ಶನಿವಾರ, ನವೆಂಬರ್ 5, 2022

ನನ್ನದು ಕನ್ನಡ ನಾಡು (ಕವಿತೆ) - ಹನುಮಂತ ದಾಸರ, ಹೊಗರನಾಳ.

ನನ್ನದು ಕನ್ನಡ ನಾಡು ರತ್ನತ್ರಯರ ಬೀಡು
ಕುವೆಂಪು ಬೇಂದ್ರೆಯವರ ನಾಡು ಜ್ಞಾನ ಪೀಠಗಳ ಬೀಡು
ಕವಿ ಸಾಹಿತಿಗಳ ಸ್ವಚ್ಛ ಅಂದದ ನಾಡು.....!

ನನ್ನದು ಕನ್ನಡ ನಾಡು ಸುಂದರ ಕವಿ ಕಲೆಯಾಗರಗಳ ಬೀಡು
ಸಿಹಿ ಸಕ್ಕರೆಯ ನಾಡು ನದಿ ಸರೋವರಗಳ ಬೀಡು
ಪ್ರೀತಿ ಪ್ರೇಮ ಸ್ನೇಹ ಸಂಬಂಧಗಳ ನಾಡು.....!

ನನ್ನದು ಕನ್ನಡ ನಾಡು ಶಾಲ್ಮಲೆಯು ಹರಿಯುವ ನಾಡು
ಕಾವೇರಿ ಶರಾವತಿ ತುಂಗೆಯ ಬೀಡು ವಿಶ್ವವಿದ್ಯಾಲಯಗಳ ನಾಡು
ವಿಶ್ವವಿಖ್ಯಾತಿ ಇತಿಹಾಸಿಕ ಕಟ್ಟಡಗಳ ಬೀಡು......!

ನನ್ನದು ಕನ್ನಡ ನಾಡು ಸಂಗೀತ ಸ್ವರಗಳ ನಾಡು
ವನಸಿರಿಗಳ ಶ್ರೀಗಂಧದ ಬೀಡು ಸಂಹ್ಯಾದ್ರಿ ಪರ್ವತಗಳ ನಾಡು
ಅರಮನೆ ಬೃಂದಾವನಗಳ ಬೀಡು......!

ನನ್ನದು ಕನ್ನಡ ನಾಡು ಪ್ರಮುಖ ರಾಜಮನೆತನಗಳ ಬೀಡು
ರಂಗಮಂದಿರಗಳ ನಾಡು ಕಲೆ ಸಾಂಸ್ಕೃತಿಕ ಸಂಪ್ರದಾಯಗಳ ಬೀಡು, ರಾಜ ರಾಜಕಾರಣಿಗಳ ನಾಡು......!

ನನ್ನದು ಕನ್ನಡ ನಾಡು  ವಚನ ಭಂಡಾರಗಳ ಬೀಡು
ಹಲ್ಮಿಡಿ ಶಾಸನದ ನಾಡು ಸುವರ್ಣ ನಗರಗಳ ಬೀಡು
ಕರುಣಾಮಯಿಗಳ ನಾಡು......!

ನನ್ನದು ಕನ್ನಡ ನಾಡು ಧಾರ್ಮಿಕ ಕ್ಷೇತ್ರಗಳ ನಾಡು
ಬೆಟ್ಟ ಗುಡ್ಡ ಗುಹಾಲಯಗಳ ಬೀಡು ಆಕಾಶಕಾಯಗಳ ಜ್ಞಾನಿ ವಿಜ್ಞಾನಿಗಳ ನಾಡು, ಶಾಖೋತ್ಪನ್ನ ಕೇಂದ್ರಗಳ ಬೀಡು......!

ನನ್ನದು ಕನ್ನಡ ನಾಡು ಸಿರಿ ಸಂಪತ್ತಿನಲಿ ಮೆರೆದ ನಾಡು
ವಜ್ರ ವೈಡೋರ್ಯಗಳ ನಾಡು ಸರ್ವ ಜನಾಂಗದ ಶಾಂತಿಯ ನಾಡು, ವಿಶ್ವದೆಲ್ಲೆಡೆ ಕನ್ನಡದ ಕಂಪನ್ನು ಸಾರಿದ ನಾಡು.....!
- ಹನುಮಂತ ದಾಸರ, ಹೊಗರನಾಳ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...