ಸಾವೆಂದರೆ
ಹುಟ್ಟು ಉಚಿತ
ಸಾವು ನಿಶ್ಚಿತ
ಬದುಕು ಮೂರು ದಿನದ
ನಾಟಕ ಮಾಡಿ ಮರೆಯಾಗಬೇಕು
ಎಲ್ಲರೂ ಇದು ಸತ್ಯ..
ನೂರು ಜನ ನೆಂಟರು
ನನಗೆ ಇರುವರು
ಸಾವಿರಾರು ರೂಪಾಯಿ
ನಾನು ದುಡುಯುತ್ತಿದ್ದವನು
ಆಸ್ತಿ, ಅಂತಸ್ತು,ಅಧಿಕಾರ ನನ್ನೆಂದು
ಎಂದು ಸಾಕಷ್ಟು ಮಾಡಿರುವೆನು
ಈಗ ಎಲ್ಲವನ್ನೂ ಬಿಟ್ಟು
ಬರೀ ಗೈಯಲ್ಲಿ ಹೋಗುತ್ತಿರುವನು...
ಬದುಕು ಒಂದು ನಶ್ವರ
ಆತ್ಮವು ಒಂದೇ ಪರಿಹಾರ
ದೇಹ ಮಣ್ಣಾಗುವುದು ತಿಳಿದಿಲ್ಲ
ದೇಹ ಅಗ್ನಿಯಲ್ಲಿ ಸುಟ್ಟಿ
ಭೂದಿಯಾಗುವುದು ನನಗೆ ತಿಳಿದಿಲ್ಲ
ಸಾವು ನಿಶ್ಚಿತ
ಹುಟ್ಟು ಉಚಿತ
ಕೊನೆಗೆ ಎಲ್ಲರೂ ಒಂದು
ದಿನ ತೊರೆದು ಹೋಗಬೇಕು
ನಮ್ಮ ನಿಲ್ದಾಣದ ಹತ್ತಿರ ಬಂದಾಗ
ಕೊನೆಯ ಗಳಿಕೆಯ ಅಂತ್ಯ...
ಕಾರ್ತಿಕ್...✍️
( ಶ್ರವಣ ಬೆಳಗೊಳ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ