ಅರುಣ ಮತ್ತು ಸುಮಾ ಇಬ್ಬರು ಮದುವೆಯ ವಾರ್ಷಿಕೋತ್ಸವಕ್ಕೆ ಆಶ್ರಮವಾಸಿಗಳಿಗೆ ಮತ್ತು ಸಹಪಾಠಿಗಳಿಗೆ ಸಿಹಿತಿಂಡಿ ಕೊಡಬೇಕೆಂದು ನಿರ್ಧರಿಸಿಕೊಟ್ಟು ಬರಲು ಹೊರಡುತ್ತಿದ್ದಾಗ ಒಂದು ಕಾಲ್ ಬಂತು ಹಾಯ್!!ಹಲೋ,
ನಿಮಗಿಬ್ಬರಿಗೂ, ಮದುವೆಯ ವಾರ್ಷಿಕೋತ್ಸವಕ್ಕೆ ಶುಭ ಕಾಮನೆಗಳು ಗೆಳೆಯಾ ಎಂದ ಅನಾಮಿಕ.
ಅರುಣನಿಗೆ ಕಾಲ್ ಮಾಡಿದ ವ್ಯಕ್ತಿ ಯಾರೆಂದು ತಿಳಿಯದೆ ಯೋಚನೆ ಮಾಡುತ್ತಿರಲು. ಕಾಲೇಜಿನ ದೋಸ್ತುಕಣೋ ಎಂದು ಹೇಳಿದ್ದ ಆದರೆ ಹೆಸರು ಮುಖ ಪರಿಚಯ ಇಲ್ಲದೆ...
ಯಾರೆಂದು ?
ಪತ್ನಿ ಸುಮಾಳು ಕೇಳಿದಳು ಯಾರ ಕಾಲ್ ಎಂದು ?!!!
ಅನಾಮಿಕ ಕಾಲ್ ಕಣೇ ....ಯಾರೆಂದು ತಿಳಿಯದು
ಕಾಲೇಜು ಪ್ರೆಂಡ್ ಎಂದು ಕಾಲ್ ಕಟ್ ಮಾಡಿದ ಆದರೆ ನನಗೆ
ನೆನಪಿಲ್ಲದ ಗೆಳೆಯರು ಇಲ್ಲ, ಎಂದು ಸುಮಾಳಲ್ಲಿ ಹೇಳಿದಾಗ
ಸುಮಾಳಿಗೆ ನೆನಪಾಯಿತು.
ಸುಮಾಳ ಜೀವನ ಅಂದ್ರೆ ಅಷ್ಟು ಕಷ್ಟ ಬಾಲ್ಯದಲ್ಲಿ, ಅಪ್ಪ ಅಮ್ಮ ಮಾಡಿದ ತಪ್ಪಿನಿಂದ ಮಗಳು ಅನಾಥಳಾದಳು. ಪಾಪ !! ಆದರೆ ದೇವರು ಅವಳ ಕೈಬಿಟ್ಟಿರಲಿಲ್ಲ ಎಲ್ಲವೂ ಅವಳಿಗೆ ಸಿಗುತ್ತಾ ಹೋಯಿತು. ಆದರೆ ಒಂದು ಮಾತ್ರ ಅವಳ ಪಾಲಿಗೆ ಇಲ್ಲವಾಯಿತು. ಅದರಿಂದ ಅವಳಿಗೆ ಒಳ್ಳೇದೇ ಆಯಿತು. ಒಂದು ಕಳಕೊಂಡರೆ ಇನ್ನೊಂದು ಅವರಿಗೆ ಸಿಗುತ್ತೆ ಎಂಬುದು ಸುಮಳಿಗೆ ಮನವರಿಕೆ ಆಯಿತು ......
ಅನಾಮಿಕ ಬಂದಿದ್ದ, ಸುಮಾಳನ್ನು
ಗಾಢವಾಗಿ ಪ್ರೀತಿಸಿ ಕೊನೆಗೆ ಅನಾಥಳನ್ನಾಗಿ ಬಿಟ್ಟು ಹೋಗಿದ್ದ.
ನಿನ್ನ ಮದುವೆ ಆಗಲು ನಾನು ಅಪ್ಪ ಅಮ್ಮನ ಒಪ್ಪಿಸಿ ಬರುವೆ
ಅಲ್ಲಿ ತನಕ ಇಲ್ಲೇ ಇರು ಎಂದು ಹೇಳಿ ಹೋಗಿದ್ದ,
ಕಾರಣ ಸುಮಾಳಿಗೆ ಮಕ್ಕಳಾಗುವುದಿಲ್ಲ ಎಂದು ಅವಳನ್ನು ಆಶ್ರಮದಲ್ಲಿ ಕೆಲಸ ಮಾಡಲು ಬಿಟ್ಟು ಬಂದಿದ್ದ. ಸುಮಾ ಅಲ್ಲಿ ಕೆಲಸ ಮಾಡುತ್ತಲೇ ಇದ್ದಳು. ವಯಸ್ಸಾದ ಅಜ್ಜಿಯಂದಿರ ಶ್ರುಶ್ರೂಷೆ ಮಾಡಿ ತನ್ನ ಜೀವನದಲ್ಲಿ ನಡೆದ ನೋವನ್ನು ಮರೆತಳು.
ಈವತ್ತು ಬರುವನು, ನಾಳೆ ಬರುವನು ಎಂದು ಹೇಳಿ ಭಕಪಕ್ಷಿಯಂತೆ, ದಾರಿ ಕಾಯುತ್ತಾ ಕುಳಿತ ಸುಮಾಳು.
ಹೀಗೆ ಹಲವು ವರುಷಗಳೇ ಸಂದವು ........
............
.......
......
.......
ಅಲ್ಲಿಗೆ ಅರುಣಂತ ಶ್ರೀಮಂತ ಯುವಕ ಆಶ್ರಮಕ್ಕೆ ವರುಷಕ್ಕೊಮ್ಮೆ ಭೇಟಿಕೊಟ್ಟು ಅಲ್ಲಿನ ಆಶ್ರಮವಾಸಿಗಳಿಗೆ ಊಟ ಕೊಟ್ಟು ಬಡಿಸಿಯೇ ಬರುತ್ತಿದ್ದ. ಅವನಿಗೆ ಮದುವೆ ಮಾಡಿಸಲು ಮನೆಯವರು ಮುಂದಾಗಿದ್ದರು.
ಎಷ್ಟೇ ಹುಡಿಗಿಯನ್ನು
ನೋಡಿದಾಗ ಅದು ಬೇಡ ಇದು ಬೇಡಾ ಎಂದು ಯಾವಾಗಲೂ ಹಿಂದೇಟು ಹಾಕಿದಾಗ ಅವನ ವಯಸ್ಸು ೩೦ ದಾಟಿದಾಗ ಇವನನ್ನು ಯಾರು ಮದುವೆ ಆಗಲು ಮುಂದೆ ಬರುತ್ತಿರಲಿಲ್ಲ. ಕೊನೆಗೆ,
ಸುಮಾಳನ್ನು ನೋಡುವಾಗ ಇವಳನ್ನೇ ಮದುವೆ ಆಗಿ ಬಾಳು ಕೊಡುವೆ ಎಂದು ಹೇಳುತ್ತಿದ್ದ ಅವನ ಅಮ್ಮನಲ್ಲಿ. ಆದರೆ ಅಮ್ಮನಿಗೆ ಮನಸ್ಸು ಬರಲಿಲ್ಲ ಒಬ್ಬನೇ ಹುಡುಗ ವಿದ್ಯಾವಂತ ಒಂದು
"ಪ್ರತಿಷ್ಠಿತ ಕಂಪೆನಿ MD ಯ ಮಗನಿಗೆ ಅನಾಥ ಹುಡುಗಿಯ ತಂದು ಕೊಂಡರೆ ಲೋಕದ ಜನ ಆಡಿಕ್ಕೋಳ್ಳರೆ?" ಎಂದು ಅರುಣನ ಅಮ್ಮನಿಗೆ, ಯಾರು ಏನು ಅಂದರೂ ನಾನು ಸುಮಾಳನ್ನೆ ಮದುವೆ ಆಗುವೆ" ಅನಾಥಹೆಣ್ಣಿಗೆ ಬಾಳು ಕೊಟ್ಟರೆ ಅದಕ್ಕಿಂತ ಶ್ರೇಷ್ಠ ಯಾವುದು ಅಮ್ಮಾ?ನಮ್ಮ ಮನೆಗೆ ಮಹಾಲಕ್ಷ್ಮಿಯೇ ಬರುವಳು ಅಮ್ಮಾ ಎಂದನು ".. ಎಷ್ಟು ಹೇಳಿದರೂ ಅರುಣ್ ನಿರ್ಧಾರ ಬದಲಿಸಲೇ ಇಲ್ಲ. ಕೊನೇಗೆ ಅಪ್ಪ ಅಮ್ಮ ಒಪ್ಪಿಗೆ ಸೂಚಿಸಿದರು. ನಂತರ ಆಶ್ರಮದ, ಯಜಮಾನನಲ್ಲಿ ಮಾತಾಡಿ ಸುಮಾ ಎಂಬ ಹುಡುಗಿಯನ್ನು ನನ್ನ ಮಗನಿಗೆ ತಂದುಕೊಳ್ಳುವೆವು ಎಂದರಂತೆ. ಅದಕ್ಕೆ ನೀವು ಒಂದು ಕೆಲಸ ಮಾಡಬೇಕು ಒಂದು ಶೀಟ್ ಪೇಪರಿಗೆ ಸಹಿ ಹಾಕಿ ಮತ್ತೆ ನಾವು ಮದುವೆ ಮಾಡಿಸುವೆವು ಎಂದರಂತೆ. "ಏನು ನಮ್ಮ ಮೇಲೆ
ನಂಬಿಕೆ ಇಲ್ಲವೇ?ಎಂದು ಕೇಳಿದರು", ಇದೆ ಆದರೆ ಹೇಗೆ ಹೇಳೋದು ಈಗೆಲ್ಲಾ ಎಷ್ಟು ಡೈವೋರ್ಸ್ ಕೇಸುಗಳು ಬರುತ್ತೆ,
ಕೆಟ್ಟ ಕಾಲ ಬಂದರೆ ನಮ್ಮ ಹುಡುಗಿಯ ಬಾಳು
ಹಾಳಾಗುವುದಲ್ಲವೇ?ಎಂದಾಗ ಹೌದೆಂದು ಸುಮ್ಮನಿದ್ದು ಸಹಿ ಹಾಕಿದರು. ಒಂದು ಒಳ್ಳೆಯ ಮೂಹೂರ್ತ ನೋಡಿ
ದೇವಸ್ಥಾನದಲ್ಲಿ ಹಾರ ಬದಲಾಯಿಸಿ ಬಂದರು ಯಾಕೆಂದರೆ ಆವಾಗ ಕೊರೋನಾ ಟೈಮ್ ಯಾರಿಗೂ ಹೇಳಲೇ ಇಲ್ಲ. ಸಂಬಂಧಿಕರನ್ನು ಯಾರನ್ನು ಮದುವೆಗೆ ಕರೆಯಲಾಗಿಲ್ಲ.
ಅನಾಮಿಕ ಸುಮಾಳನ್ನು ಪ್ರೀತಿಸಿ ಮದುವೆ ಆಗಿ ಅವಳ ಬಾಳಿಗೆ ಕತ್ತಲಾದರೂ ಸುಮಮಾತ್ರ ಅವನನ್ನು ತುಂಬಾ ಪ್ರೀತಿಸುತ್ತಿದ್ದಳು. ಆದರೂ ಅವನಿಗೆ ಇವಳ ಮೇಲೆ ಪ್ರೀತಿ ಬಂದಿರದೇ ಅವಳನ್ನು ಆಶ್ರಮಕ್ಕೆ ತಳ್ಳಿಬಿಟ್ಟ ... ಅದರಿಂದ ಹೊರಬರಲು ತುಂಬಾ ಸಮಯ ಕಳೆದಿತ್ತು. ಆಗ ಅವಳಿಗೆ ಪರಿಚಯ ಆಗಿದ್ದದ್ದು ಅರುಣ್ ನನ್ನು ..ದೊಡ್ಡ ಜೀವ
ಸೌಂದರ್ಯದ ರಾಜಕುಮಾರ್ ಎಂಥವರೂ ಸೋಲಬೇಕು ಅಂಥಹ ದೇಹ ಅವನು ಸುಂದರಾಂಗ ಅವನೂ ಸುಮಾಳನ್ನು ನೋಡಿ ಸುಂದರ ಹುಡುಗಿ ಅವನಿಗೆ ಅವಳ ಮೇಲೆ ಪಾಪ ಕಂಡು ನನಗೆ ಪತ್ನಿಯಾಗಿ ಬರುತ್ತಿದ್ದರೆ ಇವಳೇ ನನಗೆ ಜೀವನ ಸಂಗಾತಿ ಎಂದು ದೃಢಸಂಕಲ್ಪ ಮಾಡಿದನು, ಸುಮನಿಗೆ ಅನಾಮಿಕ ಬಂದು ನನ್ನ ಕರೆದುಕೊಂಡು ಹೋಗುವರೆಂದು ದಿನಾ ಬಾಗಿಲ ಬಳಿಗೆ ಬಂದು ಕೂರುತ್ತಿದ್ದಳು ಅವ ಬರಲೇ ಇಲ್ಲ. ಈ ವಿಷಯವನ್ನು ಅರುಣ್ ಆಶ್ರಮದ ಮೆನೇಜರಲ್ಲಿ ಕೇಳಿ ತಿಳಿದುಕೊಂಡ. ಹಿರಿಯರೊಂದಿಗೆ ಮಾತನಾಡಿ ಹೂವಿನ ಹಾರ ಬದಲಾಯಿಸಿದರು ಯಾರನ್ನೂ ಕರೆಯದೇ ಇದ್ದ ಕಾರಣ ಆಶ್ರಮವಾಸಿಗಳಿಗೆ ಸಿಹಿ ಹಂಚುವ ಎಂದು ಇಬ್ಬರೂ ತೀರ್ಮಾನಿಸಿ ಕೊಟ್ಟು ಬಂದರು.
- ಆಶಾ ನೂಜಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ