ಬಾಳ ತೇರಿನಲಿ
ಮೇಲಿರು ಕೆಳಗಿರು
ಸಾಗಬೇಕು ನೀ ಅನವರತ
ಬಾಳ ತೊರೆಯಲಿ
ತೇಲಿರು ಮುಳುಗಿರು
ಹರಿಯಬೇಕು ನೀ ಅನವರತ
ಬಾಳ ಗಗನದಲಿ
ತಾಣವೊ ಕಾಲವೊ
ಮಿನುಗಬೇಕು ನೀ ಅನವರತ
ಬಾಳ ಗುಡಿಯಲಿ
ನಲಿವೋ ನೋವೋ
ನಮಿಸಬೇಕು ನೀ ಅನವರತ
ಬಾಳ ದಾರಿಯಲಿ
ಏಳೋ ಬೀಳೋ
ನಡೆಯಬೇಕು ನೀ ಅನವರತ
ಬಾಳ ಬಂಡಿಯಲಿ
ಎಡವೋ ಬಲವೋ
ಜೊತೆಯಾಗಬೇಕು ನೀ ಅನವರತ
~ ಅರಬಗಟ್ಟೆ ಅಣ್ಣಪ್ಪ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ