ಬದಲಾವಣೆಯ ಪರ್ವ ಕಂಡರೀಯದ
ಗಾಂಧಿ-ಅಂಬೇಡ್ಕರ್ ಸಮಾಜ ಸುಧಾರಕರ ತತ್ವ-ಸಿದ್ಧಾಂತಗಳು ವೈಚಾರಿಕತೆಗಳು ಇನ್ನು ಸಮಾಜವನ್ನು ಸ್ಪರ್ಶಿಸದೆ ಇದ್ದ ಕಾಲಮಾನವದು.
ಸ್ತ್ರೀ ಸಂಕುಲವನ್ನು ಗೊಡ್ಡು ಸಂಪ್ರದಾಯದ ಸಂಕೋಲೆಯಲ್ಲಿ ಬಂಧಿಸಿ ಶೋಷಣೆ ದೌರ್ಜನ್ಯ ಬಾಲ್ಯ ವಿವಾಹ,ಸತಿಪದ್ದತಿಯೆಂದು ಹಿಂಸಿಸುವ ಕಾಲಘಟ್ಟದಲ್ಲಿ ನವಯುಗದ ಪ್ರವರ್ತಕಿ ಯಾಗಿ ಬಂದು ಅವೆಲ್ಲವನ್ನು ಧಿಕ್ಕರಿಸಿ ಹೋರಾಡಿದ ಹೋರಾಟಗಾರ್ತಿ ನೀವು.
ಪುರುಷಪ್ರಧಾನ ಸಮಾಜದಲ್ಲಿ ಹೆಣ್ಣೆಂದರೆ ಹೆರುವ ಹೊರುವ ಪೊರೆಯುವ ಕೊನೆಮೊದಲಿಲ್ಲದ ಯಂತ್ರದಿಂದ ಮುಕ್ತಗೊಳಿಸಿ ಸ್ತ್ರೀ ಶಿಕ್ಷಣಕ್ಕೆ ರಹದಾರಿ ಹಾಕಿ, ಸ್ತ್ರೀ ಅಬಲೆಯಲ್ಲ ಸಬಲೆ, ಸಮಾಜದ ಕಣ್ಣು,ಎಂದು ಸಾಧಿಸಿ ತೋರಿಸಿದ ಮಹಾನ್ ಸಾದಕಿ ನೀವು.
ಜಾತಿ-ಮತ ಲಿಂಗಭೇದ ತೊರೆದು ನಾವೆಲ್ಲರೂ ದೇವರ ಮಕ್ಕಳು ನಮಗೆ ಯಾವ ಮಧ್ಯವರ್ತಿಯು ಬೇಕಿಲ್ಲ ಮೇಲು ಕೀಳು ಎಂಬುದಿಲ್ಲ ಅಸ್ಪೃಶ್ಯತೆ ಯೂ ಇಲ್ಲ ಎಂದು ಪುರೋಹಿತಶಾಹಿಯ ವಿರುದ್ಧ ಸಿಡಿದೆದ್ದ ಸತ್ಯಶೋಧಕಿ ನೀವು.
ತ್ಯಾಗ ಸೇವೆ ಶ್ರದ್ಧೆ ಆಧ್ಯಾತ್ಮಿಕತೆಯನ್ನು ಗುರಿಯಾಗಿಸಿಕೊಂಡು ಕಲಿತ ವಿದ್ಯೆಯನ್ನು ಅನೇಕ ಶಾಲೆಗಳ ತೆರೆದು ಎದೆಗುಂದದೆ ಧೈರ್ಯವಾಗಿ ಸಮಾನ ಮುಕ್ತ ಆಧುನಿಕ ಶಿಕ್ಷಣ ನೀಡಿದ ಮಹಾ ವನಿತೆ ಶಿಕ್ಷಣ ತಜ್ಞೆ ನೀವು.
ಎದುರಾದ ಕಷ್ಟಕಾರ್ಪಣ್ಯಗಳನ್ನು ಲೆಕ್ಕಿಸದೆ ಛಲದಿಂದ ಹೆದರಿಸಿ ಗಾಳಿಗೆ ತೂರಿ ಬರುವ ಸಗಣಿ ಕಲ್ಲುಗಳನ್ನು ಹೂವುಗಳಾನ್ನಗಿಸಿ ಕೊಂಡು ಶಿಕ್ಷಣ ವೈಚಾರಿಕತೆ ಜಾತ್ಯತೀತ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಕ್ರಾಂತಿಜ್ಯೋತಿ ನೀವು.
ಅಕ್ಷರದವ್ವ ಅಕ್ಕರೆಯ ದವ್ವ ಶಿಕ್ಷಕಿ ಸಂಚಾಲಕಿ ಹೋರಾಟಗಾರ್ತಿ ಭಾರತದ ಮೊಟ್ಟ ಮೊದಲ ಶಿಕ್ಷಕಿ, ಧಣಿವರಿಯದ ಸತ್ಯಶೋಧಕಿ, ಆಧುನಿಕ ಶಿಕ್ಷಣದ ಮಹಾಮಾತೆ ಸಾವಿತ್ರಿಬಾಯಿ ಪುಲೆ ನಿಮಗೆ ಪದ ಸ್ವರ ಭಾವಗಳ ನಮನ ಹೃನ್ಮಗಳ ಗೌರವಪೂರ್ವಕ ನಮನ.
- ಎಸ್ ಕೆ ಕರಿಯಮ್ಮ ತಿಪ್ಪೇಸ್ವಾಮಿ.ಸ ಶಿ M A. M Ed.
ಸ ಹಿ ಪ್ರಾ ಶಾಲೆ.
ಚಿತ್ರಯೈನಹಟ್ಟಿ.
ಚಳ್ಳಕೆರೆ. ಉತ್ತರ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ