ಶನಿವಾರ, ನವೆಂಬರ್ 26, 2022

ದರ್ಪಣ ಸುಂದರಿ (ಕವಿತೆ) - ಮಧುಮಾಲತಿ ರುದ್ರೇಶ್.

ನೂರು ಭಾವ ಮೇಳೈಸಿದೆ ವದನದಲಿ
 ಚೆಲುವಿಗೆ ದರ್ಪಣವೇ ನಾಚುತಿಹುದು ನೋಡಿಲ್ಲಿ

 ಡಂಕಣ ಜಕಣರ ಮನೋ ಭೂಮಿಕೆಯ ಮದನಿಕೆ
 ಶಿಲ್ಪಿಗಳ ಕೈಯಲ್ಲರಳಿದ ದರ್ಪಣ ಶಿಲಾಬಾಲಿಕೆ 

ಸಾವಿರ ಶಿಲ್ಪಗಳಲಿ ಮನ ಸೆಳೆವ ದರ್ಪಣಸುಂದರಿ
 ಕಲಾರಸಿಕರಿಗೆ ಸ್ಪೂರ್ತಿ ಚಿಲುಮೆ ಕಾವ್ಯ ಮಯೂರಿ

 ನಾಟ್ಯರಾಣಿ ಶಾಂತಲೆಯೇ ಶಿಲೆಯಾಗಿ ನಿಂತಿಹಳು
 ಸುರಲೋಕದಪ್ಸರೆಯೇ ಈ ಅಂದಕೆ ನಾಚುತಿಹಳು

 ಶಿಲೆಯೊಳ್ ಕಲೆಯರಳಿಸಿ ನಿಂದ ಬೇಲೂರ ಬಾಲೆ
 ಶಿಲ್ಪಕಲಾ ಗುಡಿಯೊಳು ಅರಳಿರುವ ಜಾಜಿ ಮಲ್ಲೆ
 - ಮಧುಮಾಲತಿ ರುದ್ರೇಶ್, ಬೇಲೂರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...