ಮಗು ಮರಣಿಸಿದ ಮಾರನೆಯ ದಿನ
ಸೂರ್ಯನಿರುವುದಿಲ್ಲ
ಮನದ ತುಂಬ ಕಾರ್ಮೋಡಗಳ ಸುಳಿ
ಮಗು ಮರಣಿಸಿದ ಮಾರನೆಯ ದಿನ
ಮನೆಯಂಗಳದ ಹೂವರಳುವುದಿಲ್ಲ
ಬಾಡಿದ ಕಂಗಳ ನಡುವಲಿ ಕೆಂಡದೋಕುಳಿ
ಮಗು ಮರಣಿಸಿದ ಮಾರನೆಯ ದಿನ
ಅನ್ನ ಬೇಯುವುದಿಲ್ಲ
ಸಂಕಟ ತುಂಬಿದ ಹೊಟ್ಟೆಯೊಲೆ ತುಂಬ ಬೂದಿ
ಮಗು ಮರಣಿಸಿದ ಮಾರನೆಯ ದಿನ
ಹಳೆಯ ಜಗತ್ತನ್ನೆಲ್ಲ ಕಳೆದುಕೊಂಡು
ಮತ್ತದೇ ಶೂನ್ಯದಲ್ಲಿ ನಿಲ್ಲುವುದು ಹೊಸ ಜಗತ್ತು
~ ಅರಬಗಟ್ಟೆ ಅಣ್ಣಪ್ಪ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ