ದ್ವೇಷದ ಬೆಂಕಿ ಹತ್ತಿ ಉರಿಯುತ್ತಿದೆ ರಕುತ ಯಾರದು
ಭೇದ ಭಾವದ ಕಿಚ್ಚು ಗಗನ ಮುಟ್ಟುತ್ತಿದೆ ರಕುತ ಯಾರದು
ಸೌದೆಯಂತೆ ನೊಗ ನೀಡುತ್ತಿರುವರು ಬುದ್ಧಿಹೀನರು
ಅಹಮಿನ ತುಪ್ಪ ಸುರಿಯುತ್ತಿದೆ ರಕುತ ಯಾರದು
ಧರ್ಮ ಜಾತಿಯ ಭ್ರಮೆ ಕಳೆ ಕೀಳಬೇಕಾಗಿದೆ
ಭಾವೈಕ್ಯತೆಯ ಫಸಲು ಕಾಣದಾಗುತ್ತಿದೆ ರಕುತ ಯಾರದು
ಹಿಜಾಬ್ ಕೇಸರಿ ಬಿಟ್ಟು ವಿದ್ಯಾ ತಪೋವನ ಸೇರಬೇಕಿದೆ
ಹೆತ್ತವರ ಅಸಹಾಯಕತೆ ಚೀರುತ್ತಿದೆ ರಕುತ ಯಾರದು
ಸಮಾನತೆಯ ಕರುಳಿಗೆ ಕೊಳ್ಳಿಯಿಟ್ಟವರು ಯಾರು "ಮಾಜಾ "
ಧರೆಯೇ ಬೇಗೆಯಲ್ಲಿ ಬೇಯುತ್ತಿದೆ ರಕುತ ಯಾರದು
- ಮಾಜಾನ್ ಮಸ್ಕಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಚೆನ್ನಾಗಿದೆ💐🙏
ಪ್ರತ್ಯುತ್ತರಅಳಿಸಿ