ಭಾನುವಾರ, ಜನವರಿ 30, 2022

ಗಜಲ್ - ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ

ಸೂರ್ಯನಿಗೂ ಒಮ್ಮೊಮ್ಮೆ ಮೋಡಗಳು ಕವಿದು ಕತ್ತಲೆಯಾಗಿರುವುದುಂಟು ಸಾಖಿ
ಚಂದಿರನೂ ಕೂಡ ಒಮ್ಮೊಮ್ಮೆ ಇರುಳನು ಜರಿದು ಕತ್ತಲೆಯಾಗಿರುವುದುಂಟು ಸಾಖಿ

ಧರಿಸಿದ ವಿಭೂತಿ ರುದ್ರಾಕ್ಷಿಮಾಲೆಯಲ್ಲಿ ಭಕ್ತಿಯು ಕತ್ತಲೆಯ ಮಡಿಯ ಮೈಲಿಗೆ
ಖಾವಿ ಕಾಶಾಯಿಯ ಕರಸ್ಥಳದಲ್ಲೂ ಕಾಮ ಕಡಿದು ಕತ್ತಲೆಯಾಗಿರುವುದುಂಟು ಸಾಖಿ

ಋಷಿಯ ತಪಸ್ಸು ಭಂಗವಾಗಿ ಮೈ ಮರೆತುದಕ್ಕೆ ಮಕ್ಕಳಾಗಿ ಅನಾಥವಾಗಿವೆ
ಕವಿದ ಮೋಡಗಳು ಬಿರುಗಾಳಿಗೆ ಹರಿದು ಕತ್ತಲೆಯಾಗಿರುವುದುಂಟು ಸಾಖಿ

ಉರಿವ ಅಗ್ನಿ ಪರ್ವತಂದೆ ದಗದಗಿಸೊ ಜೀವಾತ್ಮದ ಅರಿವಿಲ್ಲದ ಹಾದಿಗೆ
ಅಜ್ಞಾನವೇ ಆವರಿಸಿ ಅಂಧಕಾರ ಸುರಿದು ಕತ್ತಲೆಯಾಗಿರುವುದುಂಟು ಸಾಖಿ

ಸೃಷ್ಟಿಯೂ ಕೂಡ ವ್ಯತಿರಿಕ್ತಗಳ ಕತ್ತಲಲ್ಲಿ ಮೈಮರೆತು ಬೆತ್ತಲೆಯಾಗಿ ಮೌನತಾಳಿದೆ
’ನಾಣಿ’ಯ ಅವಲೋಕಿಸದ ಆತ್ಮ ಕೂಡ ಗೌವ್ವೆಂದು ಕತ್ತಲೆಯಾಗಿರುವುದುಂಟು ಸಾಖಿ
      - ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...