ಭಾನುವಾರ, ಆಗಸ್ಟ್ 11, 2024

ಏನಿಲ್ಲ...


ಏನಿಲ್ಲ...

ಇಲ್ಲಿ ಏನೂ ಇಲ್ಲಾ ಅನ್ನೋದ್ರಲ್ಲೇ 
ಎಲ್ಲ ಇರುತ್ತೆ, ಮೇಲೆ ಮಾತ್ರ ಏನು ಇಲ್ಲಾ,
ಆದ್ರೆ ಒಮ್ಮೆಮ್ಮೆ ಅನಿಸುತ್ತೆ,
ಜೀವನದಲ್ಲಿ ಏನೂ ಇಲ್ಲಾ,
ಮತ್ತೊಮ್ಮೆ ಅನಿಸೋದು ನಮಗೆ ಏನಿಲ್ಲ...?

ಎಲ್ಲ ಇರುತ್ತೆ, ಆದ್ರೂ ಏನೋ ಇರೋಲ್ಲ,
ಆ ಏನನ್ನೊ ಹುಡುಕೋದ್ರಲ್ಲಿ 
ಜೀವನ ಎಲ್ಲವನ್ನ ಕಳೆದುಕೊಂಡು,
ಮತ್ತೆ ಏನನ್ನೋ ಬಿಟ್ಟು,
ಎಲ್ಲವನ್ನು ಹುಡುಕುತ್ತೆ...

ಎಲ್ಲವನ್ನು ಯೋಚನೆ ಮಾಡಿದಾಗ 
ನನ್ನದು ಅಂತ ಏನು ಇಲ್ಲಾ,
ಮತ್ತೆ ಯೋಚನೆ ಮಾಡಿದಾಗ 
ಅನಿಸೋದು ಜೀವನದಲ್ಲಿ
 ನಾನು ಏನನ್ನಾದರೂ ಮಾಡಬೇಕಿತ್ತಲ್ಲ...

ಎಲ್ಲ ಇದ್ದು ಏನೂ ಇಲ್ಲದಂಗೆ 
ಏನು ಇಲ್ಲದಿದ್ರು ಎಲ್ಲ ಇದ್ದಂಗೆ 
ಬದುಕುವ ಬದುಕೇ ಅದ್ಭುತ,
ಅದಕೆ ಎಲ್ಲ ಬೇಕು ನನಗೆ,
ಆ ಏನೂ ಬೇಡ ನನಗೆ..
ಮಹಾಂತೇಶ್ ಬಿ ಎಂ
ಕೂಡ್ಲಿಗಿ, ವಿಜಯನಗರ ಜಿಲ್ಲೆ 
9731418615

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...