ಮರದೆಲೆಯು ಒಣಗಿ ಚಿಗುರಾವೆ ತಿರುಗಿ
ಹೊಸ ಉಡುಪು ಧರಿಸಿ ನಿಂತಾವೆ ಮರಿಗಿ
ಕಣ್ಣರಳಿಸಿ ನೋಡು ತಂಪಾವ ಇನ್ನು
ಖುಷಿಯಾಗಿ ಅಂತು ಮೈನೆರೆದೆನು ಎಂದು
ಚಿಗುರಿಲೆಯ ಮೇಲೆ ಮನಸ್ಸಾಯಿತು ಇಬ್ಬನಿಗೆ
ಕೂಡೋಣ ಇಬ್ಬರೂ ನಾವೆಂದಿತು ಎಲೆಗೆ
ನಿನ್ನ ಸೌಂದರ್ಯಕ್ಕೆ ನಾಚಿ ಜಾರಿ ಬಿದ್ದಿತು ಹನಿಯು ನೆಲಕ್ಕೆ
ಬರುವನು ಸೂರ್ಯ ಕೆಂಗಣ್ಣ ಬಿಡುತ
ಸುಡುವನೆಂದು ಭಯಪಟ್ಟು ಅಡಗಿ ಮಣ್ಣೊಳಗ ಕುಂತಿತ
ಕರುಳ ಬಳ್ಳಿಯ ಹರಿದು ಬೀಸಾಡಿದರೆ ಮರವು
ನೀನುದುರಿ ನದಿಯೊಳು ಬಿದ್ದರೆ ಸಾಗುವೆ ದೋಣಿಯಂತೆ
ನಿನಗ್ಯಾವ ಅಂಬಿಗನ ಬೇಕಿಲ್ಲ ಆಗ
ತೊಡೆಗೋಡೆಯು ನಿರ್ಮಿಸುವರು ಯಾರಿಲ್ಲ ನಿನಗ
ನೆಲದೊಳಗೆ ಹುದುಗಿ ಫಲವತ್ತತೆಯ ಕೊಟ್ಟು
ಇಳುವರಿಯ ತರುವಲ್ಲಿ ರೈತನಿಗಾದೆ ನೀನಾಸರೆ
ಮರದಡಿಗೆ ನೆರಳರಿಸಿ ಬಂದವರಿಗೆ ದಣಿವಾರಿಸಿದೆ
ನೀನುದುರಿ ಬಿದ್ದರೆ ಕಳೆದೋಗುವುದು ಮರದಂದವು
ನಿನ್ನ ತಾಯಿಗೆ ಮೊದಲು ನೀನುಟ್ಟುವೆ
ಮಿಕ್ಕವರಿಗೆ ಬರಲು ಚಾನ್ಸ್ ಕೊಡುವೆ
ನಿನ್ನ ಬಿಟ್ಟು ಉಳಿದವರನ್ನು ಕೊಲ್ಲುವರು ಮನವೇ
ಕೊನೆಗೊಮ್ಮೆ ಯಾರಿಗೂ ಭಾರವಾಗದೇ ನೀ ಸಾಯುವೆ
- ಬಿ.ಹೆಚ್.ತಿಮ್ಮಣ್ಣ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ