ಮಾಂಗಲ್ಯ ಯೋಗದ ನಾಯಕಿಗೆ
ಮಾಂಗಲ್ಯ ಭಾಗ್ಯ ದೊರಕಲಿಲ್ಲ ಏಕೆ ಸಖಿ
ಸರ್ವಸ್ವವನ್ನು ತ್ಯಾಗ ಮಾಡಿದ ದೇವತೆಗೆ
ಸಂಸಾರ ಸುಖವು ಲಭಿಸಲಿಲ್ಲ ಏಕೆ ಸಖಿ
ನಾಗಕನ್ನಿಕೆಯಂತ ಅಭಿನೇತ್ರಿಗೆ ಜೀವನ ಕೈಗೆಟುಕಲಿಲ್ಲವೇಕೆ
ನಂಬರ್ ಒನ್ ನಾಯಕಿ ಅನಿಸಿಕೊಂಡ ಲೀಲಾವತಿಗೆ
ಜೀವನ ಶೂನ್ಯ ಎನಿಸಿತಾದರೂ ಏಕೆ ಸಖಿ
ಬಣ್ಣ ಬಣ್ಣದ ಲೋಕದಲ್ಲಿ
ತೊಳೆದರೂ ಬಣ್ಣ ಕಳೆದುಕೊಳ್ಳದ
ಬದುಕು ಕಟ್ಟಿಕೊಂಡ ಗಟ್ಟಿಗಿತ್ತಿಯ ಜೀವನ ತಲ್ಲಣಿಸಿತಾದರೂ ಏಕೆ ಸಖಿ
ಒಂಟಿ ಹೆಣ್ಣಿನ ಜೀವನ
ಅಂದುಕೊಂಡಷ್ಟು ಸುಲಭವಲ್ಲ
ಅವಳೆಲ್ಲ ಏಳು ಬೀಳುವಿನಲ್ಲಿ ಕಂದ ಜೊತೆಗಿರುವನಲ್ಲ
ಆದರೂ ಬದುಕು ಸಾರ್ಥಕವೆನಿಸಲಿಲ್ಲ ಅನಿಸಿತ್ತಾದರೂ ಏಕೆ ಸಖಿ
ಹೆಣ್ಣು ಕುಲಕ್ಕೆ ಮಾದರಿಯಾದ ಮಹಿಳೆ
ಸಮಾಜಕ್ಕೆ ಕೊಟ್ಟ ಕೊಡುಗೆ ಕಡಿಮೆಯಲ್ಲ ಹರಿಪ್ರಿಯೆ
ಬ್ರೂಣ ಹತ್ಯೆ ಮಾಡುವವರು ಒಮ್ಮೆ ಯೋಚಿಸುವುದಿಲ್ಲ ಏಕೆ ಸಖಿ.
ಸಿದ್ದಾಪುರ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ