ಶನಿವಾರ, ಡಿಸೆಂಬರ್ 10, 2022

ವಿಧಿಯ ಲೆಕ್ಕಣಿಕೆ (ಸಣ್ಣ ಕತೆ) - ಮಂಜುನಾಥ ಬ ಮೇಟಿ.

ಹತಾಶೆಗೊಂಡ ಮನಸ್ಸು ಅತಂತ್ರವಾದ ಭವಿಷ್ಯದ ಬಗ್ಗೆ ಹೆದರುವುದು ಸಾಮಾನ್ಯ. ನಮ್ಮೊಂದಿಗಿರುವ ಈ ಕ್ಷಣದ ಬೆಳಕನ್ನು ಮರೆತು ಕತ್ತಲಲ್ಲಿ ಹೇಗೆ ಸಾಗುವುದು ಎಂದು ಕಂಗಾಲಾಗುವುದು ಸ್ವಾಭಾವಿಕ. ನಾವು ಮಾಡದ ತಪ್ಪಿಗೂ ನಾವು ಅಪಾರ ಬೆಲೆ ಕಟ್ಟುವಂತಹ ಪ್ರಸಂಗಗಳು ನಮ್ಮ ಬದುಕಿನಲ್ಲಿ ಯಾವುದೆ ಕ್ಷಣದಲ್ಲಾದರೂ ಅಪ್ಪಳಿಸಬಹುದು.ಆದರೆ ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲು ಕೂಡಾ ನಾವು ನಮ್ಮತನವನ್ನು ಕಳೆದುಕೊಳ್ಳದೆ ದೇವರ ಆಟದಲ್ಲಿ ಮುಂದುವರಿಯಬೇಕು ಎಂದು ಶ್ರೇಷ್ಠರಾದ ಡಿ.ವಿ.ಜೆ ಯವರು ತಮ್ಮ ಕವಿತೆಯಲ್ಲಿ ಹೀಗೆ ಅದ್ಬುತವಾಗಿ ಹೇಳಿದ್ದಾರೆ.
                                  ಇನ್ನೇನು ಮತ್ತೇನು ಗತಿಯೆಂದು ಬೆದರದಿರು।
                                   ನಿನ್ನ ಕೈಯೊಳಗಿಹುದೆ ವಿಧಿಯ ಲೆಕ್ಕಣಿಕೆ॥
                                   ಕಣ್ಣಿಗೆಟುಕದೆ ಸಾಗುತಿಹುದು ದೈವದ ಸಂಚು।
                                    ತಣ್ಣಗಿರಿಸಾತ್ಮವನು – ಮಂಕುತಿಮ್ಮ

ಮೇಲಿನ ಸಾಲುಗಳಿಗೆ ಅರ್ಥವನ್ನು ನನ್ನ ಶೈಲಿಯಲ್ಲಿ ಕಥೆಯ ಮುಖಾಂತರ ಪ್ರಸ್ತುತ ಪಡಿಸುವ ಪ್ರಯತ್ನ.  

ರಾಮಪ್ಪ ಮತ್ತು ಸಂಗೀತಾ ದಂಪತಿಗಳಿಗೆ ಅವನಿ ಮತ್ತು ಸುರಜ ಎಂಬ ಮುದ್ದಾದ ಮಕ್ಕಳಿದ್ದರು.ತಂದೆ -ತಾಯಿ ಇಬ್ಬರಿಗು ಮಕ್ಕಳಿಗೆ ಎಲ್ಲ ಸೌಕರ್ಯಗಳನ್ನು ಕೊಡಬೇಕೆಂಬ ಹಂಬಲವಿದ್ದರೂ ಬಡತನ ಬೇಲಿ ಹಾಕಿತ್ತು.ಬಡತನವಿದ್ದದ್ದು ಬದುಕಿಗೆ ;ಬಂಧನ,ವಾತ್ಸಲ್ಯಕಲ್ಲ.ತಮ್ಮಂತೆ ಮಕ್ಕಳು ಕಷ್ಟ ಪಡಬಾರದು ಎಂಬ ಆಸೆಯಿಂದ ಮಕ್ಕಳಿಬ್ಬರಿಗು ಒಳ್ಳೆಯ ಶಾಲೆಗೆ ಸೇರಿಸಿದ್ದರು.ಅದರಂತೆ ಮಕ್ಕಳು ತುಂಬಾ ಆಸಕ್ತಿಯಿಂದ ಓದುತ್ತಿದ್ದರು. ಸಂಗೀತಾ ಮಕ್ಕಳನ್ನು ಶಾಲೆಗೆ ಕಳುಹಿಸಿ ಕೆಲಸಕ್ಕೆ ಹೋಗುತ್ತಿದ್ದಳು.ಸಂಜೆ ಅವನಿ ಸುರಜನೊಂದಿಗೆ ಮನೆ ಸೇರುತ್ತಿದ್ದಳು.ಆದರೆ ಆ ದಿನ ಈ ಕುಟುಂಬಕ್ಕೆ ಭಯಾನಕವಾದ ದಿನವಾಗಿತ್ತು.ಕೆಲಸದ ಒತ್ತಡದಿಂದಾಗಿ ಅವನಿಯನ್ನು ಶಾಲೆಗೆ ಸಂಜಯನೊಂದಿಗೆ ಕಳುಹಿಸಿದರು. ಎಂದಿನಂತೆ ಶಾಲೆ ಸಮೀಪಿಸುತ್ತಿದ್ದಂತೆ ಗೆಳೆಯರೊಂದಿಗೆ ಕಿರುಚುತ್ತಾ ಸಂಜಯ ಓಡಿ ಹೋದನು. ಅದು ಅವರಿಬ್ಬರ ಕೊನೆಯ ಭೇಟಿಯಾಗಬಹುದೆಂಬ ಕಲ್ಪನೆಯು ಆ ಪುಟ್ಟ ಮಗುವಿಗೆ ಇರಲಿಲ್ಲ. ಸಂಜೆ ಯತಾ ಪ್ರಕಾರ ಶಾಲೆಯ ಗೇಟಿನಲ್ಲಿ ತಂಗಿಗಾಗಿ ಕಾಯುತ್ತಾ ಅಲ್ಲೆ ನಿಂತಿದ್ದನು. ಎಲ್ಲರು ಹೋದ ನಂತರ ಶಾಲೆಯ ಸಿಬ್ಬಂದಿಗಳು ಅವನಿಗೆ ಮನೆಗೆ ಹೋಗಿ ನೋಡು ಎಂದು ಹೇಳಿ ಕಳುಹಿಸಿದರು.ತಡವಾಗಿದ್ದಕ್ಕೆ ಅದಾಗಲೆ ಮನೆಯಲ್ಲಿ ಪಾಲಕರು ಗಾಬರಿಯಾಗಿದ್ದರು.ಅದರಲ್ಲೂ ಸುರಜನನ್ನು ಏಕಾಂಗಿಯಾಗಿ ನೋಡಿ ಅವರು ವಿಚಲಿತರಾದರು.ಅವನಿಯನ್ನು ಬಿಟ್ಟು ಒಬ್ಬನೆ ಯಾಕೆ ಬಂದೆ? ಎಂದು ಒಂದೆ ಸಮನೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳು !! ಶಾಲೆಯಲ್ಲಿ ಅವಳಿಗಾಗಿ ಕಾಯ್ದು ಸಾಕಾಗಿ ಬಂದೆ ಎಂದು ಮುಗ್ದತೆಯಿಂದ ಉತ್ತರಿಸಿದನು.ಎಲ್ಲರು ಸೇರಿ ಮತ್ತೆ ಶಾಲೆಗೆ ಹೋಗಿ ಎಲ್ಲ ಕಡೆ ಅವಳಿಗಾಗಿ ಹುಡುಕಲು ಪ್ರಾರಂಭಿಸಿದರು.ರಾತ್ರಿವರೆಗೂ ಹುಡುಕಿ ಹುಡುಕಿ ಸಾಕಾಗಿ ನೇರವಾಗಿ ಪೋಲಿಸ ಠಾಣೆಗೆ ಹೋದರು.ಪ್ರಕರಣವನ್ನು ದಾಖಲಿಸಿಕೊಂಡು ಸಮಾನಧಕರ ಭರವಸೆಗಳನ್ನು ಕೊಟ್ಟು ಕಳುಹಿಸಲಾಯಿತು.ದಿನ ಬೆಳಗಾದರು ಈ ಕುಟುಂಬಕ್ಕೆ ಅವನಿಗಾಗಿ ಹುಡುಕುವುದು ದಿನಗೆಲಸವಾಗಿ ಬಿಟ್ಟಿತು.


  ////////////////////////////////////////////////

                   ಜೊಸೆಫ್ ,ರಿಟಾ ದಂಪತಿಗಳಿಗೆ ಮಗುವನ್ನು ಪಡೆಯುವುದೆ ಜೀವನದ ಗುರಿ ಎಂಬಂತಾಗಿತ್ತು.ಮದುವೆಯಾಗಿ 8 ವರ್ಷಗಳಾದರು ದೇವರು ಸಂತಾನ ಭಾಗ್ಯವನ್ನು ಕರುಣಿಸಿರಲಿಲ್ಲ.ಹೋದಲ್ಲಿ ಬಂದಲೆಲ್ಲಾ ಇವರಿಗೆ ಸಂಬಂಧಿಕರಿಂದಾಗಲಿ,ಸ್ನೇಹಿತರಿಂದಾಗಲಿ ಮಕ್ಕಳಾವಾಗ ಎಂಬುದೊಂದೆ ಪ್ರಶ್ನೆ!!! ದೇಶದಲ್ಲಿನ ಎಲ್ಲಾ ದೇವರುಗಳಿಗು ಕೋರಿಕೆ ಸಲ್ಲಿಸಲಾಗಿತ್ತು. ಎಲ್ಲಾ ಪ್ರಮುಖ ಡಾಕ್ಟರಗಳಿಗೂ ಸಂಪರ್ಕಿಸಲಾಗಿತ್ತು.ತಮಗಾಗಿ ಅಲ್ಲದಿದ್ದರೂ ತಮ್ಮ ಪ್ರತಿಷ್ಠಿತೆಗಾಗಿ ಮಕ್ಕಳನ್ನು ಪಡೆಯಲೆ ಬೇಕೆಂದು ನಿರ್ಧಾರ ಮಾಡಿದರು.
ಅವರ ಪ್ರಯತ್ನಗಳಿಗೆ ಭಗವಂತ ಕೊನೆಗೂ ಫಲ ಕೊಡುವ ಸಮಯ ಬಂದಿತು. ಆ ಪುಟ್ಟ ಪುಟ್ಟ ಹೆಜ್ಜೆಗಳು, ಕಮಲದಂತ ಕಣ್ಣುಗಳು,ತೊದಲು ನುಡಿಗಳು ಜೊಸೆಫನಿಗೆ ತನ್ನೆಲ್ಲಾ ಸಮಸ್ಯೆಗಳಿಗೆ ಪರಿಹಾರ ಎಂಬಂತೆ ಭಾಸವಾಯಿತು.ತಡ ಮಾಡದೆ ಆ ಮಗುವನ್ನು ಕರೆತರಲು ಮಾಡಬೇಕಿದ್ದ ಎಲ್ಲಾ ಕೆಲಸಗಳನ್ನು ಪರಿಪೂರ್ಣತೆಯಿಂದ ಮುಗಿಸಿದ್ದು ಮಕ್ಕಳ ಮೇಲಿನ ಕಾಳಜಿಯನ್ನು ತೊರುವಂತಿತ್ತು.ತಮ್ಮ ಜೀವನದ ಸಂತಸವನ್ನು ಹೆಚ್ಚಿಸಿದಕ್ಕಾಗಿ ಮಗುವಿಗೆ ಜ್ಯಾಯ್(joy) ಎಂದು ಹೆಸರಿಡಲಾಯಿತು. ಮಕ್ಕಳ ಮೇಲೆ ಎಷ್ಟೇ ಪ್ರೀತಿಯಿದ್ದರೂ ಅವರ ಮುಂದಿನ ಭವಿಷ್ಯಕ್ಕೆ ಪೂರಕವಾಗುವಂತ ನಿರ್ಧಾರಗಳನ್ನು ಮನಸ್ಸು ಒಪ್ಪದಿದ್ದರು ತೆಗೆದುಕೊಳ್ಳಲೆ ಬೇಕಾಗುತ್ತದೆ .ಅದೆ ರೀತಿ  ಜ್ಯಾಯ್ನ್ನು ರಾಯಚೂರಿನಲ್ಲಿದ್ದ ಒಂದು ಪ್ರತಿಷ್ಠಿತ ವಸತಿ ಶಾಲೆಗೆ ಸೇರಿಸಲಾಯಿತು

 ************************************

                ಭರವಸೆಯನ್ನು ಕೊಟ್ಟಿದ್ದ ದಕ್ಷ ASI ತರುಣ ಇಲ್ಲಿಯವರೆಗೆ ಒಟ್ಟು 168 ಕಿಡ್ನಾಪ ಕೇಸುಗಳನ್ನು ಯಶಸ್ವಿಯಾಗಿ ಬಗೆಹರಿಸಿ, ಅವನಿಯ ಕೇಸಿನೊಂದಿಗೆ ತಮ್ಮ ನಿವೃತ್ತಿಯನ್ನು ಅರ್ಥ ಪೂರ್ಣಗೊಳ್ಳುವಂತೆ ಮಾಡಬೇಕೆಂಬ ಸಂಕಲ್ಪಗೊಂಡಿದ್ದರು.   ಕಿಡ್ನಾಪ ಕೇಸುಗಳನ್ನು ಅತಿ ಹೆಚ್ಚು ನಿರ್ವಹಿಸಿದ್ದರಿಂದ ತಮ್ಮವರನ್ನು ಕಳೆದುಕೊಂಡವರ ನೋವನ್ನು ಗ್ರಹಿಸುವುದರಲ್ಲಿಯೂ ನೀಪುಣರಾಗಿದ್ದರು ,ಆದರೆ ದೈವ ಬರಹವನ್ನು ತಿರುಚಲು ನಾವಾರು?? ASI ತರುಣ ಅವರ ಅವಧಿ ಮುಗಿದು ನಿವೃತ್ತಿಗೊಳ್ಳುವ ಸಮಯ ಬಂದೇ ಬಿಟ್ಟಿತು,ಆಗಾಗಲೆ ಕೇಸ ಕೈಗೆತ್ತಿಕೊಂಡು 2 ವರ್ಷಗಳೆ ಆಗಿದ್ದವು.ಅವನಿಯನ್ನು ಕಳೆದುಕೊಂಡಿದ್ದ ಪಾಲಕರ ಹತಾಶೆ, ನಿರಾಸೆಯ ಪ್ರತಿಬಿಂಬ ASI ತರುಣ ಅವರ ಕಣ್ಣುಗಳಲ್ಲಿ ಕಾಣತೊಡಗಿತು.
              ಅವರ ನಿವೃತ್ತಿಯಿಂದ ಹಲವಾರು ಬದಲಾವಣೆಗಳಾಗ ತೊಡಗಿದವು.ಅವನಿಯ ಹುಡುಕಾಟದ ಕಾವು ತಣ್ಣದಾಗತೊಡಗಿತು.ಅವನಿಗೂ ಬೆಳವಣಿಗೆಯಾದಂತೆ ಕ್ರಮೇಣ ತಮ್ಮವರ ನೆನಪುಗಳು ಕಡಿಮೆಯಾಗ ತೊಡಗಿತು.ಅವನಿಯ ಹುಡುಕಾಟಕ್ಕಾಗಿ ಚಾಪಿಸಿದ್ದ ಜಾಹಿರಾತುವಿನಲ್ಲಿ ನಮುದಿಸಿದ್ದ ನಾಲ್ಕು ಫೋನ ನಂಬರಗಳ ಪೈಕಿ 3 ನಂಬರಗಳೂ ಬದಲಾಗಿದ್ದವು.ಆದರೆ ತಂದೆ-ತಾಯಿಯರ ಹೃದಯ ಅವನಿಗಾಗಿ ಹಪಾ ಹಪಿಸುವುದು ಕೊಂಚವು ಕಡಿಮೆಯಾಗಲಿಲ್ಲ.


@@@@@@@@@@@@@@@@@@
                     

 ಜೊಸೆಫ-ರಿಟಾ ದಂಪತಿಗಳು ಸ್ವಂತ ಮಕ್ಕಳಿಗಾಗಿ ದೇವರುಗಳಿಗೆ ಹಾಕಿದ್ದ ಅರ್ಜಿ ಸ್ವಲ್ಪ ತಡವಾಗಿ ತಲುಪಿರ ಬಹುದು!! ಜ್ಯಾಯ್ ಶಾಲೆ ಸೇರಿ 2 ವರ್ಷದಲ್ಲಿಯೆ ಅವಳ ಪಾಲಕರಿಗೆ ಸಂತಾನ ಭಾಗ್ಯ ಒಲೆಯಿತು.ಅದೂ ಗಂಡು ಮಗು ಕಾಲ ಸರಿದಂತೆ ಪಾಲಕರ ಒಲವು ಸ್ವಂತ ಮಗುವಿನತ್ತ ಹೆಚ್ಚಾಗಿ,ಕೊನೆಗೆ ಜ್ಯಾಯನ ವಿದ್ಯಾಭ್ಯಾಸದ ಖರ್ಚು ಹೊರೆಯಾಗ ತೊಡಗಿತು.ಹಾಗು-ಹಿಗು ಸ್ವಲ್ಪ ಸಮಯ ತಳ್ಳಿ ಕೊನೆಗೆ ಅವನಿಯನ್ನು ಮನೆಗೆ ತಂದರು.ಆದರೆ ಈಗ ಅವಳು ಮಗಳಾಗಿ ಮರಳಲಿಲ್ಲಾ,ಬದಲಿಗಿ ಒಬ್ಬ ದಾಸಿಯಂತಾದಳು.ಅವಳಿಗೆ ಸುತ್ತಮುತ್ತಲಿನ ಜನರೊಂದಿಗೆ ಬೆರೆಯದಂತೆ ನಿರ್ಭಂದ ಹಾಕಲಾಯಿತು.ಅದರೊಂದಿಗೆ ಅವಳಿಗೆ ಶಾಲೆಯನ್ನೂ ಬಿಡಿಸಿ ಅದೆ ಊರಿನಲ್ಲಿದ್ದ ಒಂದು ಬೆಬಿ ಸಿಟ್ಟಿಂಗ ಶಾಲೆಯಲ್ಲಿ ಕೆಲಸಕ್ಕೆ ಸೇರಿಸಲಾಯಿತು.ಬರುತ್ತಿದ್ದ ಅಲ್ಪಸ್ವಲ್ಪ ದುಡ್ಡನ್ನು ಜೊಸೆಫ ಕಸೆದು ಕೊಳ್ಳುತ್ತಿದ್ದ. ಯಾರೊಂದಿಗಾದರೂ ಜ್ಯಾಯ ಮಾತನಾಡುವುದನ್ನು ಕಂಡರೆ ಜಾಗವನ್ನೂ ಲೆಕ್ಕಿಸದೆ ಜೊಸೆಫ ತಳಿಸಲು ಪ್ರಾರಂಭ ಮಾಡಿದ. ಸದಾ ಕೆಲಸದಲ್ಲಿಯೆ ಕಾಲ ಕಳೆಯುತ್ತಿದ ಜ್ಯಾಯ ಯಾವಾಗಲೂ ದಣಿದವಳಂತೆಯೆ ಇರುತ್ತಿದ್ದಳು.ಸಿಕ್ಕ ಸ್ವಲ್ಪ ಸಮಯದಲ್ಲಿಯೆ ಗಣಪತಿ,ಸರಸ್ವತಿ ಹಾಗೂ ಲಕ್ಷ್ಮಿ ದೇವರುಗಳಿಗೆ ಇದರಿಂದ ಮುಕ್ತಿ ದೊರಕಿಸೆಂದು ಬೇಡಿಕೊಳ್ಳುತ್ತಿದ್ದಳು. ಆ ಶಾಲೆಯ ಮುಖ್ಯ ಶಿಕ್ಷಕಿ ಶಾಂತಾ ಅವರ ರೂಪದಲ್ಲಿ ದೇವರು ಅವಳ ಪ್ರಾರ್ಥನೆಯನ್ನು ಸ್ವಿಕರಿಸಿದನು.ಜ್ಯಾಯನ ಉಡುಗೆ ಹಾಗೂ ಅವಳು ಮಾಡುತ್ತಿದ್ದ ಪೂಜೆ ಸ್ವಲ್ಪ ಅಸ್ವಾಭಾವಿಕ ಅನ್ನಿಸತೊಡಕಿತು.ಅವಳನ್ನು ಸೂಕ್ಷ್ಮವಾಗಿ ಗಮನಿಸಲು ಅವರು ಪ್ರಾರಂಭಿಸಿದರು.ಸದಾ ಭಯದಲ್ಲಿರುವ ಜ್ಯಾಯನ್ನು ಕರೆದು,ಶಾಂತಾ ಅವರು ನಿಧಾನವಾಗಿ ಮಾತಾಡಿಸಿ  ಸಂತೈಸಿಸಲು  ಪ್ರಾರಂಭಿಸಿದರು.ತನ್ನ ತಂದೆ-ತಾಯಿ ಹಾಗೂ ಸಹೋದರನ ಬಗ್ಗೆ ಉಳಿದಿದ್ದ ಸ್ವಲ್ಪ ಸ್ವಲ್ಪ ನೆನಪುಗಳನ್ನು ಹಂಚಿಕೊಂಡಳು.ಆ ಮಾಹಿತಿ ಆಧಾರದ ಮೇಲೆ ಅವರು ಗೂಗಲನಲ್ಲಿ ಹುಡುಕಾಡಲು ಪ್ರಾರಂಬಿಸಿದರು.
              ಕೆಲಸದಿಂದ ನಿವೃತ್ತಿಗೊಂಡಿದ್ದರೂ ತಮ್ಮ ಕೊನೆಯ ಜವಾಬ್ದಾರಿಯನ್ನು ASI ತರುಣ ಮರೆತಿರಲಿಲ್ಲಾ.ನಿವೃತ್ತಿಯ ನಂತರವೂ ಸತತವಾಗಿ 7 ವರ್ಷಗಳ ಕಾಲ ಈ ಪ್ರಕರಣದ ಬಗ್ಗೆ ಕೆಲಸ ಮಾಡುತ್ತಲೆಯಿದ್ದಿದರಿಂದ ಗೂಗಲನಲ್ಲಿ ಶಿಕ್ಷಕಿಯು ಹುಡುಕಿದ ತಕ್ಷಣವೆ ಅವನಿಗಾಗಿ ಚಾಪಿಸಿದ್ದ ಜಾಹಿರಾತು ದೊರಕಿತು.ಆದರೆ ಇಗಾಗಲೆ ಅದರಲ್ಲಿನ ಮೂರು ನಂಬರಗಳು ಬದಲಾಗಿದ್ದವು ಹಾಗೂ ಕೊನೆಯ ನಂಬರ ಪಕ್ಕದ ಮನೆಯ ಸದ್ದಾಂನದಾಗಿತ್ತು.ಆದರೆ 7 ವರ್ಷದ ಅವಧಿಯಲ್ಲಿ ಅವನಿ ಪಾಲಕರಿಗೂ ಹಾಗೂ ಅವರಿಗು ಜಗಳವಾಗಿತ್ತು.ಹಾಗು ಅವನಿಗಾಗಿ ಬರುತ್ತಿದ್ದ ಕರೆಗಳನ್ನು ಅವರು ನಿರ್ಲಕ್ಷಿಸುತ್ತಿದ್ದರು. ಆದರೆ ಅಂದು ಮತ್ತೊಬ್ಬ ದೇವರು ಸದ್ದಾ೦ನ ಹೆಂಡತಿಯ ರೂಪದಲ್ಲಿ ಬಂದಿದ್ದನು.ಶಾಲೆಯ ಶಿಕ್ಷಕಿ ಅವನಿಗಾಗಿ ವಿಚಾರಿಸಲೆಂದು ಸದ್ದಾಂನಿಗೆ ಕರೆ ಮಾಡಿದ್ದರು ಆದರೆ ಆತ ಯತಾ ಪ್ರಕಾರ ತಪ್ಪುನಂಬರ ಎಂದು ಹೇಳಿ ತಪ್ಪಿಸಿಕೊಳ್ಳುವುದರಲ್ಲಿದ್ದ ಆದರೆ ಸದ್ದಾಂನ ಹೆಂಡತಿ ಫೋನನ್ನು ಎತ್ತಿಕೊಂಡು ಎನು ವಿಷಯವೆಂದು ತಿಳಿದು ಗಂಡನಿಗೂ ತಿಳಿಹೇಳಿ ನೇರವಾಗಿ ಪೋಲಿಸ ಠಾಣೆಗೆ ವಿಷಯ ತಿಳಿಸಿದಳು.ಪೋಲಿಸರು ನಿವೃತ್ತಗೊಂಡಿದ್ದ ತರುಣರೊಂದಿಗೆ ಆ ಬಾಲಕಿಯಿದ್ದ ಸ್ಥಳಕ್ಕೆ ಮಫ್ತಿಯಲ್ಲಿ ಹೋಗಿ ತನಿಖೆಯನ್ನು ಪ್ರಾರಂಭಿಸಿ, ಅವನಿಯು ಜ್ಯಾಯ ಆಗಿ ಬದಲಾಗಿದ್ದ ರಹಸ್ಯವನ್ನು ಭೇದಿಸಿದರು.ತನಿಖೆಯಲ್ಲಿ ಬಯಲಾದ ವಿಷಯಗಳು ಹೀಗಿದ್ದವು.ಮಕ್ಕಳಿಗಾಗಿ ಕಂಗೆಟ್ಟಿದ್ದ ಜೊಸೆಫ ಆರ್ಥಿಕವಾಗಿ ಮಕ್ಕಳನ್ನು ದತ್ತು ಪಡೆಯಲು ಅಸಾಹಾಕನಾಗಿದ್ದ ,ಹಾಗು ದೂರದ ಊರಿನಿಂದ ಮಗುವನ್ನು ಕದ್ದರೆ ಅಪಾಯಗಳು ಕಡಿಮೆಯಾಗ ಬಹುದೆಂದು ಊಹಿಸಿದ್ದನು.ಅದರಂತೆ ಈ ಪ್ರಕರಣವು ಮಕ್ಕಳ ಕಳ್ಳತನ ಮಾಡುವ ಪರಿಣಿತದವರಂತಿರದೆ ಯಾವುದೆ ಸುಳಿವು ಸಿಗದೆಯಿರುವುದು ಪೋಲಿಸರಿಗೆ ಹಿನ್ನಡೆಯನ್ನು ಮಾಡಿತ್ತು.ಆದರೆ ಅವನಿಗಾಗಿ ಹುಡುಕಾಟ ಜೋರಾದಾಗ ಶಾಲೆಯ ನೆಪ ಮಾಡಿ ಹೊರ ರಾಜ್ಯದ ರಾಯಚೂರಿನ ಸಂಭಂದಿಕರ ಮನೆಯಲ್ಲಿ ಇಟ್ಟಿದ್ದರಿಂದ ಸ್ಥಳೀಯ ಪೋಲಿಸರಿಂದ ಅಪಾಯ ಕಡಿಮೆಮಾಡಿತ್ತು.ಮೇಲಾಗಿ ಎಲ್ಲ ಕಡೆ ಅಂಟಿಸಿದ್ದ ಫೋಟೊಗಳಲ್ಲಿ ಅವಳು ಹಿಂದೂಗಳಂತಿದ್ದರೆ ಅಲ್ಲಿ ಬದಲಾದ ವೇಷದಲ್ಲಿದ್ದಳು ಹಿಗಾಗಿ ಯಾರಿಗೂ ಇದು ಅಷ್ಟಾಗಿ ಕಂಡು ಬಂದಿರಲಿಲ್ಲ.ಅಪರಾಧಿಗಳನ್ನು ಬಂಧಿಸಿ ಅವನಿಯನ್ನು ಯಶಸ್ವಿಯಾಗಿ ನಿಜವಾದ ತಾಯಿಯ ಮಡಿಲಿಗೆ ಸೇರಿಸಲಾಗಿತ್ತು.

ಹೀಗೆ ಅದೆಷ್ಟೋ ಬಾರಿ ನಮ್ಮದಲ್ಲದ ತಪ್ಪಿಗಾಗಿ ನಾವು ಅನೇಕ ನೋವುಗಳನ್ನು ಅನುಭವಿಸಬೇಕಾದ ಪ್ರಸಂಗಗಳು ಬಂದರೂ ತಾವು ದೇವರನ್ನ ನಂಬಿ ಬಂದಿದ್ದನ್ನು ಎದುರಿಸುತ್ತಾ ಹೋದಲ್ಲಿ ದೇವರು ಯಾವುದಾದರು ಒಂದು ರೂಪದಲ್ಲಿ ನಮಗೆ ಯೋಗ್ಯವಾಗಿದನ್ನು ಕರುಣಿಸುತ್ತಾನೆ.
(ಮಹಾರಾಷ್ಟ್ರದಲ್ಲಾದ ಒಂದು ನೈಜ ಘಟನೆ ಆಧಾರದ ಮೇಲೆ ಈ ಕಥೆಯನ್ನು ಬರೆಯಲಾಗಿದೆ)
                                      .                               -  - ಮಂಜುನಾಥ ಬ ಮೇಟಿ.
    ಮಿಂಚಂಚೆ : 4183mbm@gmail.com


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...