ಕೋಟ ಗ್ರಾಮದಲ್ಲಿ ಉದಯಿಸಿದವರು
ಶೇಷ ಕಾರಂತ ಲಕ್ಷ್ಮಿಯರ ತನಯರಿವರು
ಜ್ಞಾನದ ಕಣಜವಾಗಂದು ಮಿನುಗಿದವರು
ಬದುಕಿನ ಅನುಭವದಿಂದ ಹೆಚ್ಚು ಕಲಿತವರು
ಗಾಂಧೀಜಿಯ ಅಸಹಕಾರ ಚಳುವಳಿಗಂದು
ಸ್ವತಃ ಓಗೊಟ್ಟು ಕಾಲೇಜು ತೊರೆದವರಂದು
ಸ್ವಾತಂತ್ರ್ಯ ಸಂಗ್ರಾಮದಲ್ಲಿ ದುಮುಕಿದವರು
ವೈವಿಧ್ಯೆತೆಯಡೆಗೆ ದೃಷ್ಟಿಯನು ಹರಿಸಿದವರು
ಬದುಕು ಬರಹಗಳೆರಡು ಒಂದೇ ಎಂದವರು
ಸ್ವಾನುಭವದಲ್ಲಿಯೇ ಬರೆಯುತ ಸಾಗಿದವರು
ಅಂಧಕಾರದಲ್ಲಿರುವರ ಕಣ್ಣನು ತೆರಿಸಿದವರು
ಸುಂದರ ಬದುಕಿಗೆ ದಾರಿಯ ತೋರಿದವರು
ಖಾದಿ ಸ್ವದೇಶಿ ವಿಚಾರಗಳ ಪ್ರಚಾರಗೈದವರು
ಸರ್ವ ವಿಧದಲ್ಲೂ ಸಾಹಿತ್ಯವನು ರಚಿಸಿದವರು
ಸಮಯದ ಮಹತ್ವ ಕಾರ್ಯದಲಿ ತಿಳಿಸಿದರು
ಯಾರಿಗೂ ಕಾಯಿಸದ ಸಮಯ ಪಾಲಕರು
ಕಡಿಮೆಯಿದ್ದವನಂದು ತೆಗೆದುಕೊಂಡನೆಂದು
ಕಳ್ಳನಿಗೂ ಕನಿಕರವನು ತೋರಿದವರಂದು
ಔದಾರ್ಯದ ಪ್ರತೀಕವಾಗಿ ಬಾಳಿದವರು
ನಮ್ಮ ನಾಡು ಕಂಡ ಮಹಾನ ಚೇತನಯಿವರು
ಯಕ್ಷಗಾನ ಕಲೆ ಜಗತ್ತಿಗೆ ಪರಿಚಯಿಸಿದವರು
ಗೆಜ್ಜೆ ಕಟ್ಟಿ ಕುಣಿದಂತ ಸರಳ ವ್ಯಕ್ತಿಯಿವರು
ಜ್ಞಾನ ಪೀಠ ಪ್ರಶಸ್ತಿ ಪಡೆದಂತ ಸಾಧಕರಿವರು
ನಡೆದಾಡುವ ವಿಶ್ವಕೋಶ ನಮ್ಮ ಕಾರಂತಜ್ಜರು
- ಸೂಗಮ್ಮ ಡಿ. ಪಾಟೀಲ್,
ಉತ್ನಾಳ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ