ಗುರುವಾರ, ಆಗಸ್ಟ್ 1, 2024

ಪುಸ್ತಕವನ್ನ ತಬ್ಬಿ ಪ್ರೀತಿಸು...



ಜಗತ್ತು ನಿನ್ನ ಒಪ್ಪಿಕೊಳ್ಳದಿದ್ದರೆ
ನಿನಗೆ ಏನಂತೆ ಇಂದು
ಪುಸ್ತಕವನ್ನ ಅಪ್ಪಿಕೊಂಡು ಬಿಡು
ನೀನನ್ನ ಅಂದು ಯಾರೆಲ್ಲ
 ಒಪ್ಪಿಕೊಳಲ್ಲ ಅವರೆಲ್ಲ ತಿರುಗು
 ನೋಡುವಂತೆ ನಿನ್ನನ್ನ

ಪುಸ್ತಕ ನಂಬಿದವರಿಗೆ 
ಮೋಸ ಮಾಡಿಲ್ಲ
ಭೂಮಿ ತಾಯಿಯನ್ನ 
ನಂಬಿದವರಿಗೆ ಕೈ ಬಿಟ್ಟಿಲ್ಲ...


           ಕಾರ್ತಿಕ್... ✍️
     ( ಶ್ರವಣ ಬೆಳಗೊಳ )

ಯಾರು.‌.?

ಯಾರು...?
ಕೋಟೆಗಳನ್ನಾಳಿ
 ಉಳಿದುಕೊಂಡವರ್ಯಾರು?
ಸತ್ತಾದ ಮೇಲೆ ಬದುಕಿ 
ಬಂದವರ್ಯಾರು?

ಬೇಡದೆ ಆದರವ 
ನೀಡಿದವರ್ಯಾರು?
ಬಾಡಿದ ಹೂವ 
ಮುಡಿದವರ್ಯಾರು?

ಕಳೆದು ಹೋದ ಸಮಯಕ್ಕೆ
 ಕಾದಿರುವರ್ಯಾರು?
ಬದುಕ ಪಯಣದಲ್ಲಿ ನೆಮ್ಮದಿ 
ಪಡೆದವರ್ಯಾರು?

ಕಳೆದ ನೆನಪುಗಳನ್ನು ಮರಳಿ 
ಪಡೆದವರ್ಯಾರು?
ಬಿಟ್ಟು ಹೋದ ಪ್ರೀತಿಯ ಮತ್ತೆ ಗಳಿಸಿದವರ್ಯಾರು?

ಕಲಿಯುಗದಲ್ಲಿ ಕಲಿತೆ ಉಳಿದ
 ವಿದ್ಯೆ ಯಾವುದು?
ಯಾವುದಕ್ಕೂ ಮೌಲ್ಯ 
ಸಿಗದಂತೆ ಉಳಿದಿಹುದು...!
                                               
                
                 - ಸದ್ದಾಂ ತಗ್ಗಹಳ್ಳಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...