ಭಾನುವಾರ, ನವೆಂಬರ್ 17, 2024

ಕಾಗಿನೆಲೆಯ ಕನಕದಾಸರು...

ಕಾಗಿನೆಲೆಯ ಕನಕದಾಸರು...

ಭಕ್ತಿ ಭಾವಕೆ ಅಜರಾಮರದ ಹೆಸರು ಕನ್ನಡ ಭಾಷೆಯ ವಿಶಿಷ್ಟ ಕೀರ್ತನೆಕಾರರು 
ಯುದ್ಧದಿ ಸೋತ ದಾಸ ಪರಂಪರೆಯ ಹರಿದಾಸರು ಕಾಗಿನೆಲೆಯ ವಾಸಿ ನಮ್ಮ ಶ್ರೀ ಕನಕದಾಸರು

ಹಾವೇರಿಯ ಬಾಡ ಗ್ರಾಮದ ತಿಮ್ಮಪ್ಪ ನಾಯಕ 
ಚಿನ್ನದಂತ ಮಗನ ಹೆತ್ತರು ಬಚ್ಚಮ್ಮ ಬೀರಪ್ಪನಾಯಕ 
ವಿಜಯನಗರ ಸಾಮ್ರಾಜ್ಯದ ಗಂಡೆದೆಯ ದಂಡನಾಯಕ 
ತಿರುಪತಿ ತಿಮ್ಮಪ್ಪನ ಆಶೀರ್ವಾದದ ಕುಲದೀಪಕ

ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರಾಗಿ 
ಉಡುಪಿಯ ಕನಕನ ಕಿಂಡಿಯ ರೂವಾರಿಯಾಗಿ
ಕೃಷ್ಣನ ಪ್ರೀತಿಯ ಭಕ್ತರಾದರು ಲೋಕ ಕಲ್ಯಾಣಕ್ಕಾಗಿ 
ಜಾತಿ ಪದ್ಧತಿಯ ತಾರತಮ್ಯ ತಿರಸ್ಕರಿಸಿದರು ಮನುಕುಲಕ್ಕಾಗಿ

ಕಾಗಿನೆಲೆ ಆದಿಕೇಶವರಾಯರ ಅಂಕಿತದಲಿ 
ಕೀರ್ತನೆಗಳ ರಚಿಸಿ ಹಾಡಿದರು ಕೃಷ್ಣನ ಸ್ಮರಣೆಯಲಿ ಮೋಹನತರಂಗಿಣಿ ನಳಚರಿತ್ರೆ ಕೃತಿಗಳಲಿ 
ಹಲವು ವೈಶಿಷ್ಟ್ಯತೆ ಗಳು ತಲೆಯೆತ್ತಿವೆ ಪುಟಗಳಲಿ

ಮೂಡಿಸಿದ ಶ್ರೀ ಕೃಷ್ಣನ ಅಪ್ರತಿಮ ಭಕ್ತಿಯು 
ನಾಡಿನೆಲ್ಲಡೆ ಹಬ್ಬಿದೆ ಕನಕದಾಸರ ಕೀರ್ತಿಯು 
ಎತ್ತ ನೋಡಿದರತ್ತ ಸ್ಥಾಪಿಸಲಾಗಿದೆ ನಿಮ್ಮ ಮೂರ್ತಿಯು 
ಹುಟ್ಟಿ ಬರಲಿ ದಾಸ ಶ್ರೇಷ್ಠ ಕನಕದಾಸರು ಮನೆಮನೆಯಲ್ಲಿಯು
ಶ್ರೀ ಮುತ್ತು ಯ.ವಡ್ಡರ
 ಶಿಕ್ಷಕರು
 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿ 
ಬಾಗಲಕೋಟ 
9845568484

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...