ಜೀವನ....
ಜೀವನವಿದು,
ಆತ ಕೊಟ್ಟ ತೀರದ ಸಾಲ,
ದುಡಿಯಬೇಕು ನಿತ್ಯ
ಬರುವ ತನಕ ತೀರುವ ಕಾಲ...
ಈ ಸಾಲದ ಮೇಲೆ,
ಮತ್ತೆ ಜವಾಬ್ದಾರಿಯ ಬಡ್ಡಿ,
ಬರಿ ಬಡ್ಡಿಗಾಗೆ ಕನಸೆಲ್ಲವನು,
ಒತ್ತೆ ಇಟ್ಟು ಸುಮ್ಮನೆ ದುಡಿ...
ಉಳಿದ ನೆಮ್ಮದಿಯನ್ನಾದರೂ,
ಗಿರವಿ ಇಡಬಹುದಿತ್ತು,
ಅದು ಸಾಲದ ಇನಾಮಿಗೆ
ಮೀಸಲಾಗಿ ಹೋಯ್ತು...
ಕೊನೆಗೂ ತೀರದ ಈ ಜೀವನದ
ಸಾಲಕ್ಕಾಗಿ, ದಿನಾ ದುಡಿಯಬೇಕು,
ತೀರದ ಆ ಒಂದು ದಿನ
ಜೀವವನೇ ಒತ್ತಿ ಇಡಬೇಕು...
ಬಿ ಎಂ ಮಹಾಂತೇಶ
ಕೂಡ್ಲಿಗಿ, ವಿಜಯನಗರ. ಜಿ.
9731418615
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ