ಕಲಿಯುಗದ ಸ್ವರ್ಗ ರಾಯರ ಪುಣ್ಯಸ್ಥಳವಿದು
ಇದೇ ನೋಡು ಬೃಂದಾವನ ಇಚ್ಛಾ ಶಕ್ತಿಯ ಮಠವಿದು
ಗುರು ರಾಘವೇಂದ್ರ ಎಂದರೆ ಭಕ್ತಿಯ ಕಣ್ಣ ತೆರೆಯುವುದು
ಕಲಿಯುಗದ ಕಾಮಧೇನು ಮಹಾಮಹಿಮರ ನಾಡಿದು॥
ರಾಯರ ಮಹಿಮೆ ಅಪಾರ
ಅಮೃತ ಸಿಂಚನರು.
ಭಕ್ತರ ದುರಿತ ನಿವಾರಕ ಭಾವ ಪರವಶರು
ದೈವತ್ವದ ಭಕ್ತ ಗಣಂಗಳು ವೈಕುಂಠವೇ ಧರೆಗೆ ತಂದರು॥
ಕೃಷ್ಣನ ಕೊಳಲನಾದ ಪವನಸುತ ಸಂಪ್ರೀತ
ರಾಮನ ನೋಟದಿ ಕರುಣೆ ತುಂಬಿ
ರಾಯರ ಮಠದ ದಿವ್ಯಜ್ಯೋತಿ
ಸುಬುಧೇಂದ್ರ ತೀರ್ಥರು
ನಮ್ಮೊಳು ಭಕ್ತಿಯ ಕಣ್ಣು ತೆರೆಸಿದರು॥
ಭಕ್ತರ ಕಣ್ಣಲ್ಲಿ ರಾಯರ ಬಿಂಬ
ಮನದಲ್ಲಿ ದೈವ ಜ್ಯೋತಿ
ಅಗೋ ಗುರುಸಾರ್ವಭೌಮರ
ಪುಣ್ಯ ಜ್ಯೋತಿ
ಕಣ್ಣ ಬೆಳಕಲ್ಲೆ ವೈಕುಂಠ ವೈಭವ ಸ್ಫೂರ್ತಿ ॥
ಭಕ್ತಿಯ ಲೋಕದ ಸಿಂಧೂರ
ಭೀಮ ಹನುಮ ಮಧ್ವ ಸ್ವರೂಪಿ ತೀರ್ಥರ ದ್ಜಿಜ
ದ್ವೈತ ಕೀರ್ತಿ ಪತಾಕೆಯು ರಾಯ ರೂವಾರಿರಿವರು ॥
- ಶ್ರೀ ವೆಂಕಟೇಶ್ ಬಡಿಗೇರ್,
ಶಿಕ್ಷಕ ರತ್ನ ಪ್ರಶಸ್ತಿ ಪುರಸ್ಕೃತರು. ಜಿಲ್ಲಾಧ್ಯಕ್ಷರು
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ವಿಜಯನಗರ ಜಿಲ್ಲಾ ಘಟಕ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ