ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ್ಕಳು ಜನಿಸುತ್ತಾರೆ. ಮೊದಲನೆಯವಳು ಗಂಗೆ ಇವಳು ನೋಡಲು ತುಂಬಾ ಸುಂದರವಾಗಿ ಜನಿಸಿರುತ್ತಾರೆ, ಎರಡನೆಯವಳು ರಂಗವ್ವ ಇವಳು ತಾಯಿಯನ್ನು ಹೋಲುತ್ತಾಳೆ, ಇನ್ನು ಮೂರನೆಯವಳು ಈ ಕಥಾನಾಯಕಿ ಕುಸುಮ. ಇವಳು ಹೆಸರಿಗೆ ತಕ್ಕಂತೆ ಹೂವಿನಷ್ಟೇ ಮೃದು ಸ್ವಭಾವದವಳು, ಇನ್ನು ನಾಲ್ಕನೇಯವಳೇ ಶಂಕರಿ, ಕೊನೆಯ ಮಗಳೆಂದು ಎಲ್ಲರೂ ತುಂಬಾ ಮುದ್ದಿನಿಂದ ನೋಡಿಕೊಳ್ಳುತ್ತಿರುತ್ತಾರೆ.
ಕುಸುಮಳಿಗೆ ಹತ್ತು ವರ್ಷವಿರುವಾಗಲೇ ಅವಳ ತಂದೆ ಸಾವನಪ್ಪುತ್ತಾರೆ, ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು ಮುಂದಿನ ಜೀವನ ಹೇಗೆ ಎಂದು ಎಲ್ಲರೂ ಚಿಂತಿಸುತ್ತಿರುವಾಗ, ಆಗ ಗಂಗೆ ತಾಯಿಯ ಬಳಿ, ಬಂದು ಅವ್ವ ನಮಗೆ ಜೀವನ ಮಾಡಲು ಆಸ್ತಿ ಏನು ಇಲ್ಲ,ಇದ್ದ ಸ್ವಲ್ಪ ಆಸ್ತಿಯನ್ನು ಅಪ್ಪ ದೊಡ್ಡಪ್ಪನಿಗೆ ಮರೀಬಿಟ್ಟಿದ್ದಾರೆ, ಮತ್ತೆ ದೊಡ್ಡಪ್ಪನಲ್ಲಿ ಸ್ವಲ್ಪ ಜಮೀನು ಕೇಳಿ ನೋಡೋಣ ಎನ್ನುತ್ತಾಳೆ. ಆಗ ರಂಗವ್ವ ಬೇಡ ಮತ್ತೆ ದೊಡ್ಡಪ್ಪ ಕೊಡುತ್ತಾರೋ ಇಲ್ಲವೋ ಎನ್ನುತ್ತಾಳೆ. ಹೇಗಾದರೂ ಆಗಲಿ ಕೇಳಿ ನೋಡೋಣ ಎಂದು ಚಿಕ್ಕ ಮಗು ಶಂಕರಿಯನ್ನು ಕರೆದುಕೊಂಡು ಐದು ಜನರು ದೊಡ್ಡಪ್ಪನ ಮನೆಗೆ ಬರುತ್ತಾರೆ. ಅವಳ ದೊಡ್ಡಪ್ಪ ತುಂಬಾ ಉದರಿ, ಇವರ ಕುಟುಂಬದಲ್ಲಿ ದುಡಿಯಲು ಯಾರು ಇಲ್ಲ ಬರೀ ಹೆಣ್ಣುಮಕ್ಕಳು ಅವರಾದರೂ ದುಡಿದು ತಿನ್ನಲಿ ಎಂದು ತನ್ನ ಮಕ್ಕಳ ವಿರೋಧ ಕಟ್ಟಿಕೊಂಡು ಅವರಿಗೆ ಒಂದು ಎಕರೆ ಜಮೀನನ್ನು ದಾನ ಪತ್ರ ಮಾಡಿಕೊಡುತ್ತಾರೆ. ನಂತರ ಮಕ್ಕಳನ್ನು ಕೂರಿಸಿಕೊಂಡು ಜಮೀನಿನಲ್ಲಿ ಏನಾದರೂ ಬೆಳೆ ಬೆಳೆದು ಬದುಕು ನಡೆಸಿರಿ ಏನಾದರೂ ಸಹಾಯ ಬೇಕಾದರೆ ಕೇಳಿ ಎಂದು ಹೇಳಿಕಳಿಸುತ್ತಾರೆ. ಹೆತ್ತ ತಾಯಿ ನಾಲ್ಕು ಜನ ಹೆಣ್ಣು ಮಕ್ಕಳನ್ನು ಕೂಡಿಸಿಕೊಂಡು ನಿಮ್ಮ ಅಪ್ಪನಿಗೆ ಎಷ್ಟು ಹೇಳಿದರೂ ಕೇಳಲಿಲ್ಲ ಗಂಡು ಮಗು ಬೇಕೆಂಬ ಹಂಬಲದಿಂದ, ನಾಲ್ಕು ಜನ ಹೆಣ್ಣುಮಕ್ಕಳನ್ನು ನನ್ನ ಕೈಗೆ ನೀಡಿ ಕಣ್ಣು ಮುಚ್ಚಿದ್ದಾನೆ. ಈಗ ನಿಮ್ಮ ಜವಾಬ್ದಾರಿ ನನ್ನ ಹೆಗಲ ಮೇಲಿದೆ ನೀವುಗಳು ಕಷ್ಟಪಟ್ಟು ದುಡಿದು ಮುಂದೆ ಬರಬೇಕು ಎಂತಹ ಕಷ್ಟ ಕಾಲಗಳು ಬಂದರೂ ಅಡ್ಡದಾರಿ ಹಿಡಿಯಬಾರದು ಎಂದು ನಾಲ್ಕು ಜನ ಹೆಣ್ಣುಮಕ್ಕಳಿಂದ ಭಾಷೆ ಪಡೆಯುತ್ತಾಳೆ. ಭಾಷೆಯ ನೀಡಿದ ಮಕ್ಕಳು ದೊಡ್ಡಪ್ಪ ನೀಡಿದ ಜಮೀನಿನಲ್ಲಿ ದುಡಿಯಲು ಹೊರಡುತ್ತಾರೆ ಆದರೆ ಅದಕ್ಕೆ ಗೊಬ್ಬರ, ಬೀಜ,ಇದಕ್ಕೆಲ್ಲಾ ಹಣ ಬೇಕಾದಾಗ, ಮತ್ತೆ ದೊಡ್ಡಪ್ಪನಲ್ಲಿ ಸಹಾಯ ಬಿಡಲು ಮನಸ್ಸು ಒಪ್ಪುವುದಿಲ್ಲ ಮೊದಲ ಮಗಳಿಗೆ ಬೇರೆಡೆಗೆ ಕೂಲಿ ಕೆಲಸಕ್ಕಾಗಿ ಹೊರಡುತ್ತಾಳೆ ಅವಳ ಜೊತೆ ಅವಳ ತಂಗಿ ರಂಗವ್ವಕೂಡ ಹೊರಡುತ್ತಾಳೆ, ತಾಯಿಯನ್ನು, ಚಿಕ್ಕ ಮಗು ಶಂಕರಿಯನ್ನು ನೋಡಿಕೊಳ್ಳುವ ಜವಾಬ್ದಾರಿ, ಕುಸುಮಳಾ ಹೆಗಲಮೇಲೆ ಬೀಳುತ್ತದೆ. ಇದರ ಮಧ್ಯೆ ವಿದ್ಯೆ ಎಂಬುದು ನಾಲ್ಕು ಜನ ಹೆಣ್ಣು ಮಕ್ಕಳಿಗೆ ಕನಸಾಗಿಯೇ ಉಳಿಯುತ್ತದೆ,ಆದರೂ ಚಿಕ್ಕ ಮಗಳು ಶಂಕರಿ ಯನ್ನು ಕೂಲಿನಾಲಿ ಮಾಡಿಯಾದರೂ ಓದಿಸಬೇಕೆಂದು ಈ ಮೂರು ಜನ ಅಕ್ಕಂದಿರು ಹಂಬಲ. ಈ ರೀತಿ ಕೂಲಿ ಕೆಲಸಕ್ಕೆ ಹೋದ ಜಾಗದಲ್ಲಿ ಅಲ್ಲಿ ಕೂಲಿ ಕೆಲಸಕ್ಕಾಗಿ ಬಂದಿದ್ದ ಸೋಮಣ್ಣ ಎಂಬ ಹುಡುಗ ಗಂಗೆಯ ರೂಪಕ್ಕೆಮಾರು ಹೋಗುತ್ತಾನೆ,ಅವನು ಅವರ ತಂದೆ ತಾಯಿಗೆ ವಿಷಯ ತಿಳಿಸುತ್ತಾನೆ. ಗಂಗೆಯ ಮನೆಯ ಪರಿಸ್ಥಿತಿ ತಿಳಿದ ಅವರು, ಗಂಗೆಯ ಮನೆಯವರಿಗೆ ಯಾವುದೇ ರೀತಿಯ ತೊಂದರೆಯನ್ನು ಕೊಡದೆ ಒಂದು ದೇವಸ್ಥಾನದಲ್ಲಿ ಮಗನ ಕೈಯಿಂದ ಗಂಗೆಯ ಕೊರಳಿಗೆ ತಾಳಿ ಕಟ್ಟಿಸಿ ಅವಳನ್ನು ಮನೆಯ ಸೊಸೆಯಾಗಿ ಸ್ವೀಕರಿಸುತ್ತಾರೆ. ಆದರೆ ತಂಗಿಗೆ ತಾಯಿ ಮತ್ತು ಮೂರು ಜನ ತಂಗಿಯರನ್ನು ಬಿಟ್ಟುಹೋಗುವ ಮನಸ್ಸಿಲ್ಲ ತಾಯಿಯೂ ನಮ್ಮ ಪಾಡು ನಮ್ಮದು ನೀನು ಸುಖವಾಗಿರು ಎಂದು ಹರಸಿ ಕಳಿಸುತ್ತಾಳೆ. ಒಲ್ಲದ ಮನಸ್ಸಿನಿಂದ ಗಂಡನ ಮನೆ ಸೇರುತ್ತಾಳೆ ಗಂಗೆ ಇದರಂಗವಾಗಿ ಮದುವೆಯ ವಯಸ್ಸು ಬರುತ್ತದೆ ತಂದೆಯಂತೆ ಜವಾಬ್ದಾರಿ ಹೊತ್ತು ನಾದಿನಿಯರನ್ನು ಕಾಪಾಡುತ್ತಿದ್ದ ಸೋಮಣ್ಣ, ಇವರೆಲ್ಲರ ಆಸೆಯಂತೆ ಚಿಕ್ಕಮಗಳು ಶಂಕರಿಯನ್ನು ಓದಿಸುತ್ತಿರುತ್ತಾನೆ. ಶಂಕರಿ 7ನೇ ತರಗತಿಯಲ್ಲಿ ಓದುತ್ತಿರುತ್ತಾರೆ ಸೋಮಣ್ಣ ತನ್ನ ಊರಿನವನೇ ಆದ ಸತೀಶ ಇವನು ಒಳ್ಳೆಯ ಹುಡುಗ, ಇವನಿಗೆ ತನ್ನ ನಾದಿನಿ ರಂಗವನ್ನು ಕೊಟ್ಟು ಮದುವೆ ಮಾಡುತ್ತಾನೆ ಸತೀಶ ಹೆಂಡತಿಯನ್ನು ಚೆನ್ನಾಗಿ ಮಾಡಿಕೊಳ್ಳುತ್ತಿರುತ್ತಾರೆ ಆದರೆ ಅವನ ಮನೆಯವರಿಗೆ ಅವರ ಬಳಿ ಇರುವ ಒಂದು ಎಕರೆ ಜಮೀನಿನ ಮೇಲೆ ಆಸೆ ಅವನ ತಂದೆ-ತಾಯಿ ಅಣ್ಣ,ಎಲ್ಲರೂ ಸೇರಿ ಅವನ ತಲೆ ಕೆಡಿಸುತ್ತಾರೆ ಒಂದು ದಿನ ಸತೀಶ ನಿಮ್ಮಲ್ಲಿ ಇರುವ ಒಂದು ಎಕರೆ ಜಮೀನನ್ನು ನನ್ನ ಹೆಸರಿಗೆ ಬರೆಯಿರಿ ಇರುವ ಇಬ್ಬರು ಹೆಣ್ಣು ಮಕ್ಕಳ ಜವಾಬ್ದಾರಿ ನನ್ನದು ಎಂದು ಹೇಳುತ್ತಾನೆ, ಗಂಗೆಯ ಗಂಡ ತುಂಬಾ ಒಳ್ಳೆಯವನು, ನನಗೆ ಆಸ್ತಿ ಬೇಡವೆಂದು ಹೇಳುತ್ತಾನೆ ಹಾಗಾಗಿ ಆಸ್ತಿಯನ್ನು ಸತೀಶನ ಹೆಸರಿಗೆ ಬರೆಯುತ್ತಾರೆ ಅವಳಿಗೆ ಮದುವೆಯ ವಯಸ್ಸು ಬಂದಾಗ, ಸತೀಶನ ತಲೆಯಲ್ಲಿ ನಾನು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಬೇಕು ಎಂಬ ಆಲೋಚನೆ ಬರುತ್ತದೆ. ಆಗ ಅವನು ತನ್ನ ಪಕ್ಕದ ಊರಿನವನೇ ಆದ ಎಲ್ಲಾ ಕೆಟ್ಟ ಚಟಗಳಿಗೆ ದಾಸನಾಗಿದ್ದ ರಮೇಶ ಎಂಬ ಹುಡುಗನಿಗೆ ಕೊಟ್ಟು ಮದುವೆ ಮಾಡಲು ಯೋಚಿಸುತ್ತಾನೆ. ಈಗಾಗಲೇ ಅವನಿಗೆ ಎರಡು ಮದುವೆ ಆಗಿರುತ್ತದೆ,ಹೆಂಡತಿಯರನ್ನು ಬಿಟ್ಟು ಜೀವನ ನಡೆಸುತ್ತಿರುತ್ತಾನೆ ನೋಡಲು ತುಂಬಾ ಸುಂದರವಾಗಿರುತ್ತದೆ ಅವನ ಮುಂದೆ ಎಲ್ಲ ಕೆಟ್ಟ ಚಟಗಳು ಅವಳಿಗೆ ತಿಳಿಯುವುದಿಲ್ಲ, ಸತೀಶ ತಿಳಿಸುವುದು ಇಲ್ಲ, ಇತ್ತ ಗಂಗೆಗೆ ಒಂದು ಆಗದ ಕಾದಿರುತ್ತದೆ. ದೇವರಂತೆ ಇದ್ದ ಗಂಡನು, ಮೂಳೆ ಕ್ಯಾನ್ಸರ್ ಬಲಿಯಾಗಿರುತ್ತಾರೆ ಅವನನ್ನು ಉಳಿಸಿಕೊಳ್ಳಲು ಗಂಗೆ ಹಗಲು-ಇರುಳು ಕಷ್ಟಪಡುತ್ತಿರುತ್ತಾರೆ. ಗಂಡನ ಕೈ ಹಿಡಿದ ಅವನ ಜೊತೆ ಹೊರಗೆ ಹೋಗಬೇಕು, ಕೈ, ಕೈ, ಹಿಡಿದು ಹೊಲಗದ್ದೆಗಳಲ್ಲಿ ಓಡಾಡಬೇಕೆಂಬ ಹಂಬಲ, ಆದರೆ ರಮೇಶ ಇದಾವುದಕ್ಕೂ ಒಪ್ಪುವುದಿಲ್ಲ,ಒಂದು ದಿನ ತನ್ನ ಹೆಂಡತಿಯನ್ನು ತನ್ನ ಊರಿಗೆ ಕರೆತರುತ್ತಾನೆ ರಮೇಶ. ಅಲ್ಲಿ ಗಂಡನ ನಿಜರೂಪ ತಿಳಿದು ಕುಸಿದು ಬೀಳುತ್ತಾರೆ ಕುಸುಮ ಹೆಣ್ಣುಗಳನ್ನು ಮನೆಗೆ ಕರೆತರುವುದು,ಅವರಿಗೆ ಕುಸುಮ ದಾಸಿಯಂತೆ ಸೇವೆ ಮಾಡಬೇಕೆಂದು ತಿಳಿಸುತ್ತಾನೆ. ಅದಕ್ಕೆ ಅವಳು ಒಪ್ಪದಿದ್ದರೆ ಹೊಡೆದು-ಬಡಿದು ಹಿಂಸಿಸುತ್ತಾನೆ, ಇದೇ ರೀತಿ ಮಾಡಿ ತಂದೆ ಅವನಿಗಾಗಿ ನೀಡಿದ ಆಸ್ತಿಯನ್ನೆಲ್ಲ ಕಳೆಯುತ್ತಾನೆ. ಶಂಕರಿಗೆ ಮುಂದೆ ವಿದ್ಯಾಭ್ಯಾಸ ಮುಂದುವರಿಸಲು ಆಗುವುದಿಲ್ಲ, ತಂದೆಯಂತೆ ಇದ್ದ ಭಾವ ಕಾಯಿಲೆಯಿಂದ ನರಳುತ್ತಿರುತ್ತಾರೆ. ಇವರಲ್ಲಿ ಇದ್ದ ಒಳ್ಳೆಯತನಕ್ಕೆ ಊರಿನವರು ಇವರನ್ನು ಕಾಪಾಡುತ್ತಿರುತ್ತಾರೆ. ಒಂದು ದಿನ ಶಂಕರಿ ತಾಯಿಗೆ ವಯಸ್ಸಾಗಿದೆ,ನಾನು ದುಡಿಯಲು ಆಗುವುದಿಲ್ಲ,ಇದ್ದ ಆಸ್ತಿಯನ್ನು ಭಾವ ಕಿತ್ತುಕೊಂಡಿದ್ದಾರೆ, ಮುಂದೆ ನಮ್ಮ ಜೀವನ ಹೇಗೆ ಎಂದು ಯೋಚಿಸುತ್ತಾ ಹೊಲದಲ್ಲಿ ನಡೆದು ಬರುವಾಗ ಹಾವು ಕಡಿದು ಸಾವನ್ನಪ್ಪುತ್ತಾಳೆ. ವಿಷಯ ತಿಳಿದು ಕುಸುಮ ದುಃಖಿಸುತ್ತಾಳೆ, ಇಂತಹ ಸಮಯದಲ್ಲೂ ಕೂಡ ತಂಗಿಯ ಮುಖ ನೋಡಲು ಗಂಡ ಕುಸುಮಗಳನ್ನು ಕಳಿಸುವುದಿಲ್ಲ. ಇದನ್ನೆಲ್ಲ ಸಹಿಸಿಕೊಂಡಿದ್ದ ಕುಸುಮಳಿಗೆ ಒಂದು ದಿನ ದೊಡ್ಡ ಆಘಾತ ಕಾದಿರುತ್ತದೆ. ಆಸ್ತಿಯನ್ನೆಲ್ಲಾ ಕಳೆದು ಮುಂದೆ ಮೋಜು ಮಾಡಲು ಹಣ ಇಲ್ಲದಾದಾಗ ರಮೇಶನಿಗೆ ನೆನಪಾಗುವುದೇ ಹೆಂಡತಿ ಕುಸುಮ. ಅವಳನ್ನು ಪರಪುರುಷರ ಬಳಿ ಕಳಿಸಲು ನಿರ್ಧರಿಸುತ್ತಾನೆ. ಇದನ್ನು ಹೇಗೆ ತಿಳಿದುಕೊಂಡ ಕುಸುಮ ಗಂಡನ ಬಂಧನದಿಂದ ತಪ್ಪಿಸಿಕೊಂಡು,ತವರು ಮನೆ ಸೇರುತ್ತಾಳೆ. ಇವಳಲ್ಲಿ ಇದ್ದ ಒಳ್ಳೆಯತನಕ್ಕೆ,ಊರಿನವರೆಲ್ಲ ಅವಳ ಗಂಡನ ಮೇಲೆ ದೂರು ನೀಡಿ,ಜೈಲಿಗೆ ಕಳಿಸುತ್ತಾರೆ. ಈ ವೇಳೆ ದೇವರಂತೆ ಇದ್ದ ದೊಡ್ಡಪ್ಪ ಸಾವಿಗೆ ಶರಣಾಗುತ್ತಾರೆ. ತಂಗಿಯು ಸಾವನ್ನಪ್ಪಿದ್ದಾಳೆ ತಂದೆಯಂತೆ ಇದ್ದ ಭಾವ ಹಾಸಿಗೆ ಹಿಡಿದಿದ್ದಾರೆ ಮುಂದಿನ ಜೀವನ ಹೇಗೆ ಎಂದು ಚಿಂತಿಸುತ್ತಿರುವಾಗ,. ಊರಿನಲ್ಲಿ ಶ್ರೀಮಂತರ ಮನೆಯ ಮಗಳು ಹೊರದೇಶದಲ್ಲಿ ಇರುತ್ತಾರೆ. ಅವರಿಗೆ ಹೊರದೇಶದಲ್ಲಿ ಒಬ್ಬರು ಸಹಾಯಕ್ಕೆ ಬೇಕಾಗಿರುತ್ತಾರೆ. ಆಗ ಕುಸುಮಾಳ ನ್ನು ಕರೆದು ನಿನ್ನ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸಿಬಿಡು,ಅದರ ಖರ್ಚುವೆಚ್ಚವನ್ನು ನಾನು ನೋಡಿಕೊಳ್ಳುತ್ತೇನೆ.ನೀನು ನಮ್ಮೊಂದಿಗೆ ಹೊರದೇಶಕ್ಕೆ ಬಾ ನಿನ್ನನ್ನು ಸುಖವಾಗಿ ನೋಡಿಕೊಳ್ಳುತ್ತೇನೆ, ಎಂದು ಹೇಳುತ್ತಾರೆ. ಯೋಚಿಸಿ ತಿಳಿಸುವುದಾಗಿ ಹೇಳಿ ಕುಸುಮ ಮನೆಗೆ ಬರುತ್ತಾಳೆ. ಹಾಸಿಗೆ ಹಿಡಿದು ಮಲಗಿರುವ ತಾಯಿಯನ್ನು ನೋಡುತ್ತಾಳೆ, ಗಂಡನನ್ನು ಕಳೆದುಕೊಂಡು ನಮ್ಮನ್ನು ಕಷ್ಟಪಟ್ಟು ಸಾಕಿದ ತಾಯಿಯನ್ನು ಯಾರದು ವಶಕ್ಕೆ ಒಪ್ಪಿಸಲು ಕುಸುಮಳಿಗೆ ಮನಸ್ಸಾಗುವುದಿಲ್ಲ.ಅದರಲ್ಲೂ ವೃದ್ಧಾಶ್ರಮಕ್ಕೆ ಸೇರಿಸಲು ಮನಸ್ಸು ಒಪ್ಪುವುದೇ ಇಲ್ಲ. ಮತ್ತೆ ಆ ಮನೆಯಿಂದ ಕರೆ ಬರುತ್ತದೆ ಕುಸುಮಳಿಗೆ. ಇಲ್ಲ ನಾನು ನನ್ನ ತಾಯಿಯನ್ನು ಬಿಟ್ಟು ಬರುವುದಿಲ್ಲವೆಂದು ಹೇಳಿ ಮನೆಗೆ ಬರುತ್ತಾಳೆ. ಗೋಡೆಗೆ ಒರಗಿ ಕುಳಿತು, ದೇವರೇ ಮುಂದಿನ ಜನ್ಮ ಎಂದು ಒಂದಿದ್ದರೆ ಒಳ್ಳೆಯ ಜೀವನವನ್ನು ಕರುಣಿಸು ಎಂದು ಹೇಳಿ, ಕಣ್ಣು ಮುಚ್ಚುತ್ತಾಳೆ. ಅವಳಿಗೆ ಅರಿವಿಲ್ಲದೆ ಎರಡು ಹನಿ ಕಂಬನಿ ಅವಳ ಕೆನ್ನೆಯ ಮೇಲೆ ಜಾರುತ್ತದೆ.ಹೊರದೇಶಕ್ಕೆ ಹೋಗುವ ಅವಕಾಶ ದೊರೆತ ಕೂಡಲೇ, ವೃದ್ಧ ತಂದೆ-ತಾಯಿಯರನ್ನು ಮರೆತು, ಆಕಾಶದಲ್ಲಿ ಹಾರಿ ಹೋಗುವ ಗಂಡು ಮಕ್ಕಳು, ನಮ್ಮ ಕುಸುಮಾಳ ಮುಂದೆ ನಾಚ ಬೇಕಲ್ಲವೇ?
- ಎಂ. ಆಶಾಕಿರಣ್