ಗುರುವಾರ, ಜನವರಿ 27, 2022

ವರ್ಷದ ಮೊದಲ ಹಬ್ಬ (ಕವಿತೆ) - ಶ್ರೀ ಶಿವಮೂರ್ತಿ.ಟಿ ಕೋಡಿಹಳ್ಳಿ

ವರ್ಷದ ಮೊದಲ ಹಬ್ಬ
ನಮ್ಮ ಸಂಕ್ರಾಂತಿ ಹಬ್ಬ 
ಎಳ್ಳು ಬೆಲ್ಲದ ಹಬ್ಬ
ಎಳ್ಳ್ಳು ಬೆಲ್ಲವನ್ನು ಬೆರಸಿ ಪ್ರೀತಿ ಸ್ನೇಹಗಳ ಹಂಚುವ ಹಬ್ಬ
ನಮ್ಮ ಈ ಸಂಕ್ರಾಂತಿ ಹಬ್ಬ..

 ಸಕ್ಕರೆ ಅಚ್ಚುಗಳು, ಹಣ್ಣು ಮತ್ತು ಕಬ್ಬಿನ ತುಂಡುಗಳನ್ನು
ಇಡುವ ಹಬ್ಬ..
ಕತ್ತರಿಸಿದ ಬೆಲ್ಲ, ಒಣ ಕೊಬ್ಬರಿ, ಹುರಿಗಡಲೆ, ಕಡಲೇಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳು ಇವೆಲ್ಲವುಗಳ ಮಿಶ್ರಣವೇ ನಮ್ಮ ಹೆಮ್ಮೆಯ  ಹಬ್ಬ.. 

 ರೈತರಿಗೆ ಖುಷಿಯ ಹಬ್ಬ..
ಮಕ್ಕಳ ಸುಗ್ಗಿಯ ಹಬ್ಬ.  
ಪುಟ್ಟ ಮಕ್ಕಳ ಸಂಭ್ರಮದ ಹಬ್ಬ
ಬಣ್ಣ ಬಣ್ಣದ ಚಿತ್ತಾರಗಳ ಹಬ್ಬ
ರಂಗು ರಂಗಿನ ರಂಗೋಲಿ ಗಳ  ಹಬ್ಬ ..ನಮ್ಮ ಈ  ಸಂಕ್ರಾತಿಯ ಹಬ್ಬ.. 

 ಹೊಸ ಬಟ್ಟೆಗಳ ಧರಿಸಿ
ಚಿಣ್ಣರು ಸಂಭ್ರಮಿಸುವ ಹಬ್ಬ..
ಪ್ರೀತಿ ಪ್ರೇಮ ಬಾಂಧವ್ಯ ಬೆಸೆಯುವ ಹಬ್ಬ.. 
ಎಳ್ಳುಬೆಲ್ಲ ಹಂಚುತ್ತಾ ಸಂಬಂಧಗಳ ಗಟ್ಟಿಗೊಳಿಸುವ ಹಬ್ಬ..
ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡೋಣ..
ನಾಡಿಗೆಲ್ಲ ಒಳ್ಳೆಯ ಸಂದೇಶ ಸಾರೋಣ..

 ಎಲ್ಲರೂ ಸೇರಿ ಹಾಡಿ ಕುಣಿಯುವ ಹಬ್ಬ..
ಭಕ್ಷ್ಯ ಭೋಜನಗಳನ್ನು ಸವೆಯುವ ಹಬ್ಬ..
ಹಸು ಗೋಮಾತೆ ಗಳನ್ನ     ಸಿಂಗರಿಸಿ ಪೂಜಿಸುವ ಹಬ್ಬ..
ಇದುವೇ ನಮ್ಮ ಸಂಕ್ರಾಂತಿ ಹಬ್ಬ..

 ನಮ್ಮ ಕನ್ನಡ ನಾಡಿನ ಹೆಮ್ಮೆಯ ಹಬ್ಬ..
ನಮ್ಮ ಆಚಾರ ವಿಚಾರ ಸಂಸ್ಕೃತಿಯ ಯಾನ್ನು ಉಳಿಸುವ ಹಬ್ಬ..
ಮುತೈದೆಯರಿಗೆ ಬಾಗಣ 
ನೀಡುವ ಹಬ್ಬ..
ಮಕರ ಸಂಕ್ರಾಂತಿ ಹಬ್ಬದ ಲ್ಲಿಯೇ 
ನಮ್ಮ ಅಯ್ಯಪ್ಪ ಸ್ವಾಮಿಯ
ಜ್ಯೋತಿಯು ಎಲ್ಲೆಡೆ ಬೆಳಗುವ ಹಬ್ಬ..
ಇದುವೇ ವರ್ಷದ ಮೊದಲ ಹಬ್ಬ..
ನಮ್ಮ  ಹೆಮ್ಮೆಯ  ಹಬ್ಬ
ಮಕರ ಸಂಕ್ರಾಂತಿ ಹಬ್ಬ..

✍️ ಶ್ರೀ ಶಿವಮೂರ್ತಿ.ಟಿ ಕೋಡಿಹಳ್ಳಿ 
ಚಳ್ಳಕೆರೆ ತಾ, ಚಿತ್ರದುರ್ಗ ಜಿಲ್ಲೆ..
 # 09742756304 

6 ಕಾಮೆಂಟ್‌ಗಳು:

  1. ಸರ್
    ತುಂಬಾ ಚನಾಗಿದೆ ನಿಮ್ಮ ಪದ್ಯದ ಸಾಲುಗಳು.....
    ಈಗೆ ಮುಂದುವರೆಯಲಿ ನಿಮ್ಮ ಕವಿತೆಗಳು...
    ಕೋಟೆ ನಾಡಿನ ಅಧ್ಬುತ ಕವಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು....

    ಪ್ರತ್ಯುತ್ತರಅಳಿಸಿ
  2. ಸುಂದರ ವರ್ಣನೆ ಗಳಿಂದ ಕೂಡಿದ ಅರ್ಥಗರ್ಬಿತ ವಾದ ಪದ ಸಾಲುಗಳ ಉತ್ತಮ ಸಂಕ್ರಾಂತಿ ಕವನ ಸರ್....
    ಮುಂದಿನ ದಿನಗಳಲ್ಲಿ ನಿಮ್ಮ ಕವಿತ್ವ ಇನ್ನಷ್ಟು ಉತ್ತುಂಗಕ್ಕೇರಲಿ ಸರ್

    ಪ್ರತ್ಯುತ್ತರಅಳಿಸಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...