ಕಳೆದ ಒಂದುವರೆ ವರ್ಷದಿಂದ ಕೋವಿಡ್-19 ವೈರಸ್ ಹರಡಿದಾಗ ಇಡೀ ವಿಶ್ವವೇ ನಲುಗಿ ಹೋಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ, ಈಗಾಗಲೇ ಬಹುತೇಕವಾಗಿ ಎಲ್ಲಾ ದೇಶಗಳಲ್ಲಿಯೂ ಕೋವಿಡ್-19 ವೈರಸ್ ವಿರುದ್ಧ ಹೋರಾಡುವ ಲಸಿಕೆಯನ್ನು ಜನರಿಗೆ ಹಾಕಿಸಿದ್ದು.
ಎಲ್ಲವೂ ಸಾಧಾರಣ ಸ್ಥಿತಿಗೆ ಬಂದಿದೆ ಎಂದು ಜನಜೀವನ ಸುಧಾರಣೆಯ ಹಾದಿಯಲ್ಲಿದೆ ಎಂದು ಹೇಳುತ್ತಿರುವಾಗಲೇ ಹೊಸ ಕೋವಿಡ್ ರೂಪಾಂತರ ಒಮಿಕ್ರೋನ್ ವೈರಸ್ ಬಂದೇ ಬಿಡ್ತು.
ಕೂರೋನಾ ವೈರಸ್ ಮೂಲರೂಪವಾಗಿರುವ ಒಮಿಕ್ರೋನ್ ವೈರಸ್ ಇದು ಮೊದಲು ದಕ್ಷಿಣ ಆಫ್ರಿಕಾದಲ್ಲಿ ಈ ಸೋಂಕು ನವೆಂಬರ್ 24- 2021ರಲ್ಲಿ ಪತ್ತೆಯಾಗಿತ್ತು.
ಒಮಿಕ್ರೋನ್ ರೂಪಾಂತರ ವೈರಸ್ ಮೂರು ರೀತಿಯಾಗಿ ಮನುಷ್ಯನ ದೇಹಕ್ಕೆ ಎಫೆಕ್ಟ್ ಮಾಡುತ್ತೆ ಅಂತಾ ಹೇಳಲಾಗಿದೆ. ಸಮಾನ ರೋಗ ಲಕ್ಷಣಗಳು, ಕಡಿಮೆ ಸಾಮಾನ್ಯ ರೋಗ ಲಕ್ಷಣಗಳು ಮತ್ತು ಗಂಭೀರ ರೋಗ ಲಕ್ಷಣಗಳ ಮೂಲಕ ಸೋಂಕಿತನ ಮೇಲೆ ಪರಿಣಾಮ ಬೀರೋ ಸಾಧ್ಯತೆ ಇದೆಯಂತೆ.
ಒಮಿಕ್ರೋನ್ ಸೋಂಕಿನ ಲಕ್ಷಣವೆಂದರೆ ಉಸಿರಾಟದ ತೊಂದರೆ ಆಗುತ್ತೆ. ಒಮಿಕ್ರೋನ್ ಸೋಂಕು ಅಪಾಯಕಾರಿಯಾಗುವುದನ್ನು ತಡೆಯುವುದು ಮುನ್ನೆಚ್ಚರಿಕೆಯಾಗಿ ಲಸಿಕೆಯನ್ನು ಪಡೆಯುವುದು ಸೂಕ್ತ ಮತ್ತು ಗಂಭೀರ ಲಕ್ಷಣಗಳು ಕಾಣಿಸಿಕೊಂಡರೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವುದು ಸೂಕ್ತ.
ಒಮಿಕ್ರೋನ್ ಸೋಂಕಿನ ಸಾಮಾನ್ಯ ಲಕ್ಷಣವೆಂದರೆ ಜ್ವರ, ಕೆಮ್ಮು, ಗಂಟಲು ನೋವು, ತಲೆನೋವು ಹಾಗೂ ಕಣ್ಣು ಬಣ್ಣಕ್ಕೆ ತಿರುಗುವುದು.
ಯಾರಿಗಾದರೂ ಜ್ವರ, ಕೆಮ್ಮು ಬಂದಿದ್ದರೆ ಯಾರು ಹೆದರಬೇಡಿ, ಚಿಕಿತ್ಸೆ ಮಾಡಿಕೊಳ್ಳಿ ಧೈರ್ಯದಿಂದ ಇರಿ, ಧೈರ್ಯ ಇದ್ದರೆ ಜೀವ ನಮ್ಮ ಕೈಯಲ್ಲಿ ಇರುತ್ತೆ, ಧೈರ್ಯ ಕಳೆದುಕೊಂಡರೆ ಜೀವ ಕಳೆದುಕೊಳ್ಳಬೇಕಾಗುತ್ತೆ, "ನಮ್ಮ ಜೀವ ನಮ್ಮ ಕೈಯಲ್ಲಿದೆ" ಅದಕ್ಕೆ ಏನೇ ಆಗಲಿ ಧೈರ್ಯದಿಂದ ಎದುರಿಸಿ.
ಈ ಒಮಿಕ್ರೋನ್ ನಿಂದ ದೂರವಿರಬೇಕಾದರೆ ನಮ್ಮ ಪ್ರಯತ್ನ ನಾವು ಮಾಡಲೇಬೇಕು, ನಮ್ಮ ದೇಹಕ್ಕೆ ನಾವು ಸುರಕ್ಷಿತವಾಗಿ ಇಟ್ಟಿಕೊಳ್ಳಬೇಕು, ಸುರಕ್ಷಿತವಾಗಿ ಹೇಗೆ ಇಟ್ಟುಕೊಳ್ಳಬೇಕೆಂದು ನಿಮಗೆ ಗೊತ್ತೇ ಇದೆ. ನಿಯಮಗಳನ್ನು ಪಾಲಿಸಲೇಬೇಕು, ಮಾಸ್ಕ್, ಸೈನಿಟೈಜರ್ ಬಳಸಲೇಬೇಕು,
ನಮ್ಮ ಪ್ರಯತ್ನ ನಾವು ಮಾಡಲೇಬೇಕು.
"ನಮ್ಮ ಪ್ರಯತ್ನ ನಾವೇ ಮಾಡೋಣ ಮುಂದೆ ಏನಾಗುತ್ತೋ ನೋಡೋಣ"
- ವೈಷ್ಣವಿ ರಾಜಕುಮಾರ್,
ಕರಕ್ಯಾಳ, ಔರಾದ, ಬೀದರ್
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಉತ್ತಮ ಲೇಖನ
ಪ್ರತ್ಯುತ್ತರಅಳಿಸಿಉತ್ತಮ ಲೇಖನ ವೈಷ್ಣವಿ.
ಪ್ರತ್ಯುತ್ತರಅಳಿಸಿ