ಗುರುವಾರ, ಅಕ್ಟೋಬರ್ 13, 2022

ನೆನಪುಗಳು ಸಾಯುವುದಿಲ್ಲ (ಕವಿತೆ) - ಬಿ.ಹೆಚ್.ತಿಮ್ಮಣ್ಣ.

ಹೆತ್ತವ್ವ ಕಲಿಸಿದಳು ಅಮ್ಮ ಎಂದು 
ಅಪ್ಪನು ಹೆಗಲ ಮೇಲೆ ಹೊತ್ತುಕೊಂಡು 
ಅಕ್ಕನ ಕಂಕುಳಲ್ಲಿ ಕುಂತು ಬೆಳೆದು 
ತಂಗಿಯ ಜೊತೆಗೆ ಕುಂಟೆಬಿಲ್ಲೆ ಆಡಿ 
ತಮ್ಮನೊಂದಿಗೆ ಲಗೋರಿಯಲ್ಲಿ ಕೂಡಿ 
ಗೆಳೆಯರೊಟ್ಟಿಗೆ ಮರಕೋತಿಯಲ್ಲಿ ಸೇರಿ 
ಈಜು ಆಡಿ,ತೋಟಕ್ಕೆ ನುಗ್ಗಿ ಮಾಲೀಕನ ಕೈಗೆ ಸಿಕ್ಕಿ 
ಬುದ್ಧಿ ಮಾತ ತಿಳ್ಕೊಂಡು ಕಡೆಗೂ ಬಾಲ್ಯ ಕಳೆಯಿತು
ನೆನೆಸಿಕೊಂಡರೆ ಮೈನಿಗುರಿತು
ಉಪ್ಪಿಟ್ಟು ಸಾಲಿ ಮುಗಿಯಿತು

ಚಿಣ್ಣರಂಗಳಕ ಇಟ್ಟೀವಿ ಕಾಲ
ಅಆಇಈ ತಿದ್ದಿಸಿದರು ಪಾಟಿಮ್ಯಾಲ
ಹೆಗಲಿಗಿ ಹಾಕೊಂಡು ಹೊಂಟೀವಿ ಪಾಟಿಚೀಲ
ಬಾಯಾಗ ತಿನ್ನುತ್ತ ನಡೆದೀವಿ ಎಳ್ಳುಂಡಿಬೆಲ್ಲ

ಸಣ್ಸಾಲಿ ಮಾಸ್ತರ ಕಲಿಸ್ಯಾನ ಅಕ್ಷರ
ಪಾಟ್ಯಾಗ ಹಾಕ್ಯಾರ ಕೈಬರ
ಪ್ರಾಥಮಿಕ ಮುಗಿದರು ಮರಿವಲ್ದು ಅವ್ರೆಸ್ರ
ಅಚ್ಚೊತ್ತಿ ಕುಂತಾವ ಎದಿಯಾಗ ಪೂರ

ಪ್ರೌಢಕ್ಕ ಬಂದೇವ ಅರೆ ಜ್ಞಾನ ತಿಳಿದೇವ 
ಗೆಳೆಯರೆಲ್ಲರೂ ಕೂಡಿ ಆಡಿದೇವ 
ನಮಗೆಲ್ಲ ತಿಳಿತದ ಅಂತ್ಹೇಳಿ ಗುರುವ 
ತಲೆಯೊಳಗೆ ಜ್ಞಾನದ ಮೊಳಕೆ ಒಡದಾವ 
ಅಲ್ಲಿಂದ ಚಿಗುರುಗಳು ಬಲಿತಾವ
ಪ್ರೌಢದ ಮೂರೊರುಷ ನಗುನಗುತ ಕಳಿತೇವ ನೆನಪುಗಳು ಸಾಯದೆ ಇರುತಾವ 
ಗುರುಗಳ ಹೆಸರು ಮನದಾಗ ಅಚ್ಯೊತ್ಯಾವ

ಪದವಿ ಪೂರ್ವಕ್ಕೆ ಹೊರಡಾಗ ಒಡೆದೋಯ್ತು ನಂಗುಂಪು
ಆದರೂ ಮನಸ್ಸಿತ್ತು ಬಾಳ ತಂಪು 
ಕಲಿಯೋದೇ ಎರಡೊರುಷ
ಸಿಗುತ್ತಿತ್ತು ಬಹಳ ಹರುಷ
ನೆರೆಯೂರ ಗೆಳೆಯರು ಕೂಡ್ತೇವ ಒಂದೆಡೆಗೆ 
ಬಿಟ್ಟು ಹೋಗ್ವಾಗ ನೋವಾಯ್ತು ಮನಸ್ಸಿಗೆ

ಕವಲುಗಳ ದಾರಿ ಬರುತಾವ ಎದುರಿಗಿ
ಮಾಡಬೇಕು ಮೂರೊರುಷ ಡಿಗ್ರಿ 
ಕಲಿತೀವಿ ಅದರಲ್ಲಿ ಜೀವನದ ಪಾಠ 
ಕಾಡತೈತಿ ಮನದೊಳಗ ಗುರುವಿನ ನೋಟ 
ತಿಳಿದೀವಿ ಡಿಗ್ರಿಯು ಹಾಸ್ಯದ ಚದುರಂಗದಾಟ 
ಮೈ ಮರೆತು ಕಳೆದರೆ ಆಗುತೈತಿ ಬದುಕಿಗೆ ನಷ್ಟ

ಪ್ರೊಫೆಸರ್ ಇರ್ತಾರಂತ ತಂಪಾಡಿಗೆ ತಾವ 
ಅಂತ ತಿಳಿಹೇಳಿದ್ರು ಊರಾಗ ಕಲಿತವ್ರ 
ನಂಭಾಗ್ಯ ಚೆಂದಿತ್ತು
ಗುರು ನಂಟು ಗಟ್ಟಿತ್ತು

ಎಲ್ಲೆಡೆ ಇದ್ದವರು ಕೂಡಿದೆವು ಒಂದೆಡೆ 
ಅಪರಿಚಿತರಂತೆ ಬಂದವರು
ಸ್ಥಳ ನಾಮ ತಿಳಿಯದವರು
ನಿಧಾನಗತಿಯಲ್ಲಿ ಕೂಡಿತು ಎಲ್ಲರ ಹೃದಯ 
ನಮ್ಮವರೆಂದು ಮಾಡಿತು ಶುಭ ಸಮಯ

ಸವಿರುಚಿಯ ಮಾತುಗಳ ಆರಂಭ ಬಾಯಾಗ
ಹರಿಯುವುದು ರಕ್ತ ಎಲ್ಲರೊಳು ಮೈಯ್ಯಾಗ
ಸವಿಗಾಳಿ ಸುಳಿತಾದ ಸುಯ್ಯಂದು ಮನದಾಗ
ಹಗುರಾಯಿತು ಭಾವಗಳು ತುಂಬಿದ ಬನದಾಗ

ಕೂಡುತ್ತೇವ ಬಂಧುಗಳಂತೆ ಮಗ್ಗುಲಲ್ಲಿ ನಾವು 
ನಮ್ಮನ ಬೆರಿತಾಗ ಕೊಟ್ಟಂಗ ಕಾವು
ಲವಲವಿಕೆ ಎಲ್ಲರ ಮನದೊಳಗೆ ಠರಾವು
ಬೆಂಬಿಡದೆ ಕೂಡುವ ನೆನಪುಗಳಿಗೆ ಇಲ್ಲ ಸಾವು

ಡಿಗ್ರಿಯ ಕಲಿಕೆ ಜೀವನಕ್ಕೆ ಹೆಚ್ಚಿಸುವುದು ಬೇಡಿಕೆ
ಮೈಮರೆತು ಕಲಿತರೆ ಕಾಡುವುದು ಕಾಡಿಕೆ 
ಎಲ್ಲ ಬಿಟ್ಟು ಗೂಳಿಯಂಗೆ ತಿರುಗಿದರೆ ಆದಿತು ನಾಚಿಕೆ
ಪಡಿಬೇಕು ಮೂರೊರುಷದಾಗ ಅಮೂಲ್ಯ ಕಾಣಿಕೆ

ಗುರುವರ್ಯರ ಬಂಧ
ಮರೆಯಲಾಗದು ಎಂದ
ಬರುತೈತಿ ನೆನಪ ಬಿಡದ ಸಂದ
ನೆನೆದರೆ ಮನವು ಭಾರದ ಅಶ್ರುಗಂಧ

ಕಳೆದ ಅರೆಕ್ಷಣ ನೆನೆದರೆ ಬೀಳುವುದು ಕನಸು 
ಇದ್ದಾಗ ಖುಷಿಪಟ್ಟು ಹಗುರಗೊಳಿಸು ಮನಸ್ಸು
ಸಿಗುವುದಿಲ್ಲ ಮತ್ತೊಮ್ಮೆ ಕಳೆದರೆ ಆ ಚಾನ್ಸು 
ಮುಂದಿನ ಹಂತದಲ್ಲಿ ಸಿಗುವರೇನೋ ಇಂಥ ಫ್ರೆಂಡ್ಸು
ಬಿಟ್ಟು ಹೊರಡುವೆವು ಕೊನೆಗೊಮ್ಮೆ ತುಂಬಿದ ಹೌಸು

ಮರೆಯಲಾಗದು ಡಿಗ್ರಿಯ ಅನುಭವ 
ಬಾಳೆಗೊನೆಯಂತೆ ಕೂಡುತ್ತಾರ ಒಂದು ಗಿಡದಾಗ 
ಕೊನೆಗೊಮ್ಮೆ ಉದುರಬೇಕು ಹಣ್ಣೆಲೆನೇ
ಖಾಲಿ ಮಾಡಬೇಕು ಎಲ್ಲರೂ ಸುಮ್ಮನೇ
ಹರಸುವರು ಗುರುಗಳು ಭಾರದ ಮನದಿಂದ 
ತುಂಬಿ ಹರಿಯುವುದು ಅಶ್ರುಜಲ ಅಕ್ಷಿಯಿಂದ
ಕೂಡಬಹುದೇನೋ ಎಲ್ಲರೂ ಒಂದೊಮ್ಮೆ ದಿನ

ಬಾಳ ದಾರಿ ಸುಖದಿ ಸಾಗಲಿ
ನೆನಪುಗಳು ಸಾಯದಿರಲಿ
ಕನಸುಗಳು ಬೀಳುತ್ತಿರಲಿ
ಮನವು ಕೆಡದಿರಲಿ 
ಎಲ್ಲರೂ ಒಂದು ದಾರಿಗೆ ಸಾಗುತ್ತಿರಲಿ 
ಗುರಿಗೆ ಪ್ರೇರಣೆ ಗುರುಗಳೆಲ್ಲರೂ ಹಿಂದಿರಲಿ

ಶಿಶುವಿನಿಂದ ಮುಪ್ಪಿನೊರೆಗೆ ಕಲಿಸಿದ ಗುರು 
ಕಲಿತರೂ ಅಹಂನಿಂದ ಮೆರೆಯದಿರು
ಮೆರೆದು ಹಾಳಾಗದಿರು
ನೆನಪುಗಳಿಗೆ ಸಾವು ತರದಿರು
ಸಾಯುವುದಿಲ್ಲ ನೆನಪುಗಳು ಮರೆಯದಿರು.
  - ಬಿ.ಹೆಚ್.ತಿಮ್ಮಣ್ಣ.

ಬದುಕೊಂದು ಭಂಡಾರ (ಕವಿತೆ) - ಮಲ್ಲಿಕಾರ್ಜುನ ಎಸ್ ಆಲಮೇಲ.

ಬದುಕೊಂದು ಹಲವು ಹೊಂಗನಸುಗಳ ಭಂಡಾರ 
ಇಲ್ಲಿರುವದು ಆಸೆ ಆಕಾಂಕ್ಷಗಳ,ಮಹಾ ಸಾಗರ 
ಪ್ರೀತಿ,ಪ್ರೇಮ,ತ್ಯಾಗ,ಮಮತೆ,ವಾತ್ಸಲ್ಯಗಳ ಆಗರ 
ಅಗೋಚರವಾದ ಭರವಸೆಗಳೆ ಜೀವನಕ್ಕೆ ಆಧಾರ 

ಭಗವಂತನ ಸೃಷ್ಟಿಯು ಅದೆಷ್ಟೊಂದು ವಿಸ್ಮಯವು 
ಜನನದಿ ಶಿಶು,ಬೆಳೆದಂತೆ ಬಾಲ್ಯ ಯವ್ವನ ಮುದಿತನವು 
ತಂದೆ ತಾಯಿ,ಅಕ್ಕ ತಂಗಿ,ಅಣ್ಣ ತಮ್ಮ ಬಂಧು ಬಳಗವು 
ಸೃಷ್ಟಿಕರ್ತ ನಮಗಾಗಿ ನೀಡಿರುವ ಕೊಡುಗೆ ಅಪಾರವು 

ಮನುಜನಿಗೆ ಪ್ರಕೃತಿಯು ಅಮೋಘ ಸಂಪತ್ತು ನೀಡಿದೆ 
ನೆಲ ಜಲ ವಾಯು ಅಗ್ನಿ ಆಕಾಶ ಆಹಾರ ಕರುಣಿಸಿದೆ 
ಇಷ್ಟೆಲ್ಲ ಸಿರಿ ಸಮೃದ್ಧಿ ಇದ್ರು ದುರ್ಬುದ್ಧಿ ಹೋಗದಾಗಿದೆ 
ಮಾನವನ ಮರ್ಕಟ ಮನಸ್ಸು ದುರಾಸೆಗೆ ಬಿದ್ದಿದೆ 

ಜೀವನ ಒಂದು ಸುಂದರವಾದ ಗಾಳಿಯ ಪಟವು 
ಇದು ಜಗದೀಶನಾಡಿಸುವ ರಂಗು ರಂಗಿನ ನಾಟಕವು 
ಇಲ್ಲಿ ನಮ್ಮದು ಕೇವಲ ವ್ಯವಸ್ಥಿತವಾದ ಅಭಿನಯವು 
ಅರಿತು ಸಾಮರಸ್ಯದಿ ಬದುಕಿದರೆ ಬಾಳು ಅಪೂರ್ವವು. 

- ಮಲ್ಲಿಕಾರ್ಜುನ ಎಸ್ ಆಲಮೇಲ, ಯಡ್ರಾಮಿ.

ರೇಡಿಯೋ (ಕವಿತೆ) - ಶ್ರೀಮತಿ ಸುಲೋಚನಾ ಮಾಲಿಪಾಟೀಲ.

ನಮ್ಮೆಲ್ಲರ ಪರಮಮಿತ್ರ ನಾವಿದ್ದೆವು ನಿನ್ನ ಹತ್ತಿರ
ಶುಭೋದಯಕೆ ಮಂಗಲವಾದ್ಯ ತಂದ ಶುಭಕರ
ನಿನ್ನ ಅಗತ್ಯತೆಯಲ್ಲಿ ಸಂಭ್ರಮಿಸಿದ ಜನಸಾಗರ
ನಿನ್ನಿಂದ ವಿವಿಧತೆಯಲ್ಲಿ ಜನಮನ ರಮಿಸುವ ಕಾರ್ಯ

ನಿನಾಗಿದ್ದೆ ಎಲ್ಲಾ ಮನೆಯ ಶೋಭೆಯ ಸರದಾರ 
ಹಲವಾರು ರೂಪುಗಳಲ್ಲಿ ರೂಪಗೊಂಡ ನಿನ್ನ ಆಕಾರ
ನಿನ್ನ ಮೋದಲ ಅಡಿಗಲ್ಲು ಸ್ಥಾಪನೆ ನಮ್ಮ ಮೈಸೂರ 
ಆಕಾಶವಾಣಿಯ ಪದಕೆ ಪದಚಾಲನೆ ನೀಡಿದ ಠಾಗೋರ್

ಮುಸಂಜೆಯ ಶಾಸ್ತ್ರೀಯ ಸಂಗೀತ ಗಾನದ ಸುಮಧರ
ಬಿನಾಕಾ ಗೀತಮಾಲಾ ಕೇಳುತ್ತಿದ್ದೆವು ಪ್ರತಿಬುಧವಾರ
ಉದಯರಾಗ ಕವನ ವಾಚನ ಚಿತ್ರಗೀತೆಗಳು ಬಲು ಮಧುರ
ಮೆಲಕು ಹಾಕಲು ಬಿತ್ತರಿಸುತ್ತಿದ್ದೆ ಮೂಲ ಸಂಸ್ಕೃತಿಯ ಸಾರ

ಸಾಮಾಜಿಕ ಆರ್ಥಿಕ ಭೌಗೋಳಿಕ ತಾರತಮ್ಯದಲ್ಲು
ಪ್ರಕೃತಿ ವಿಕೋಪ ಯುದ್ಧ ತುರ್ತುಪರಿಸ್ಥಿತಿಗಳ ಸಮಯದಲ್ಲು
ಕ್ರೀಡೆ ಮನೋರಂಜನೆ ಸುದ್ದಿಯ ಪ್ರಾಮುಖ್ಯತೆಯಡಿಯಲ್ಲು
ಜಗತವಿಖ್ಯಾತವಾಗಿ ಮೆರೆದವನು ನೀನಲ್ಲವೇ ಮೊದಲು

ವಿವಿಧ ತರಂಗಗಳ ಮೂಲಕ ಬಾನುಲಿಯ ಕಾರ್ಯಕ್ರಮ
ಜಗತ್ತಿಗೆ ತಂತ್ರಜ್ಞಾನದ ಮೂಲಕ ಅರಿವಳಿಕೆಯ ನೀಡಿದ ಸಂಭ್ರಮ 
ದಿನ ಬೆಳಗಾದರೆ ಗ್ರಾಮೀಣರು ಕೇಳುವ ರೇಡಿಯೋ ಮಾಧ್ಯಮ
ಬಹುಜನಹಿತಾಯ ತತ್ವದಡಿಯ ನಡೆಯುವೇ ನೀ ಸುಗಮ

ಓಲ್ಡ್ ಇಜ್ ಗೋಲ್ಡ್ ಎನ್ನುವ ನಿನ್ನ ಪಥ ಚಲನ
ಪೇಬ್ರುವರಿ ಹದಿಮೂರು ವಿಶ್ವ ರೇಡಿಯೋ ಆಚರಣೆ ದಿನ
ಜಗತ್ತಿನೆಲ್ಲೆಡೆ ಹಲವಾರು ಭಾಷೆಗಳಲ್ಲಿ ಪ್ರಚಲಿತವಾದ ವಿದ್ಯಮಾನ
ಆಲ್ ಇಂಡಿಯಾ ರೇಡಿಯೋ ಸರ್ವವ್ಯಾಪಿ ಕೈಗೆಟಕೂವ ನವಿಕರಣ.

- ಶ್ರೀಮತಿ  ಸುಲೋಚನಾ ಮಾಲಿಪಾಟೀಲ, ಧಾರವಾಡ.


ಕುವೆಂಪು (ಕವಿತೆ) - ಕಾಡಪ್ಪಾ ಮಾಲಗಾಂವಿ, ಶಿರೋಳ.

ಕನ್ನಡದ ಕವಿ ಕುವೆಂಪು
ಬರೆದ ಕವಿತೆಗಳ ಇಂಪು
ಕೊಡುವದು ಮನಕ್ಕೆ ತಂಪು.

ಬರೆದರು ಕವಿತೆಗಳ ಸಾಗರ
ಕೇಳುಗರಿಗೆ ಅತಿ ಮಧುರ
ಮತ್ತೆ,ಮತ್ತೆ ಆಳಿಸುವ ಆತುರ.

ಸಾಹಿತ್ಯದ ಸುಂದರ ಮೂರುತಿ
ಕವಿತೆಗಳಲ್ಲಿ ಬಿಂಬಿಸಿದರು ಸಂಸ್ಕೃತಿ
ಬೆಳಗಿಸಿದರು ಜ್ಞಾನದ ಜ್ಯೋತಿ

ಪೋಣಿಸಿದರು ಅಕ್ಷರಗಳ ಜೋಡಣೆ
ಪಡೆದರು ಅನೇಕ ಬಿರುದಗಳ ಸನ್ಮಾನ
ಅವರೆ ಕವಿತೆ,ಬರಹಗಳ ಖಜಾನೆ.

ಪಸರಿಸಿದರು ಭಾರತೀಯ ಪರಂಪರೆ
ಅವರೆ ಸಾಹಿತ್ಯದ ಉಸಿರು
ಬೆಳಸಿದರು ಬರಹದ ಹಸಿರು.

- ಕಾಡಪ್ಪಾ ಮಾಲಗಾಂವಿ, ಶಿರೋಳ.


ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...