ಶರಣ ಸೂಫಿ ಸಂತರ ಊರು
ತತ್ವ ಪದಕಾರರ ತವರೂರು
ಮಹಾಂತ ಮಡಿವಾಳ ನೆಲಸಿಹರು
ತ್ರಿವೇಣಿ ಸಂಗಮ ಹತ್ತಿರ ನಮ್ಮೂರು
ಸಂಸಾರ ಬಂಧನ ತ್ಯಜಿಸಿರು
ಮಹಾದಾಸೋಹ ಗೈದಿಹರು
ಕಲ್ಯಾಣಕರ್ನಾಟಕ ಶರಣರು
ನಮ್ಮ ದೈವ ಶರಣ ಬಸವೇಶ್ವರರು
ಕರುನಾಡಿಗೆ ಕವಿರಾಜಮಾರ್ಗರು
ನನ್ನ ಜಿಲ್ಲೆಯ ಕವಿವರ್ಯ ನೃಪತುಂಗರು
ಕನ್ನಡಕ್ಕೆ ವ್ಯಾಕರಣ ಧಾರೆಯೆರೆದವರು
ಪಕ್ಕದೂರು ಕೊಂಡಗುಳಿ ಕೇಶೀರಾಜರು
ಒಂದು ಕಾಲದಿ ವಿದ್ಯಾಕೇಂದ್ರವಾಗಿತ್ತು
ಬೃಹತ್ ಅಗ್ರಹಾರವೇ ಇಲ್ಲಿತ್ತು
ಏಳರಾಮೇ ಏಳರಾವೇಯೆಂದು ಪ್ರಸಿದ್ಧವಾಗಿತ್ತು
ಬಲು ಆಕರ್ಷಣೀಯ ರಾಮತೀರ್ಥವು ಇಲ್ಲಿತ್ತು
ದುಷ್ಟ ರಾಜರ ದಾಳಿಯಿಂದ ಹಾಳಾದರು ಇರುವರು
ಚತುಷ್ಟ ಕಲ್ಯಾಣಿಗಳ ಮಧ್ಯದಿ ಶ್ರೀರಾಮಲಿಂಗರು
ದುರುಳ ನಿಜಾಮ ಸರ್ಕಾರವ ಬಗ್ಗು ಬಡಿದಿಹರು
ಸರ್ದಾರ್ ಶರಣಗೌಡರ ಸಹಿತ ಹಲವು ವೀರರು
- ಮಲ್ಲಿಕಾರ್ಜುನ ಎಸ್ ಆಲಮೇಲ ಯಡ್ರಾಮಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ