ಶನಿವಾರ, ಜನವರಿ 1, 2022

ಕಾಲೇಜು ದಿನಗಳೇ ಹಾಗೆ (ಲೇಖನ) - ಸೌಮ್ಯ ಗಣಪತಿ ನಾಯ್ಕ

ಹ! ಕಾಲೇಜ್ ದಿನಗಳೇ ಹಾಗೆ, ಪ್ರೌಢಾವಸ್ಥೆಯಿಂದ ಪದವಿ ಪೂರ್ವಕ್ಕೆ ಕಾಲಿಟ್ಟ ಕ್ಷಣಗಳವು. ಅದೇನೋ ಕಾನಸೂರು ಬಿಟ್ಟರೆ ಬೇರೆ ಪ್ರಪಂಚದ ಅರಿವೆ ಇಲ್ಲವೇನೋ ಅನ್ನುವ ತರ ಇತ್ತು ನನ್ನ ಆಗಿನ ಸ್ಥಿತಿ. ಯಾಕಂದರೆ ನಾನು ಹೆಚ್ಚಾಗಿ ನನ್ನ ಮನೆಯನ್ನು ಮನೆಯವರನ್ನು ಬಿಟ್ಟು ಬೇರೆ ಯಾರ  ಸನಿಹ ಬಯಸಿದವಳಲ್ಲ. ನಾನು ಪ್ರಾಥಮಿಕ ಶಿಕ್ಷಣವನ್ನು ನನ್ನ ಊರಿನಲ್ಲಿಯೇ ಮುಗಿಸಿದೆ. ಅದೂ ಅಲ್ಲದೆ ಚಿಕ್ಕ ವಯಸ್ಸಿನಿಂದ ಏನೇ ತರುವುದಾಗಲಿ, ಕೊಡುವುದಾಗಲಿ ಯಾವ ಕೆಲಸವನ್ನೂ ಕೂಡ ನಾನು ನನ್ನ ಮೈ ಮೇಲೆ ಹಾಕಿಕೊಳ್ಳುತ್ತಿರಲಿಲ್ಲ. ನನ್ನ ತಂದೆಯೇ ಎಲ್ಲಾ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿದ್ದರು. ನಾನಿನ್ನೂ ಚಿಕ್ಕವಳೆಂದು ಯಾವ ಕೆಲಸಕ್ಕೂ ನನ್ನನ್ನು ಕಳುಹಿಸುತ್ತಿರಲಿಲ್ಲ. ಎಲ್ಲಾ ಅವರೇ ನೋಡಿಕೊಳ್ಳುತ್ತಿದ್ದರು. ಅದಕ್ಕೆ ನಾನು ಬಾವಿಯೊಳಗಿನ ಕಪ್ಪೆಯಾಗಿ ಬಿಟ್ಟಿದ್ದೆ. ಹಾಗೆ  ನೋಡ್ತಾ ನೋಡ್ತ ಕಾಲ ಕಳೆದೆ ಹೋಯಿತು. ನನ್ನ ಹತ್ತನೆ ತರಗತಿಯ ಪಲಿತಾಂಶ ಪ್ರಕಟವಾಗುವ ಸಮಯ ಬಂದೆ ಬಿಟ್ತು. ಉತ್ತಮ ಪಲಿತಾಂಶದ ನಿರೀಕ್ಷೆಯಲ್ಲಿ ಇದ್ದೆ. ಆದರೆ ನನ್ನ ಪ್ರಯತ್ನಕ್ಕೆ ತಕ್ಕ ಪಲಿತಾಂಶ ಬಂದಿತ್ತು. ಆಗ ಅದೇ ನನ್ನ ಪಾಲಿಗೆ ಹೆಚ್ಚು ಅನಿಸಿತು. ನನ್ನ ಸ್ನೇಹಿತರೆಲ್ಲರೂ ಅವರವರ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಕಾಲೇಜು ಆರಿಸಿಕೊಂಡರು. ಒಂದಿಷ್ಟು ಗೆಳೆಯರು ಊರು ಬಿಟ್ಟು ಬೇರೆ ಊರಿಗೆ ಓದಲು ಹೋದರೆ ಇನ್ನೂ ಕೆಲವರು ಕಲಿಯುವುದನ್ನು ಬಿಟ್ಟು ಬೇರೆ ಕೆಲಸದಲ್ಲಿ ತಮ್ಮನ್ನು ತಾವೇ ತೋಡಗಿಸಿಕೊಂಡಿದ್ದಾರೆ.  ಇನ್ನೂ ನಾನು ಆರಿಸಿಕೊಂಡ ಕಾಲೇಜಿನ ಹೆಸರು ಶ್ರೀ ವೆಂಕಟರಾವ್ ನಿಲೇಕಣಿ ಪದವಿ ಪೂರ್ವ ಕಾಲೇಜು ಶಿರಸಿ. ಇದು  ಶಿರಸಿಯಲ್ಲಿಯೇ ಒಂದು ಭಾಗವಾಗಿದೆ. ನನ್ನ ಕಾಲೇಜು ನನಗೆ ಅದೇಷ್ಟೋ ಸಿಹಿ ನೆನಪನ್ನು ನೀಡಿದೆ. ಕಹಿ ಘಟನೆಗಳನ್ನು ಎದುರಿಸುವ ಶಕ್ತಿ ಕೊಟ್ಟಿದೆ. ನಾನು ನನ್ನ ಕಾಲೇಜಿನ ಬಗ್ಗೆ ನನ್ನ ಮನದಾಳದ ಮಾತನ್ನು ಚಿಕ್ಕದಾಗಿ ಚೊಕ್ಕದಾಗಿ ವರ್ಣಿಸಲು ಇಚ್ಛಿಸುತ್ತೇನೆ. 2009- 10 ರಲ್ಲಿ ನಮ್ಮ ಸರಕಾರಿ ಪದವಿ ಪೂರ್ವ ಕಾಲೇಜು ಚಿಕ್ಕ ಮಗಳೂರು ಜಿಲ್ಲೆಯ ಕುದುರೆ ಮುಖದಲ್ಲಿ ಇತ್ತು. ಆಗ ಅಲ್ಲಿನ ಆಂತರಿಕ ಸಮಸ್ಯೆಯಿಂದಾಗಿ ಅಲ್ಲಿನ ಆಗಿನ ಮುಖ್ಯಮಂತ್ರಿಗಳ ಮತ್ತು ಶಿರಸಿಯ ಶಾಸಕರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಕೃಪಾ ಕಟಾಕ್ಷದಿಂದ ಪ್ರಯತ್ನದಿಂದ ಕುದುರೆ ಮುಖದಲ್ಲಿ ಇದ್ದ ನಮ್ಮ ಕಾಲೇಜು ನಿಲೇಕಣಿ ಹೈಸ್ಕೂಲ್ಗೆ  ಸ್ಥಳಾಂತರವಾಯಿತು. ಹೈಸ್ಕೂಲ್ನ ಒಂದು ಭಾಗವಾಗಿ  ಕಾಲೇಜು ಪ್ರಾರಂಭಿಸಿದರು. ಸಣ್ಣ ಸಣ್ಣ ಕಟ್ಟಡ, ಹೀಗೆ ಹಲವಾರು ಇಕ್ಕಟ್ಟಿನ ಪರಿಸ್ಥಿತಿ ಕೂಡ ಇತ್ತು. ಹೀಗೆ ಅನೇಕ ಮೂಲಭೂತ ಸೌಕರ್ಯಗಳ ಕೊರತೆಯಿದ್ದರೂ ಅಂಜದೇ ಕುಗ್ಗದೆ, ಗಟ್ಟಿ ನಿಲುವಾಗಿ ನಿಂತಿದ್ದು ನಮ್ಮ ಕಾಲೇಜಿನ ಪುಟ್ಟ ಸಾಧನೆಯೇ ಸರಿ.. ಮೊದಮೊದಲು ನಮ್ಮ ಕಾಲೇಜಿನಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗ ಮಾತ್ರ ಇತ್ತು. ಕೆಲವೇ ಕೆಲವು ವಿದ್ಯಾರ್ಥಿಗಳಿಂದ ಅಂದರೆ ಕೇವಲ 80 ವಿದ್ಯಾರ್ಥಿಗಳಿಂದ ಕಾಲೇಜು ನಡೆಯುತ್ತಿತ್ತು. ನಂತರ ಅನೇಕ ಸಮಸ್ಯೆಯಿಂದ ಬಳಲುತ್ತಿದ್ದ ನಮ್ಮ ಕಾಲೇಜಿನ ನೆರವಿಗೆ ಒಂದು ಪ್ರತಿಷ್ಠಿತ ಸಕುಟುಂಬ ಕೈ ಜೋಡಿಸಿದರು. ಶಿರಸಿಯ ನಿಲೇಕಣಿ ಯಲ್ಲಿರುವ ಗೌರವಾರ್ಥವಾದ ಇಂಪೋಸಿಸ್ ಕಂಪನಿಯ ಸಂಸ್ಥಾಪಕರಾದ ಶ್ರೀ ನಂದನ್ ನಿಲೇಕಣಿರವರ ಕುಟುಂಬದವರು ನಮ್ಮ ಕಾಲೇಜಿನ ನಿರ್ಮಾಣಕ್ಕಾಗಿ ಎರಡು ಎಕ್ಕರೆ ಭೂಮಿಯನ್ನು ದಾನವಾಗಿ ನೀಡಿದರು. ಈ ಕುಟುಂಬದ  ಮಾಡಿದ ಸಹಾಯದ ಕಾರಣದಿಂದ ನಮ್ಮ ಕಾಲೇಜು ಇಂದೂ ಕೂಡ  ತಲೆ ಎತ್ತಿ ವಿರಾಜಮಾನವಾಗಿ ವಿಜೃಂಭಿಸುತ್ತಿದೆ. ಶಿರಸಿಯ ಹೆಸರಾಂತ ಕಾಲೇಜು ಎನ್ನುವ ಬಿರುದಿಗೆ ಭಾಗಿಯಾಗಿದೆ. ಇದಕ್ಕಾಗಿ ನಮ್ಮ ಕಾಲೇಜಿಗೆ ನಂದನ್ ನಿಲೇಕಣಿರವರ ಕುಟುಂಬದ ಹಿರಿಯ ಸದಸ್ಯರಾದ ಶ್ರೀ ವೆಂಕಟರಾವ್ ನಿಲೇಕಣಿ ಪದವಿ ಪೂರ್ವ ಕಾಲೇಜು ಎಂಬ ಹೆಸರಿನಿಂದಲೇ ಅಲಂಕರಿಸಲಾಗಿದೆ. ವಿಜ್ಞಾನ ವಿಭಾಗದ ಕೊರತೆ ಇತ್ತು, ಅದು ಕೂಡ 2011- 12 ಸಾಲಿನಲ್ಲಿ ಸೇರ್ಪಡೆಯಾಯಿತು. 2016- 17 ನೇ ಸಾಲಿನಲ್ಲಿ ಭೀಮನ ಗುಡ್ಡಕ್ಕೆ ಸ್ಥಳಾಂತರಿಸಲಾಯಿತು. ಭೀಮನ ಗುಡ್ಡಕ್ಕೆ ಹುಲಿಯಪ್ಪನ  ಗುಡ್ಡ ಅಂತ ಕೂಡ ಹಿರಿಯರು ಕರೆಯುತ್ತಾರೆ. ಪ್ರತಿ ವರ್ಷ ಉತ್ತಮ ಪಲಿತಾಂಶ ವನ್ನು ನೀಡುತ್ತಾ ಬಂದಿರುವ ನಮ್ಮ ಕಾಲೇಜಿಗೆ ಒಂದು ಒಳ್ಳೆಯ ಇತಿಹಾಸ ಇರುವುದು ನಮ್ಮೆಲ್ಲ ಹೆಮ್ಮೆಯ ಸಂಗತಿಯಾಗಿದೆ. ಅಷ್ಟೇ ಅಲ್ಲದೆ ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಶಿರಸಿ ನಗರದಲ್ಲಿ ಎರಡನೇ ಅತಿ ದೊಡ್ಡ ಕಾಲೇಜು ಎಂದು ಗುರುತಿಸಲ್ಪಟ್ಟಿದೆ. ಇನ್ನೂ ನನ್ನ ಗುರುಗಳ ಬಗ್ಗೆ ಹೇಳಲು ನನಗೆ ಮಾತೇ  ಬಾರದು. ಮಮತೆಗೂ ಮೀರಿದ ಭಾಂಧವ್ಯ, ವಾತ್ಸಲ್ಯಕ್ಕೂ ಮೀರಿದ ಆಕರ್ಷಕ ಮನೋಭಾವದವರು ನಮ್ಮ ಗುರುಗಳು. ಕಠಿಣ ಪರಿಸ್ಥಿತಿಯಲ್ಲಿಯೂ ಪ್ರೀತಿಗೇನೂ ಕಡಿಮೆ ಇರಲಿಲ್ಲ. 2009- 2011ರವರೆಗೆ ಶ್ರೀ ಸಿದ್ದದೇವರವರು ಪ್ರಾಚಾರ್ಯರಾಗಿ ಉತ್ತಮ ಸೇವೆ ಸಲ್ಲಿಸಿದರು. 2011 -2018 ರವರೆಗೆ ಶ್ರೀ ಉಮೇಶ್ ಭಟ್ ರವರು ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದರು. 2018 - 2020 ರವರೆಗೆ ನಾಗರಾಜ್ ಗಾಂವಕರ್ ರವರು ಉತ್ತಮ ಸೇವೆ ಸಲ್ಲಿಸಿ, ಶಿಕ್ಷಣ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆ ತಂದರು.ಇನ್ನೂ ಉಳಿದ ಖಾಯಂ ಉಪನ್ಯಾಸಕರ ಬಗ್ಗೆ ಹೇಳಲು ಪದಗಳೇ ಸಾಲದು  .   ಶ್ರೀಮತಿ ಭಾರತಿ  ಮೇಡಂ ರವರ ಬಗ್ಗೆ ಹೇಳಲು ನನಗೆ ಯಾವುದೇ ಅರ್ಥತೆ ಇಲ್ಲವೇನೋ  ನಮ್ಮ ಕಾಲೇಜಿನ ಹಿರಿಯ ಮಹಾನ್ ಜೀವ ಇವರು. ಅಷ್ಟು ವಯಸ್ಸು ಆದರೂ ಆ ಹುಮ್ಮಸ್ಸು, ಚೈತನ್ಯ, ಉತ್ಸಾಹ, ಉಲ್ಲಾಸ ನೋಡುವುದೇ ಒಂದು ಆನಂದ. ಮುಗಿಲು ಮುಟ್ಟಿತು ಅವರು ಮತ್ತು ವಿದ್ಯಾರ್ಥಿಗಳ ಅಭೂತಪೂರ್ವ ಭಾಂಧವ್ಯ. ಪೂರ್ಣಿಮಾ ಮೇಡಂ ಇವರು ಸದಾ ಮುಗುಳುನಗೆಯ ಚೆಲ್ಲಿದ ನನ್ನ ಆತ್ಮೀಯ ಶಿಕ್ಷಕಿ ಮತ್ತು ಎಲ್ಲಾ ವಿದ್ಯಾರ್ಥಿಗಳ ಪಾಲಿಗೆ ಇವರು ಉತ್ತಮ ಸ್ನೇಹ ಜೀವಿಯಾಗಿ ಇದ್ದರು ಇವರು ಅರ್ಥಶಾಸ್ತ್ರ ಉಪನ್ಯಾಸ ಮಾಡುತ್ತಿದ್ದರು.       ನಾಗರಾಜ್ ಗಾಂವಕರ್ ಸರ್ ರವರು ಇವರು ನಾವು ಇರುವಾಗ ಖಾಯಂ ಉಪನ್ಯಾಸಕರಾಗಿದ್ದರು. ಇವರು ಆಂಗ್ಲ ಭಾಷೆಯಲ್ಲಿ ಉಪನ್ಯಾಸ ಮಾಡುತ್ತಿದ್ದರು. ಸ್ಮಿತಾ ಮೇಡಂ ಇವರು ನಮಗೆ ಭೋಧಿಸುತ್ತಿರಲಿಲ್ಲ. ನಾವು  ವಾಣಿಜ್ಯ ವಿಭಾಗದವರು, ಆದರೆ ಕಲಾ ವಿಭಾಗಕ್ಕೆ ಸಮಾಜಶಾಸ್ತ್ರ ಉಪನ್ಯಾಸ ಮಾಡುತ್ತಿದ್ದರು. ನಮ್ಮನ್ನು ಅವರ ವಿದ್ಯಾರ್ಥಿಗಳ ಹಾಗೆ ಪ್ರೀತಿ, ಕಾಳಜಿ, ವಿಶ್ವಾಸದಿಂದ ನೋಡುತ್ತಿದ್ದರು. ಪ್ರಭಾವತಿ ಮೇಡಂ ಇವರು ಕೂಡ ಕಲಾ ವಿಭಾಗದಲ್ಲಿ ಭೋಧಿಸುತ್ತಿದ್ದರು. ಇವರನ್ನು ನೋಡಿದರೆ ಎಲ್ಲರಿಗೂ ಭಯ, ಭಕ್ತಿ ಕೂಡ ಇತ್ತು. ಇವರು ಗಟ್ಟಿಗಿತ್ತಿ ಕೂಡ ಹೌದು. ವನಿತಾ ಮೇಡಂ ಇವರು ಗಣಿತ ಉಪನ್ಯಾಸಕರಾಗಿದ್ದರು. ಇವರು ವಿಜ್ಞಾನ ವಿಭಾಗದವರು ಆದರೂ ನಮಗೆಲ್ಲ ಉತ್ತಮ ಗುರುವಾಗಿದ್ದರು. ಪ್ರಶಾಂತ್ ಸರ್ ಇವರು ಸಂಸ್ಕೃತ ಉಪನ್ಯಾಸಕರಾಗಿದ್ದರು. ಸುಸಂಸ್ಕೃತ ವಿಚಾರಧಾರೆಯನ್ನು ಮಕ್ಕಳಿಗೆ ತಿಳಿಸುತ್ತಿದ್ದರು. ಇನ್ನೂ  ಅತಿಥಿ ಉಪನ್ಯಾಸಕರ ಗಳಾದ ಪೂಜಾ ಮೇಡಂ, ವಿದ್ಯಾ ಮೇಡಂ, ದಿವ್ಯ ಮೇಡಂ, ಲಲಿತಾ ಮೇಡಂ, ಸೌಮ್ಯ ಮೇಡಂ, ಕಾರ್ತಿಕ್ ಸರ್, ನಾಗರಾಜ್ ಸರ್, ಚೇತನಾ ಮೇಡಂ ಹೀಗೆ ಅನೇಕ ಉಪನ್ಯಾಸಕರು ಉತ್ತಮ ಸೇವೆ ಸಲ್ಲಿಸಿದ್ದಾರೆ. ಇನ್ನೂ ಸುಧೀರ್ ಅಣ್ಣ ವಿದ್ಯಾರ್ಥಿಗಳಿಗೆ  ಅಣ್ಣನಾಗಿ, ಉಪನ್ಯಾಸಕರಿಗೆ ಗೆಳೆಯನಂತೆ , ಸಹಾಯಕ ನಂತೆ ಸಹೋದರನಾಗಿ ಕಾರ್ಯ ನಿರ್ವಹಿಸಿದ್ದಾರೆ. ನಮ್ಮ ಕಾಲೇಜಿನಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ಇಂದು ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹುಡುಗರ ಕಬ್ಬಡ್ಡಿ ಮತ್ತು ಹುಡುಗಿಯರ ಖೋ ಖೋದಲ್ಲಿ  ರಾಜ್ಯ ಮಟ್ಟದಲ್ಲಿ ಭಾಗವಹಿಸಿ ದಾಖಲೆ ಮಾಡಿದ  ಗೌರವ ನಮ್ಮ ಕಾಲೇಜ್ ಗೆ ಸೀಗಬೇಕು. ನಮ್ಮ ಕಾಲೇಜಿಗೆ ಹೈಟೆಕ್ ಲ್ಯಾಬ್ ಮಂಜೂರಾಗಿದೆ. ಶಿರಸಿ ನಗರದಲ್ಲೇ ಮಾದರಿ ಪ್ರಯೋಗಾಲಯ ಇದಾಗಿದೆ. ನಮ್ಮ ಕಾಲೇಜಿನಲ್ಲಿ ಈಗ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಕಾಲೇಜಿನಲ್ಲಿ ಈ ಹಿಂದೆ NSS (ರಾಷ್ಟ್ರೀಯ ಸೇವಾ ಯೋಜನೆಯ) ನ ಘಟಕ ಇದ್ದು, ಅದರ ಕಾರ್ಯಕ್ರಮಾಧಿಕಾರವನ್ನು ಶ್ರೀ ನಾಗರಾಜ್ ಗಾಂವಕರ್ ಸರ್ ರವರು ವಹಿಸಿದ್ದರು. ಶಿರಸಿ ತಾಲೂಕಿನ ಸುಗಾವಿ, ಬಿಳೂರು, ಅಂಡಗಿ ಹಾಗೂ ಇಸಳೂರು ಈ ಸ್ಥಳದಲ್ಲಿ ವಿಶೇಷ ಶಿಬಿರವನ್ನು ಏರ್ಪಡಿಸಿದ್ದು. ಅಲ್ಲಿನ ಜನರ ಪ್ರೀತಿಗೆ ಪಾತ್ರರಾದರು... 
ಇಂತಹ ಕಾಲೇಜಿನಲ್ಲಿ ಕಲಿತ ನನಗೆ  ಪುಣ್ಯ ಕ್ಷೇತ್ರಗಳಲ್ಲಿ ನಮ್ಮ ಕಾಲೇಜು ಅಂದರೆ ಶ್ರೀ ವೆಂಕಟರಾವ್ ನಿಲೇಕಣಿ ಪದವಿ ಪೂರ್ವ ಕಾಲೇಜು ಕೂಡ ಒಂದು ಎನ್ನಲು ಹೆಮ್ಮೆಯಾಗುತ್ತದೆ. ಇಂತಹ ಉನ್ನತ ಮಟ್ಟದ ವಿದ್ಯೆ ನೀಡಿದ ನನ್ನ ಕಾಲೇಜನ್ನು ಮರೆಯಲು ಅಸಾಧ್ಯ. ಹೀಗೆ ಹಲವಾರು ಅವಕಾಶ ನಮ್ಮ ಕಾಲೇಜಿಗೆ ಬರಲಿ, ಸಾಧನೆಯ ಪಥದಲ್ಲಿ ಸಾಗಲಿ, 500- 1000,1000- ಲಕ್ಷಾಂತರ ವಿದ್ಯಾರ್ಥಿಗಳು ನಮ್ಮ ಕಾಲೇಜಿನಲ್ಲಿ ವ್ಯಾಸಂಗ ಮಾಡಲಿ ಎಂದು ನನ್ನ ಹಾರೈಕೆ. ಶಿರಸಿಯಲ್ಲಿಯೇ ಅತಿ ಎತ್ತರದಲ್ಲಿ ಇರುವ ನಮ್ಮ ಕಾಲೇಜಿಗೆ, ಸಾಧನೆಯಲ್ಲಿ ಕೂಡ ಎತ್ತರದ ಸ್ಥಾನವೇ ಸಿಗಲಿ,    .......,.. 
- ಸೌಮ್ಯ ಗಣಪತಿ ನಾಯ್ಕ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಮಗಾಗಿ ದುಡಿದ ನಾಯಕ ನಮ್ಮ ಜನಕ...

ನಮಗಾಗಿ ದುಡಿದ ನಾಯಕ ನಮ್ಮ ಜನಕ. ಅಪ್ಪ ಎಂದರೆ ಬೆಳಕು. ಅಪ್ಪನಿಂದಲೇ ಈ ಬದುಕು. ಅಪ್ಪನ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಅಪ್ಪ ಅಮ್ಮನ ಪ್ರೀತಿ ಅತ್ಯಮೂಲ್ಯವ...