ಭಾನುವಾರ, ಜನವರಿ 30, 2022

ಸೈನಿಕನಾಗಬೇಡ ಎಂದು ಹೇಳಬೇಡ (ಕವಿತೆ) - ಪಂಗರಗಾ ರವಿಚಂದ್ರ

ಸೈನಿಕನಾಗಬೇಡ ಎಂದು ಹೇಳಬೇಡ ನೀನು ಅವನನ್ನು
ಶತ್ರುಗಳ ರುಂಡ ಚೆಂಡಾಡುವ ಶಕ್ತಿ ಅವನ್ನಲ್ಲಿದೆ

ಸೈನಿಕನಾಗಬೇಡ ಎಂದು ಹೇಳಬೇಡ ನೀನು ನಿನ್ನ ಮಗನನ್ನು
ಭಾರತಾಂಬೆಯ ಅನೇಕ ಮಕ್ಕಳನ್ನು ಕಾಯುವ ಧೈರ್ಯ ಅವನ್ನಲ್ಲಿದೆ

ಸೈನಿಕನಾಗಬೇಕೆಂದು ಹೊರಟಿರುವವನನ್ನು ತಡೆಯಬೇಡ ನೀನು
ಭಾರತದ ಅತ್ಯುತ್ತಮ ಸೇವೆಯನ್ನು ಮಾಡಬೇಕೆಂಬ ತುಡಿತ ಅವನ್ನಲ್ಲಿದೆ

ಸೈನಿಕನಾಗಬೇಕೆಂದು ಯೋಚಿಸುವವನನ್ನು ಹುರಿದುಂಬಿಸು ನೀನು
ಕೆಲವೇ ದಿನಗಳಲ್ಲಿ ನಿನ್ನನ್ನು ಭಾರತೀಯರನ್ನು ಕಾಯಲು ಗಡಿಗೆ ಹೋಗಿ ನಿಲ್ಲುವ ತಾಕತ್ತು ಅವನ್ನಲ್ಲಿದೆ

-  ಪಂಗರಗಾ ರವಿಚಂದ್ರ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...