ಭಾನುವಾರ, ಜುಲೈ 11, 2021

ಬದುಕಿನ ಮಾತುಗಳು (ಕವಿತೆ) - ಶ್ರೀಮತಿ ದಾನೇಶ್ವರಿ ಬಸವರಾಜ ಶಿಗ್ಗಾವಿ.

ಬದುಕಿನ ಮಾತುಗಳು

ಉದಯಾಸ್ತಮದ ರವಿಯು, ಮಲ್ಲಿಗೆಯು, ಚಂದಿರನ, ಭೂಮಿ ಮೇಲೆ ನಗುತಾ  ನಗೆಯ ಚೆಲ್ಲಿಹರು.

ಸದಾ ಇನ್ನೊಬ್ಬರ ಜೀವನದ ನಗುವಿಗಾಗಿ ದುಡಿಯುತಿಹರು
ಅವರದೇ ಆದರ್ಶದಲ್ಲಿ ಜನಕ್ಕೆ ಬುದ್ಧಿ ಹೇಳುತ್ತಿದ್ದಹರು.

ಸ್ವಾರ್ಥದ ಪ್ರಪಂಚದಲ್ಲಿ ಅರಿವಿನ ಮರವಿನೊಳು ಬದುಕುವ ಮನುಜನೆಕೊ ಕೇಳುತ್ತಿಲ್ಲ ಅವರ ಮಾತ.

ತಾನೇ ಮೇಲೆಂದು ಮೆರೆಯುತ್ತಿರುವ, ಒಂದಲ್ಲ ಒಂದು ದಿನ ಮಣ್ಣಾಗುವ.

ಇರುವ ದಿನದ ಜಾತ್ರೆಯಲ್ಲಿ ಸರ್ವರ ಮನಸ್ಸಿನ ನಗುವಾಗಿ ಬಾಳಬೇಕು ಸೂರ್ಯಚಂದ್ರರಂತೆ
✍️ ದಾನೇಶ್ವರಿ ಬಸವರಾಜ ಶಿಗ್ಗಾವಿ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...