ಶನಿವಾರ, ಜನವರಿ 1, 2022

ದಾರಿ ತಪ್ಪಿದ ಮನ (ಕವಿತೆ) - ಮೊಹಮ್ಮದ್ ಅಜರುದ್ದೀನ್.

ಹೃದಯ ಎಂಬ ತೊಟ್ಟಿಲಿನಲ್ಲಿ  
ಕೂಸಿನ ಹಾಗೆ ನಾನು ಮಲಗಿರುವೆ  
ಪ್ರೀತಿ ಎಂಬ ಜೋಗುಳವ ಹಾಡುತ್ತಾ  
ನೀನೇಕೆ ನನ್ನನ್ನು ದ್ವೇಷಿಸುತ್ತಿರುವೆ?

ನನ್ನ ಹೃದಯ ಗೀತೆಗೆ ಸ್ವರ ಆಗಬೇಕಿತ್ತು  
ಪ್ರೀತಿ ಎಂಬ ನಾಟಕದಲ್ಲಿ ಅಪಸ್ವರವಾದೆ
ಆದರೂ ನಾನು ಹೃದಯ ಗೀತೆಯ ಹಾಡುವೆ
ನನ್ನ ಉಸಿರು ಇರುವವರೆಗೂ ನಿನಗಾಗಿ ಹಾಡುವೆ.

ಮನಸ್ಸಿನಿಂದ ಹೋದವಳ ನೆನೆಯುತ್ತಿದೆ ಈ ಮನ
ಬೇಡವೆಂದರೂ ಬೀಳುತ್ತಿದೆ ಹಗಲುಗನಸು  
ಎಲ್ಲಿರುವೆ ಎಂದು ಹೇಳಿ ಸಹಕರಿಸು  
ತೋರಬೇಡ ನೀನು ಹೃದಯದ ಮುನಿಸು.

ಮರೆತಿರುವೆ ನಾನು ನನ್ನ ದಾರಿಯನ್ನು  
ದಾರಿ ತೋರ ಬೇಕಿರುವವಳೇ ನೀನು  
ಏಕೆ ತೋರಿದೆ ತಪ್ಪು ದಾರಿಯನ್ನು  
ಸರಿಮಾಡು ನೀನು ನನ್ನ ಜೀವನವನ್ನು.

- ಮೊಹಮ್ಮದ್ ಅಜರುದ್ದೀನ್
ಯುವಸಾಹಿತಿ
ಅಕ್ಕಿಹೆಬ್ಬಾಳು ಗ್ರಾಮ
ಕೃಷ್ಣರಾಜಪೇಟೆ ತಾಲ್ಲೂಕು
ಮಂಡ್ಯ ಜಿಲ್ಲೆ-571605.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...