"ಆನ್ ಲೈನ್"ತರಗತಿ ನಡೆಸುವ ಬಗ್ಗೆ ಪೋಷಕರಿಗೆ ಮತ್ತು ಮಕ್ಕಳಿಗೆ ಗೊಂದಲವಿದೆ, ಹಲವು ಜನರು ಹತ್ತು ವರ್ಷದೊಳಗಿನ ಮಕ್ಕಳಿಗೆ ಆನ್ಲೈನ್ ತರಗತಿ ಬೇಡ ಎಂದು ಹೇಳಿದ್ದಾರೆ,
ಎಲ್ ಕೆಜಿಯಿಂದ ಎಲ್ಲಾ ತರಗತಿ ಮಕ್ಕಳಿಗೆ ಆನ್ ಲೈನ್ ತರಗತಿ ಹೇಳುತ್ತಿದ್ದಾರೆ,
ಹತ್ತು ವರ್ಷದೊಳಗಿನ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ನೀಡುವುದರಿಂದ ಆರೋಗ್ಯದ ಮೇಲೆ ದುಷ್ಟ ಪರಿಣಾಮ ಬೀರುತ್ತದೆ,
ಅತಿಯಾದ ಕಂಪ್ಯೂಟರ್ ಮತ್ತು ಫೋನ್ ಬಳಕೆ, ಇಡೀ ಏಕಾಗ್ರತೆಯನ್ನು ಕಂಪ್ಯೂಟರ್ ಮೇಲೆ ಮತ್ತು ಫೋನ್ ಮೇಲೆ ಕೇಂದ್ರೀಕರಿಸುವುದರಿಂದ ಕಣ್ಣಿನ ದೃಷ್ಟಿ ಮೇಲೂ ಪರಿಣಾಮ ಬಿರುತ್ತದೆ.
ಈಗಾಗಲೇ ಕೆಲವು ಮಕ್ಕಳಿಗೆ ಗಾಜಿನ ಕನಕಗಳು ಹತ್ತಿವೆ,
ಆನ್ ಲೈನ್ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಅರ್ಥಮಾಡಿಕೊಳ್ಳಲು ಅತ್ಯಂತ ಕಷ್ಟವಾಗುವ ವಿಷಯ ಗಣಿತ,
ಅವರಿಗೆ ಗಣಿತ ವಿಷಯ ಶಾಲೆಯಲ್ಲಿ ಹೇಳಿದರೂ ಸ್ವಲ್ಪ ಕಷ್ಟವಾಗುತ್ತೆ ಆದರೆ ಆನ್ ಲೈನ್ ತರಗತಿಯಲ್ಲಿ ಇನ್ನೂ ಬಹಳ ಕಷ್ಟವಾಗುತ್ತದೆ.
ಕೆಲವು ವಿದ್ಯಾರ್ಥಿಗಳ ಹತ್ತಿರ ಫೋನ್ ಮತ್ತು ಕಂಪ್ಯೂಟರ್ ವಿಲ್ಲದ ಕಾರಣಕ್ಕಾಗಿ ಅವರು ಆನ್ ಲೈನ್ ತರಗತಿಗೆ ಹಾಜರಾಗಲು ಸಾಧ್ಯವಿಲ್ಲ,
ಸರಕಾರ ಟಿವಿಯಲ್ಲೂ ಕೂಡ ಕ್ಲಾಸ್ ಹೇಳಲು ಅವಕಾಶ ಮಾಡಿಕೊಟ್ಟಿದೆ ಆದರೆ ಕೆಲವು ವಿದ್ಯಾರ್ಥಿಗಳ ಹತ್ತಿರ ಫೋನ್ ಇಲ್ಲ ಕಂಪ್ಯೂಟರ್ ಇಲ್ಲ ಟಿವಿ ಇಲ್ಲ ಆದಕಾರಣ ಹಾಜರಾಗಲು ಸಾಧ್ಯವಿಲ್ಲದ ಕಾರಣಕ್ಕಾಗಿ 10ನೇ ತರಗತಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ,
ಈಗಾಗಲೇ ಈ ಘಟನೆಗಳು ನಡೆಯುತ್ತಿವೆ,
ಆನ್ ಲೈನ್ ತರಗತಿ ಕೆಲವು ವಿದ್ಯಾರ್ಥಿಗಳಿಗೆ ಸುಲಭ ಅನಿಸುತ್ತದೆ ಕೆಲವು ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತದೆ, ಆನ್ ಲೈನ್ ಕ್ಲಾಸ್ ಕೂಡ ಒಳ್ಳೆಯದೇ ಯಾರೂ ಗದ್ದಲ ಮಾಡುವುದಿಲ್ಲ
ಆದರೆ ನಾವು ಒಬ್ಬರೇ ಕುಳಿತು ಕೇಳುವುದು ಮತ್ತು ಎಲ್ಲರೂ ಒಟ್ಟಿಗೆ ಕುಳಿತು ಕೇಳುವುದು ವ್ಯತ್ಯಾಸವಿರುತ್ತದೆ, ಒಟ್ಟಿಗೆ ಕುಳಿತು ಕೇಳುವುದರಲ್ಲಿ ಗದ್ದಲ ಇರುತ್ತೆ ಆದರೆ ಶಿಕ್ಷಕರು ಹೇಳಿದ ಪಾಠವನ್ನು ಚೆನ್ನಾಗಿ ಅರ್ಥವಾಗುತ್ತೆ, ಏಕೆಂದರೆ ಶಿಕ್ಷಕರು ನಮ್ಮ ಎದುರುಗಡೆ ಇರುತ್ತಾರೆ,
ನಾವೆಲ್ಲರೂ ಒಟ್ಟಿನಲ್ಲಿ ಶಾಲೆಯ ವಾತಾವರಣದಲ್ಲಿ ಶಿಕ್ಷಣ ಕಲಿಯುತ್ತಿದ್ದರೆ ಎಷ್ಟು ಚೆನ್ನಾಗಿರುತ್ತೆ.
- ವೈಷ್ಣವಿ ರಾಜಕುಮಾರ್
ಗೊಡಂಪಳ್ಳೆ
ಊರು: ಕರಕ್ಯಾಳ
ತಾಲೂಕಾ: ಔರಾದ್
ಜಿಲ್ಲಾ: ಬೀದರ್.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಒಳ್ಳೆ ಸಂದೇಶ
ಪ್ರತ್ಯುತ್ತರಅಳಿಸಿ