ಗುರುವಾರ, ಜುಲೈ 15, 2021

ಸುಂದರ ಸಶಕ್ತ ರಾಷ್ಟ್ರವನ್ನು ಕಟ್ಟೋಣ ಬನ್ನಿ (ಲೇಖನ) - ಅಂಬರೀಶ ಡಿ ನಾಯ್ಕೋಡಿ, ವಿಜಯಪುರ.

ಸುಂದರ ಸಶಕ್ತ ರಾಷ್ಟ್ರವನ್ನು ಕಟ್ಟೋಣ ಬನ್ನಿ

ಭಾರತ ಸ್ವಾತಂತ್ರ್ಯ ಪಡೆದು ಅದೆಷ್ಟೋ ವರ್ಷಗಳೇ ಗತಿಸಿದರು ಇನ್ನು ಈ ದೇಶದಲ್ಲಿ ಬಡತನ, ಅನಕ್ಷರತೆ ,ನಿರುದ್ಯೋಗ, ಭ್ರಷ್ಟಾಚಾರ ,ಮೂಢನಂಬಿಕೆಯಂತಹ ಅಂಧಕಾರ ತಾಂಡವಾಡುತ್ತಿದೆ.

ನಮ್ಮ ದೇಶ ಹಳ್ಳಿಗಳಿಂದ ಕೂಡಿದ್ದು ಇಲ್ಲಿರುವ ರೈತರು ಕೂಲಿ ಕಾರ್ಮಿಕರು ಮತ್ತು ಕುಲಕಸುಬು ದಾರರು ಇನ್ನೂ ಬಡತನ ರೇಖೆಯ ಕೆಳ ಹಂತದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಇದಕ್ಕೆ ಮುಖ್ಯವಾದ ಕಾರಣ ಸರಕಾರದ ಮಲತಾಯಿ ಧೋರಣೆ ಯಾಗಿದೆ ಕಾರಣ ಕೇವಲ ಶ್ರೀಮಂತರ ಮಕ್ಕಳು ಮಾತ್ರ ಉನ್ನತಮಟ್ಟದ ವ್ಯಾಸಂಗ ಮಾಡುತ್ತಿದ್ದಾರೆ.ಬಡವರ ಮಕ್ಕಳು ರೈತ ಕಾರ್ಮಿಕರಾಗಿ ಉಳಿಯುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ.

ಇದಷ್ಟೇ ಅಲ್ಲದೆ ಈ ದೇಶದಲ್ಲಿ ಬಡತನವನ್ನು ನಿವಾರಿಸಬೇಕಾದರೆ ಸರ್ಕಾರ ಅನೇಕ ಯೋಜನೆಗಳನ್ನು ಸಹ ಹಮ್ಮಿಕೊಂಡಿದೆ ಆದರೆ ಆ ಯೋಜನೆಗಳು ಸಮರ್ಪಕವಾಗಿ ಯಾವೊಬ್ಬ ಬಡ ವ್ಯಕ್ತಿಗೆ ದೊರೆತಿಲ್ಲ. ಬದಲಾಗಿ ಬಡವರ ಹೆಸರಿನಲ್ಲಿ ಶ್ರೀಮಂತರು ಮತ್ತು ರಾಜಕಾರಣಿಗಳ ಪಾಲಾಗಿ ಹೋಗುತ್ತದೆ. ಬಡವರಿಗೆ ಏನಾದರೂ ಸಹಾಯ ಮಾಡಲೆಂದು ಕೊಟ್ಟರೆ ಅದು ಕೇವಲ ಫೋಟೋಶೂಟ್ ಗೆ ಮಾತ್ರ ಸೀಮಿತವಾಗಿದೆ. ಹೀಗಾದರೆ ನನ್ನ ರಾಷ್ಟ್ರ ಅಭಿವೃದ್ಧಿಯಾಗುವುದೇ ?

 ಪ್ರಸ್ತುತ ಇರುವಂತಹ ಸ್ಥಿತಿ ಒಬ್ಬ ರಾಜಕಾರಣಿ ಯಾವುದೋ ಕಾರಣಕ್ಕೆ ಪಕ್ಷಾಂತರವಾದರೆ ಆತನ ಸ್ಥಾನಕ್ಕೆ ಉಪಚುನಾವಣೆ ಮಾಡಬೇಕಾದರೆ ಕೋಟ್ಯಾಂತರ ಹಣ ಖರ್ಚಾಗುತ್ತದೆ. ಅದರ ಬದಲಾಗಿ ಉಪಚುನಾವಣೆಯನ್ನು ರದ್ದುಗೊಳಿಸಿ ಪಕ್ಷಾಂತರದ ವ್ಯಕ್ತಿಯ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿ ಕೆಲವೇ ಮತಗಳಿಂದ ಸೋಲನ್ನು ಅನುಭವಿಸಿದ ವ್ಯಕ್ತಿಯನ್ನು ಆಸ್ಥಾನಕ್ಕೆ ನೇಮಿಸಬೇಕು ಒಂದು ವೇಳೆ ಯಾರಾದರೂ ಇದನ್ನು ವಿರೋಧಿಸಿದರೆ ಸಂಪೂರ್ಣ ಚುನಾವಣಾ ವೆಚ್ಚವನ್ನು ಬರಿಸುವಂತೆ ಕಾನೂನುಗಳನ್ನು ಜಾರಿ ತರಬೇಕು. ಇದರಿಂದ ಚುನಾವಣಾ ವೆಚ್ಚ ಉಳಿದಂತಾಗುತ್ತದೆ ಆ ಹಣವನ್ನು ನಮ್ಮ ಬಡವರಿಗೆ ನೀಡಿದರೆ ನನ್ನ ರಾಷ್ಟ್ರ ಅಭಿವೃದ್ಧಿಯಾಗುವುದು ಯಾವುದೇ ಸಂದೇಹವೇ ಇಲ್ಲ. 

ಜೊತೆಗೆ ಭಾರತದಲ್ಲಿ ಇನ್ನೂ ಒಂದು ಹೊತ್ತು ಊಟಕ್ಕೆ ಸಹಿತ ಪರದಾಡುತ್ತಿರುವ ಅಲೆಮಾರಿ ಜನಾಂಗದವರು ಸಹ ಜೀವಿಸುತ್ತಿದ್ದಾರೆ ಇಂತಹವರು ಸಹ ತಮ್ಮ ದೈನಂದಿನ ಅವಶ್ಯಕ ವಸ್ತುಗಳನ್ನು ಪೂರೈಸಿಕೊಳ್ಳಲು ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸುವುದು ಅನಿವಾರ್ಯ ಇದರ ಜೊತೆಗೆ ದೇಶದ ಅಭಿವೃದ್ದಿ ಕುಂಠಿತವಾಗಲು ಮೂಲಕಾರಣವೇ ಭ್ರಷ್ಟ ಅಧಿಕಾರಿಗಳು. ಇವರು ಸರಕಾರದ ವೇತನದ ಜೊತೆಗೆ ಬಡವರು ಮತ್ತು ಸಾಮಾನ್ಯ ವರ್ಗದ ಜನರ ಹತ್ತಿರ ಲಂಚಕ್ಕೆ ಕೈ ಹಾಕುತ್ತಿದ್ದಾರೆ. ಅಧಿಕಾರದ ಅಂಧಕಾರದಲ್ಲಿ ಇರುವ ಕೆಲವು ಅಧಿಕಾರಿಗಳು ಕೇವಲ ತಮ್ಮ ಅಧಿಕಾರವ ನ್ನೇ ಚಲಾಯಿಸುತ್ತಿದ್ದಾರೆ ಹೊರತು ರಾಷ್ಟ್ರದ ಅಭಿವೃದ್ಧಿಯನ್ನು ವಿಚಾರಿಸುತ್ತಿಲ್ಲ. ಇಂತಹವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ.

ಭಾರತ ಕೃಷಿ ಪ್ರಧಾನ ರಾಷ್ಟ್ರ ವಾಗಿರುವುದರಿಂದ ಇಲ್ಲಿನ ಮೂಲ ವೃತ್ತಿ ಕೃಷಿಯಾಗಿದೆ. ಅನೇಕ ರೈತರು ಕೃಷಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ
ಅವರಿಗೆ ಅನೇಕ ಕಷ್ಟಗಳು ಎದುರಾಗುತ್ತದೆ ಪ್ರಕೃತಿ ವಿಕೋಪ, ದಲ್ಲಾಳಿಗಳ ಹಾವಳಿ, ಅಸಮರ್ಪಕವಾದ ಬೆಲೆ, ಇವೆಲ್ಲವುಗಳು ನಮ್ಮ ರೈತರಿಗೆ ಒಂದಲ್ಲ ಒಂದು ರೀತಿಯಾಗಿ ವೈರಿಗಳಾಗಿ ಪರಿಣಮಿಸುತ್ತಿವೆ. ಅದೇನೇ ಆಗಲಿ ನಾವೆಲ್ಲರೂ ಸೇರಿ ರೈತರಿಗೆ ಉತ್ತಮವಾದ ಜ್ಞಾನ ತಿಳುವಳಿಕೆಯನ್ನು ನೀಡಿ ಆತನಿಗೆ ಸಮರ್ಪಕವಾದ ಮಾರುಕಟ್ಟೆ ಮೌಲ್ಯ ದೊರೆತು ಆತನ ಬಾಳು ನಂದಾದೀಪವಾಗಲಿ ಎಂದು ತಾಯಿ ಭಾರತೀಯ ಚರಣ ಕಮಲಗಳಿಗೆ ಸಾಷ್ಟಾಂಗ ನಮಸ್ಕಾರಗಳು ಸಲ್ಲಿಸೋಣ....

" ಬನ್ನಿ ನಾವೆಲ್ಲರೂ ಭ್ರಷ್ಟಮುಕ್ತ ರಾಷ್ಟ್ರವನ್ನು ಆಗಲು ಕೈ ಜೋಡಿಸೋಣ"

            - ಅಂಬರೀಶ್ ಡಿ ನಾಯ್ಕೋಡಿ. ಎಸ್. ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ ವಿಜಯಪುರ.




(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...