ನಿಮಗೊಂದು ಸ್ವಂತ ವೆಬ್ಸೈಟ್ ಯಾಕೆ ಬೇಕು?
ನೀವು ಒಬ್ಬ ಉತ್ತಮ ಬರಹಗಾರರಾಗಿರಬಹುದು ಅಥವಾ ಸ್ವಂತ ಕಂಪನಿ, ಅಂಗಡಿ, ಸಂಘ ಸಂಸ್ಥೆ ಅಥವಾ ಇನ್ಯಾವುದೋ ವ್ಯವಹಾರವನ್ನು ಹೊಂದಿರಬಹುದು. ನಿಮ್ಮ ಬಿಸ್ನೆಸ್ ದೊಡ್ಡದಾಗಿ ಉತ್ತಮ ಆದಾಯವನ್ನು ಗಳಿಸುತ್ತಿರಬಹುದು ಅಥವಾ ಸಣ್ಣ ಮಟ್ಟಿನ ಆದಾಯ ಗಳಿಸುವ ವ್ಯವಹಾರವು ಆಗಿರಬಹುದು. ಈಗಿನ ಸಂದರ್ಭದಲ್ಲಿ ನಿಮ್ಮ ವ್ಯವಹಾರಕ್ಕೆ ಸ್ವಂತ ವೆಬ್ಸೈಟ್ ನ ಅವಶ್ಯಕತೆ ತುಂಬಾ ಇದೆ. ಯಾಕೆಂದರೆ,
ಈಗಿನ ಮಹಾಮಾರಿ ಕೋವಿಡ್-19 ಸಮಯದಲ್ಲಂತೂ ವೆಬ್ಸೈಟ್ ನ ಅವಶ್ಯಕತೆ ತುಂಬಾ ಇದೆ. ಯಾಕೆಂದರೆ ಹೆಚ್ಚಿನ ಗ್ರಾಹಕರು ಆನ್ಲೈನ್ ಮೂಲಕವೇ ಹುಡುಕಾಟ ನಡೆಸುತ್ತಾರೆ. ನಿಮಗೆ ತಿಳಿದಿರುವ ಹಾಗೆ ಈ ಲಾಕ್ ಡೌನ್ ಸಮಯದಲ್ಲಿ ಎಲ್ಲಾ ಆಫ್ಲೈನ್ ವ್ಯವಹಾರಗಳು ನಿಂತಿವೆ ಆದರೆ ಆನ್ಲೈನ್ ವ್ಯವಹಾರದ ಮೇಲೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಈ ಸಂದರ್ಭದಲ್ಲಿ ನಿಮ್ಮ ಬಳಿ ವೆಬ್ ಸೈಟ್ ಇದ್ದರೆ ತುಂಬಾ ಅನುಕೂಲವಾಗುತ್ತದೆ.
ನಿಮ್ಮ ಬಳಿ ವೆಬ್ಸೈಟ್ ಇದ್ದರೆ ಏನೆಲ್ಲ ಅನುಕೂಲಗಳಿವೆ?
*ವೆಬ್ಸೈಟ್ನಿಂದ ಹೊಸ ಗ್ರಾಹಕರನ್ನು ಪಡೆಯಬಹುದು.
*ನಿಮ್ಮ ಬ್ರ್ಯಾಂಡ್ ಮೌಲ್ಯವನ್ನು ಹೆಚ್ಚಿಸಿಕೊಳ್ಳಬಹುದು.
*ಕ್ರಿಯೇಟಿವ್ ಆಗಿ ನಿಮ್ಮ ವ್ಯವಹಾರವನ್ನು ಪ್ರಮೋಟ್ ಮಾಡಲು
*ನಿಮ್ಮ ಸೇವೆಗಳನ್ನು ವೆಬ್ಸೈಟ್ ಮೂಲಕ ನೀಡಬಹುದು.
*ನಿಮ್ಮ ವೆಬ್ಸೈಟ್ 24 ಗಂಟೆಯೂ ತೆರೆದಿರುತ್ತದೆ ಆದ್ದರಿಂದ ಹೆಚ್ಚಿನ ಅನುಕೂಲವನ್ನು ಪಡೆಯಬಹುದು ಹಾಗೂ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಬಹುದು. ಇದರಿಂದ ನಿಮಗೆ ಸಮಯದ ಮಿತಿ ಇರುವುದಿಲ್ಲ
*ನಿಮ್ಮ ಬಿಸ್ನೆಸ್ ನ ವೆಬ್ಸೈಟ್ ಇದ್ದರೆ ನಿಮಗೆ ವ್ಯವಹಾರದ ಬಗ್ಗೆ ಜನರಲ್ಲಿ ನಂಬಿಕೆ ಹೆಚ್ಚಾಗುತ್ತದೆ.
* ನಿಮ್ಮ ಕಂಪನಿಯ ಎಲ್ಲ ಮಾಹಿತಿಯನ್ನು ವೆಬ್ಸೈಟ್ ನಲ್ಲಿ ಜೋಡಿಸಬಹುದು.
* ಏನಾದರೂ ಸೇವೆ ಅಥವಾ ಉತ್ಪನ್ನಗಳನ್ನು ಆನ್ಲೈನ್ ನಲ್ಲಿ ಹುಡುಕಿದರೆ ಗ್ರಾಹಕರಿಗೆ ನಿಮ್ಮ ಮಾಹಿತಿ ತಕ್ಷಣ ದೊರಕುತ್ತದೆ. ಇದರಿಂದ ನಿಮ್ಮ ವ್ಯವಹಾರವನ್ನು ವೃದ್ಧಿಸಬಹುದು.
* ನಿಮ್ಮ ವ್ಯವಹಾರಕ್ಕೆ ವೆಬ್ಸೈಟ್ ಇದ್ದರೆ ದಿನಗಳೆದಂತೆ ನಿಮಗೆ ಹೊಸ ಗ್ರಾಹಕರು ತಿರುಗುತ್ತಾರೆ. ಲೀಡ್ ಜನರೇಟ್ ಮಾಡಲು ವೆಬ್ಸೈಟ್ ತುಂಬಾ ಸಹಕಾರಿ.
* ನಿಮ್ಮ ವೆಬ್ಸೈಟ್ ಗೆ ಎಸ್ಇಒ ಮಾಡುವ ಮೂಲಕ ಗೂಗಲ್ ನಿಂದ ಆರ್ಗೆನಿಕ್ ಗ್ರಾಹಕರನ್ನು ಪಡೆಯಬಹುದು ಇದರಿಂದ ನಿಮಗೆ ಹೊಸ ಗ್ರಾಹಕರು ಸಿಗುವಂತಾಗುತ್ತದೆ.
* ವೆಬ್ ಲಿಂಕ್ ನೀಡುವ ಮೂಲಕ ನಿಮ್ಮ ಕಂಪನಿಯ ಸಂಪೂರ್ಣ ಮಾಹಿತಿಯನ್ನು ಗ್ರಾಹಕರಿಗೆ ನೀಡಬಹುದು ಇದರಿಂದ ನಿಮ್ಮ ಸಮಯದ ಉಳಿತಾಯವಾಗುತ್ತದೆ.
* ಡಿಜಿಟಲ್ ಮಾರ್ಕೆಟಿಂಗ್ ಮಾಡಲು ವೆಬ್ಸೈಟ್ ತುಂಬಾ ಸಹಕಾರಿ.
* ನಿಮ್ಮ ವೆಬ್ಸೈಟ್ನಲ್ಲಿ ಮಾಹಿತಿಯನ್ನು ಹಾಕಿ ವಾಟ್ಸಪ್, ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್ ಮುಂತಾದ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಹೆಚ್ಚಿನ ಗ್ರಾಹಕರನ್ನು ತಲುಪಬಹುದು.
* ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವೆಬ್ಸೈಟ್ ತುಂಬಾ ಅಗತ್ಯ. ನಿಮ್ಮ ಪ್ರತಿ ಸ್ಪರ್ಧಿಗಳಲ್ಲಿ ವೆಬ್ಸೈಟ್ ಇಲ್ಲದಿದ್ದರೆ ನಿಮ್ಮ ಬಳಿ ವೆಬ್ಸೈಟ್ ಇದ್ದರೆ ಪ್ರತಿಸ್ಪರ್ಧಿ ಗಿಂತ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.
* ವೆಬ್ ಸೈಟ್ ನಿಮಗೆ ಮಾರ್ಕೆಟ್ನಲ್ಲಿ ಹೆಚ್ಚಿನ ಅತೋರಿಟಿ ಬಿಲ್ಡ್ ಮಾಡಲು ಸಾಧ್ಯ.
* ನಿಮ್ಮ ಆಫ್ಲೈನ್ ಅಂಗಡಿಯನ್ನು ಆನ್ಲೈನ್ಗೆ ತರಬಹುದು ಇದರಿಂದಾಗಿ ನೀವು ಇಡೀ ಪ್ರಪಂಚದಾದ್ಯಂತ ಗ್ರಾಹಕರನ್ನು ಪಡೆಯಬಹುದು.
- ಮಹೇಶ್ ರೈ, ಕೆ.ಜಿ. ( www.digiseve.com ಹೆಚ್ಚಿನ ಮಾಹಿತಿಗೆ ನಮ್ಮ ಬ್ಲಾಗ್ ಗಮನಿಸಿ)
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ