಹೃದಯದ ಬಡಿತ ವಿಸ್ಮಯ
ಆರೋಗ್ಯವಂತ ಮನುಜನ ಹೃದಯ
ಮಾಡುವುದು,ದೇಹದ ಅಂಗಾಂಗಗಳಿಗೆ ಅದ್ಭುತ ರಕ್ತಸಂಚಲನಾ ಕಾರ್ಯ

ಸಮಾಜದಲ್ಲಿ ಮನುಷ್ಯ ದುಶ್ಚಟಗಳಿಂದ ದೂರವಾಗಿ
ದುಷ್ಟರ ಸಹವಾಸ ಹಾಗೂ ದುಷ್ಟ ವ್ಯಸನಗಳಿಂದ ಮುಕ್ತನಾಗಿ
ಧ್ಯಾನಾಸಕ್ತ ಹಾಗೂ ಶಾಂತ ಪ್ರವೃತ್ತಿಯ ಮನಸ್ಥಿತಿಯುಳ್ಳವನಾಗಿ
ಸಮಾಜದಿ ಬಾಳಲಿ ಉತ್ತಮ ಹೃದಯವಂತ ವ್ಯಕ್ತಿಯಾಗಿ.

ವೈಚಾರಿಕತೆಯ ಮನದಲ್ಲಿ ಬೆಳೆಸಿಕೊ ಮನುಜ
ಸತ್ಯದ ಜ್ಞಾನದ ಜ್ಯೋತಿ ಮನದಲ್ಲಿ ಬೆಳಗಲಿ ಅಗ್ರಜ
ಅಂಗಾಂಗ ದಾನದ ಶ್ರೇಷ್ಠತೆಯ ತಿಳಿಯೋ ಅನುಜ
ಮಾನವೀಯತೆಯ ಬೆಳಕಲ್ಲಿ,ಜೀವಿಸಲಿ ಸಮಾಜ.

ಮಣ್ಣಲ್ಲಿ ಮಣ್ಣಾಗಿ ಹೋಗುವ ದೇಹವಿದು ಜಗದಲಿ
ನಮ್ಮಿ ದೇಹದ ಮರಣಾನಂತರವೂ,ನಮ್ಮಿ ಹೃದಯ ಜೀವಂತವಾಗಿರಲಿ
ಇನ್ನೊಬ್ಬರ ಹೊಸಬದುಕಿನ ಮಿಡಿತವಾಗಿರಲಿ.
ನೊಂದವರ ಬಾಳಿನ ಜೀವನದ ತುಡಿತವಾಗಿರಲಿ.
✍️ ಶ್ರೀಮತಿ ಭಾಗ್ಯ ಗಿರೀಶ್, ಹೊಸದುರ್ಗ. ಚಿತ್ರದುರ್ಗ (ಜಿ).

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...