ನಲಿವು ಬಂದು ನೋವು ಕಳೆಯುವತನಕ ಓದು
ಗೆಲುವು ಒಲಿದು ನಗುವ ನೀಡುವತನಕ ಓದು.
ವೈರಿಗಳು ಹೆದರುವ ಪ್ರಬಲ ಅಸ್ತ್ರವೇ ಜ್ಞಾನ
ಸಮಾಜದ ಉತ್ತಮ ನಾಯಕನಾಗುವತನಕ ಓದು.
ಬದುಕಿನ ಉಜ್ವಲ ಭವಿಷ್ಯಕ್ಕೆ ವಿದ್ಯಯೇ ಹಣತೆ
ಅದ ಅವಮಾನಗಳಿಗೆಲ್ಲ ಸನ್ಮಾನ ದೊರಕುವತನಕ ಓದು.
ಜೀವನದ ಗುರಿ ಸಾಗುತ್ತಿರುವ ದಾರಿ ಸ್ಪಷ್ಟವಾಗಿರಲಿ
ಹೆತ್ತವರು ಕಂಡ ಕನಸು ನೆನಸಾಗುವತನಕ ಓದು.
ಕಾವ್ಯಳ ಪಾಲಿಗೆ ಪರಿಶ್ರಮವೇ ದೈವಪೂಜೆ
ಶಾರಾದೆಯೇ ಮೆಚ್ಚಿ ಫಲ ನೀಡುವತನಕ ಓದು.
- ಕಾವೇರಿ ಪೋತ್ನಾಳ್.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ