ಶನಿವಾರ, ಡಿಸೆಂಬರ್ 10, 2022

ಬಾಹುಬಲಿ ಸಿನಿಮಾದ ಮಾಹಿಶ್ಮತಿ ಎಲ್ಲಿದೆ ಗೊತ್ತಾ? (ಲೇಖನ) - ಎಮ್. ಹೆಚ್. ಸುವರ್ಣಲಕ್ಷ್ಮೀ.

ಮಧ್ಯಪ್ರದೇಶದಲ್ಲಿ ಮಹೇಶ್ವರ ಪಟ್ಟಣ ಮತ್ತು ಅದರ ಬಳಿ ನರ್ಮದಾ ನದಿ ತೀರದಲ್ಲಿರುವ ಮಹೇಶ್ವರ್ ಘಾಟ್ ನ ಪುರಾತನ ಹೆಸರೇ ಬಾಹುಬಲಿ ಸಿನಿಮಾದಲ್ಲಿ ಬಳಸುತ್ತಿರುವ ಮಾಹಿಶ್ಮತಿ. ಬರಬರುತ್ತಾ ಅದು ಜನರ ಬಾಯಲ್ಲಿ ಮಹೇಶ್ವರ್ ಎಂಬುದು ಇತಿಹಾಸ. ಇತಿಹಾಸವೇ ಇರಲಿ ಒಮ್ಮೆ ಸಾಧ್ಯವಾದರೆ ನೋಡಬೇಕಾದ ಸ್ಥಳ ಮಹೇಶ್ವರ್ ಘಾಟ್ ಇದರ ನಿರ್ಮಾಣದ ಹಿಂದಿರುವ ಚೇತನ ಅಹಲ್ಯಾಬಾಯಿ ಹೋಳ್ಕರ್  ಚಿಕ್ಕ ವಯಸ್ಸಿನ ಹೋಳ್ಕರ್ ಮನೆಯತನದ ಸೊಸೆಯಾಗುವ ಈಕೆ ಗಂಡನನ್ನೂ, ಮಾವನನ್ನೂ, ಮಗನನ್ನೂ ಕೆಲವು ದಿನಗಳ ಅಂತರದಲ್ಲಿ ಕಳೆದುಕೊಂಡ ಸಾಮ್ರಾಜ್ಯದ ಚುಕ್ಕಾಣಿ   ಹಿಡಿಯಲು. ಘಾಟ್ ಹಲವಾರು ದೇವಾಲಯಗಳನ್ನು ಕಟ್ಟಿಸಿದಳು.
 ನಿರ್ಮಾಣ ಎಷ್ಟು ಉತ್ತಮವಾಗಿದೆ ಎಂದರೆ ಇವತ್ತಿಗೂ ಅವು ಸುರಕ್ಷಿತವಾಗಿವೆ 
ಅಷ್ಟೇ ಅಲ್ಲದೆ ತನ್ನ ಮಹೇಶ್ವರದ ಪ್ರಜೆಗಳ ಕ್ಷೇಮಕೋರಿ ತಾನೇ ನಿರ್ಮಿಸಿದ ಈಶ್ವರನ ದೇಗುಲದಲ್ಲಿ ಅವಳನ್ನು ಪ್ರಾರಂಭಿಸಿದ ಲಿಂಗಾರ್ಚನ್ ಪೂಜೆ ವಿಶೇಷವಾಗಿದೆ. ಆಗಿನ ಕಾಲಕ್ಕೆ ಮಹೇಶ್ವರನಲ್ಲಿ 1.10 ಲಕ್ಷ ಜನರಿದ್ದಂತೆ ಪ್ರತಿದಿನ 111 ಅರ್ಚಕರು ಪ್ರತಿಯೊಬ್ಬರೂ 1000 ಲಿಂಗಗಳನ್ನು ಹೊಲದ ಮಣ್ಣಿನಿಂದ ಮಾಡಿ ಪೂಜಿಸುತ್ತಾರಂತೆ ಅದೂ ಬೆಳಿಗ್ಗೆ 8.30 ರಿಂದ 9.30 ರ ಒಳಗೆ ಆಶ್ಚರ್ಯದಿಂದ ಈಗಲೂ ಈ ಪೂಜೆ ನಡೆಯುತ್ತಲೇ ಇದೆ. 
ಪ್ರತಿದಿನ 11 ಅರ್ಚಕರು ಪ್ರತಿಯೊಬ್ಬರೂ 1000 ಲಿಂಗಗಳನ್ನು ಮಾಡಿ ಪೂಜಿಸುತ್ತಾರೆ. ಅಹಲ್ಯಾಬಾಯಿ ಹೋಳ್ಕರ್ ಇದೇ ತರಹ ಘಾಟ್ ಗಳು ಸಾವಿರಾರು ದೇವಾಲಯಗಳನ್ನು ನಿರ್ಮಿಸಲಾಗಿದೆ ನಮ್ಮ ಬೇಲೂರಿನ ದೇವಾಲಯ ನಿರ್ಮಾಣದಲ್ಲಿ ಅವರ ಕೊಡುಗೆ ಇದೆ ಎಂದು ಇತಿಹಾಸ ಹೇಳುತ್ತದೆ. ವ್ಯಾಪಾರ ಅಭಿವೃದ್ಧಿಗೆ ರಸ್ತೆಗಳು ಮುಖ್ಯ ಎಂದು ಅರಿತಿದ್ದ ಅಹಲ್ಯಾಬಾಯಿ ಮಹೇಶ್ವರ ತಲುಪುವ ಎಲ್ಲಾ ರಸ್ತೆಗಳನ್ನೂ ನಿರ್ಮಿಸಲಾಗಿದೆ. ಸ್ತ್ರೀ ಸ್ವಾತಂತ್ರ್ಯ ಅವರಿಗೆ ಅವಳ ಕೊಡುಗೆ ದೊಡ್ಡದು.ಹೆಚ್ಚಿನ ಮಹೇಶ್ವರಿ ಸೀರೆಗಳು ಬಹಳ ಪ್ರಸಿದ್ಧಿ ಈ ಸೀರೆಗಳು ನೇಯುವ ನೇಕಾರರನ್ನು ಆಗಿನ ಕಾಲಕ್ಕೇ ಹೈದರಾಬಾದ್ ನಿಂದ ಕರೆಸಿಕೊಂಡಿದ್ದಳು. 
ಆ ಉದ್ಯಮ ಈಗಲೂ ನಡೆಯುತ್ತಿದೆ. 1767 ರಿಂದ 1795 ರವರೆಗೂ ಹೋಳ್ಕರ್ ರಾಜ್ಯವನ್ನು ವ್ಯವಸ್ಥಿತವಾಗಿ ಆಳವಾದ ಈಕೆ ಮಾಡಿದ ಕೆಲಸಗಳನ್ನು ಬರೆದರೆ ಒಂದು ದೀರ್ಘಾವಧಿಯ ಲೇಖನವಾದೀತು. ಏನಾದರೂ ಆಗಲಿ ಮಹೇಶ್ವರ್ ಘಾಟ್, ಸುತ್ತಲೂ ಹಸಿರು, ವಿಸ್ತಾರವಾದ ನರ್ಮದಾ ನದಿ, ದೋಣಿಯಾನ, ಆಗಾಗ ನಡೆಯುವ ಸಿನಿಮಾ ಶೂಟಿಂಗ್ ಗಳು,  
ಧಾರ್ಮಿಕ ಆಚರಣೆಗಳು ನಮ್ಮ ಮನಸ್ಸನ್ನು ಮುದಗೊಳಿಸುತ್ತವೆ.

- ಎಮ್ ಹೆಚ್ ಸುವರ್ಣಲಕ್ಷ್ಮೀ, 
ಸೋಮಯಾಜಲಹಳ್ಳಿ, ಶ್ರೀನಿವಾಸಪುರ ತಾಲ್ಲೂಕು. ಕೋಲಾರ ಜಿಲ್ಲೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...