ಕಿತ್ತೂರ ರಾಣಿ ಚೆನ್ನಮ್ಮಾ
ಸಾಹಸ,ಪರಾಕ್ರಮದ ವೀರಮ್ಮಾ
ಕನ್ನಡಿಗರ ಹೆಮ್ಮೆಯ ನಮ್ಮಮ್ಮಾ.
ತೆಗೆದುಕೊಂಡಳು ಮಗುವನ್ನು ದತ್ತು
ಬ್ರಿಟಿಷರು ತಂದರು ಅದಕ್ಕೆ ಆಪತ್ತು
ಚೆನ್ನಮ್ಮಾ ನುಡಿದಳು ಅದು ನನ್ನ ಸ್ವತ್ತು.
ಬ್ರಿಟಿಷರು ಸಾರಿದರು ಯುದ್ಧ
ಅಮ್ಮಾ ನುಡಿದಳು ನಾವು ಸಿದ್ದ
ವೀರವಣಿತೆ ಘೋಷಿಸಿದಳು ಗೆಲುವು ಶತ ಸಿದ್ದ.
ಜೊತೆಯಾಗಿ ನಿಂತರು ಯೋಧರು
ಕಿತ್ತೂರು ಗಾಗಿ ಪ್ರಾಣ ತ್ಯಾಗ ಮಾಡದರು ಶೂರರು
ನೆತ್ತರ ಹರಸಿ ಜಯವಾದರು.
ಪರಕಿಯರು ರೂಪಿಸಿದರು ಸಂಚು
ಅಮ್ಮಾ ಆದಳು ಗುಡಗು,ಸಿಡಿಲಿನ ಮಿಂಚು
ವೀರಾವೇಷದಿಂದ ಹಿಡಿದಳು ಕ್ಯೆಯಲ್ಲಿ ಮಚ್ಚು.
ಆಳಿಸಿದಳು ವೀರ,ಭಂಟರ ಸಂದೇಶ
ಪಣತೊಟ್ಟಲು ವ್ಯೆರಿಗಳ
ಸರ್ವನಾಶ
ಕೂಗಿದಳು ಹರ,ಹರ, ಮಹಾದೇವ ಉಪದೇಶ.
- ಕಾಡಪ್ಪಾ ಮಾಲಗಾಂವಿ, ಶಿರೋಳ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ