ಬದುಕೊಂದು ಹಲವು ಹೊಂಗನಸುಗಳ ಭಂಡಾರ
ಇಲ್ಲಿರುವದು ಆಸೆ ಆಕಾಂಕ್ಷಗಳ,ಮಹಾ ಸಾಗರ
ಪ್ರೀತಿ,ಪ್ರೇಮ,ತ್ಯಾಗ,ಮಮತೆ,ವಾತ್ಸಲ್ಯಗಳ ಆಗರ
ಅಗೋಚರವಾದ ಭರವಸೆಗಳೆ ಜೀವನಕ್ಕೆ ಆಧಾರ
ಭಗವಂತನ ಸೃಷ್ಟಿಯು ಅದೆಷ್ಟೊಂದು ವಿಸ್ಮಯವು
ಜನನದಿ ಶಿಶು,ಬೆಳೆದಂತೆ ಬಾಲ್ಯ ಯವ್ವನ ಮುದಿತನವು
ತಂದೆ ತಾಯಿ,ಅಕ್ಕ ತಂಗಿ,ಅಣ್ಣ ತಮ್ಮ ಬಂಧು ಬಳಗವು
ಸೃಷ್ಟಿಕರ್ತ ನಮಗಾಗಿ ನೀಡಿರುವ ಕೊಡುಗೆ ಅಪಾರವು
ಮನುಜನಿಗೆ ಪ್ರಕೃತಿಯು ಅಮೋಘ ಸಂಪತ್ತು ನೀಡಿದೆ
ನೆಲ ಜಲ ವಾಯು ಅಗ್ನಿ ಆಕಾಶ ಆಹಾರ ಕರುಣಿಸಿದೆ
ಇಷ್ಟೆಲ್ಲ ಸಿರಿ ಸಮೃದ್ಧಿ ಇದ್ರು ದುರ್ಬುದ್ಧಿ ಹೋಗದಾಗಿದೆ
ಮಾನವನ ಮರ್ಕಟ ಮನಸ್ಸು ದುರಾಸೆಗೆ ಬಿದ್ದಿದೆ
ಜೀವನ ಒಂದು ಸುಂದರವಾದ ಗಾಳಿಯ ಪಟವು
ಇದು ಜಗದೀಶನಾಡಿಸುವ ರಂಗು ರಂಗಿನ ನಾಟಕವು
ಇಲ್ಲಿ ನಮ್ಮದು ಕೇವಲ ವ್ಯವಸ್ಥಿತವಾದ ಅಭಿನಯವು
ಅರಿತು ಸಾಮರಸ್ಯದಿ ಬದುಕಿದರೆ ಬಾಳು ಅಪೂರ್ವವು.
- ಮಲ್ಲಿಕಾರ್ಜುನ ಎಸ್ ಆಲಮೇಲ, ಯಡ್ರಾಮಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ