ಅಂಧಕಾರ ತುಂಬಿದ ಬದುಕನ್ನು ಅಂದವಾಗಿಸಿದವಳು
ಅತ್ಮಾವಿಶ್ವಾಸ ತುಂಬಿ ಬದುಕಿಗೆ ಸ್ಪೂರ್ತಿಯಾದವಳು.
ಇರುಳ ಸರಿಸಿ ಹಗಲಿನ ಹಣತೆಯಾದವಳು.
ಈಶ್ವರನಂತಹ ಸೃಷ್ಟಿಕರ್ತನಿಗೆ ಜನ್ಮದಾತೆಯಾದವಳು
ಉಪವಾಸವಿದ್ದು ನಮ್ಮ ಹಸಿವು ನೀಗಿಸಿದವಳು
ದೇವರಿಗೂ ಜನ್ಮದಾತೆ ನಮ್ಮ ಅಮ್ಮ.!
ಊಹಿಸಲಾಗದಷ್ಟು ನೋವಿದ್ದರು ನಗುವನ್ನೇ ಹಂಚುವಳು.
ಋಷಿ ಮುನಿಗಳಿಗೆಲ್ಲ ಅಶಿರ್ವಾದವಿತ್ತವಳು
ಎವರೆಸ್ಟ ಶಿಖರಕ್ಕಿಂತಲೂ ಎತ್ತರ ನಿನ್ನ.ಮಮತೆಯ ನೆರಳು.
ಏಳಿಗೆಯ ಬದುಕಿಗೆ ಪ್ರೇರಣೆಯಾದವಳು.
ಐಶ್ವರ್ಯ ತುಂಬಿದ ಸದ್ಗುಣದ ಸಾದ್ವಿ ಇವಳು!
ಅರಿವಿಗೂ ಗುರುವಾದಳು ನಮ್ಮ ಅಮ್ನ!
ಒಂಟಿ ಜೀವಕ್ಕೆ ನೂರುಪಟ್ಟು ನಂಟಾದವಳು
ಓಟದ ಇ ಹಯನಕ್ಕೆ ನಯನವಾದವಳು.
ಔದರ್ಯವೇ ಅಮ್ಮನ ನಿಸ್ವಾರ್ಥದ ಕರುಳು.
ಅಂತಃಕರಣದ ಅವಿನಾಭಾವಕ್ಕೆ ನಿನ್ನ ಆಲಿಂಗನವೇ
ಉತ್ತರ.
ಆಹಾ ತ್ಯಾಗದ ಮೂರ್ತಿಯೇ ನಿ ನನ್ನ ದೇವರು
ಕಣ್ಣರೆಪ್ಪೆಯಂತೆ ಕಾಯುವ ಕಾರುಣ್ಯಧಾಹಿನಿ ನಮ್ಮ ಅಮ್ಮ!
- ಕಾವೇರಿ ಪೋತ್ನಾಳ್
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ