ಸವಿದಷ್ಟು ಸವಿಯಾದ ಅನುಭವಾಮೃತದ ಸೇವಾಮೃತ
ಕನ್ನಡ ಸಾಹಿತ್ಯ, ವಿಮರ್ಶೆ ಮತ್ತು ರಂಗ ಕಲಾ ಲೋಕದ ಅಪೂರ್ವ ಪ್ರತಿಭೆ ಗೊರೂರು ಅನಂತರಾಜ್, ಇವರ ಅನುಭವಾಮೃತ ಸೇವಾಮೃತ ಕೃತಿಯಲ್ಲಿ ಒಟ್ಟು ಇಪ್ಪಾತ್ತಾರು ವಿಮರ್ಶ ಲೇಖನಗಳು ಮತ್ತು ಇವರ ಕೃತಿಗಳಿಗೆ ಇತರ ಲೇಖಕರು ಬರೆದ ಆರು ವಿಮರ್ಶ ಲೇಖನಗಳು ಕೂಡ ಸೇರ್ಪಡೆಯಾಗಿವೆ. ಇವು ನಿಜಕ್ಕೂ ಅಂತರ್ ಶಿಸ್ತಿಯಾ ಮತ್ತು ಬಹುಶೀಸ್ತಿಯಾ ನೆಲೆಗಳಿಂದ ಕೂಡಿದ್ದು , ವ್ಯವಸ್ಥೆಯ ಅದ್ಬುತ ಗಾಢಪ್ರಜ್ಞೆಯ ಒಳನೋಟವನ್ನು ಕಟ್ಟಿ ಕೊಡುತ್ತವೆ. ಈ ಕೃತಿ ಓದುತ್ತಿದ್ದರೆ ಇದರಲ್ಲಿ ಉಲ್ಲೇಖವಾಗಿರುವ ಲೇಖಕರ ಕೃತಿಗಳನ್ನು ಓದಬೇಕು ಎನ್ನುವ ತುಡಿತ ಉಂಟಾಗುತ್ತದೆ. ಇಲ್ಲಿಯ ಲೇಖನಗಳು ಒಂದು ರೀತಿಯ ತೌಲನಿಕ ಆಯಾಮಗಳಿಂದ ಕೊಡಿದ್ದು ಅತಿ ಸರಳವಾಗಿ ಓದಿಸಿಕೊಂಡು ಹೋಗುವ ಸಾಂಸ್ಕೃತಿಕ ಲೋಕವನ್ನು ಪ್ರವೇಶಿಸಿಸುವಂತೆ ಮಾಡುತ್ತವೆ. ವಿವಿಧ ಸಾಹಿತ್ಯ ಪ್ರಕಾರಗಳ ಮೂಲಕ ಕಂಡುಕೊಂಡಿರುವ ಪರಿಪಕ್ವ ವಾದ ಪೌಷ್ಟಿಕ ದೇಸಿ ತಳಿಗಳಲ್ಲಿ ನಾಟಕವು ಕೂಡ ಒಂದು ಎಂಬುದನ್ನು ಪ್ರತಿಪಾದಿಸುತ್ತಾರೆ. ಹಾಸ್ಯದ ಮನೋಭಾವದ ಸದಾ ನಗುಮೊಗದ ಮಗುವಿನ ಮುಗ್ಧ ಮನಸ್ಸಿನ ಗೊರೂರು ಅನಂತರಾಜ್ ಸ್ಥಳೀಯ ಬೀಚಿಯಂತಯೇ ಎಂದು ಅವರ ಆಪ್ತ ವಲಯ ಅಭಿಮಾನಿಸುತ್ತದೆ . ಅಂತರಂಗದ ಶ್ರೀಮಂತಿಕೆಯಲ್ಲಿ ಹಾಗೂ ಪರಸ್ಪರರನ್ನು ಗೌರವಿಸುವುದರಲ್ಲಿ ಜನ ಸಾಮಾನ್ಯರ ಜೊತೆ ಬೆರೆಯುವುದರಲ್ಲಿ ವ್ಯಕ್ತಿ ಸರಳವಾದಷ್ಟು ಎತ್ತರಕ್ಕೆ ಹೇಗೆ ಏರುತ್ತಾನೆಂಬುದು ಈ ಲೇಖನಗಳಿಂದ ಸಾಬಿತು ಪಡಿಸುತ್ತಾರೆ. ಅವರ ಅಭಿಪ್ರಾಯ ಮತ್ತು ಗ್ರಹಿಕೆಗಳನ್ನು ಈ ಕೃತಿಯಲ್ಲಿ ತಾತ್ವಿಕವಾಗಿ ದಾಖಲಿಸುತ್ತ ಸಾಗುವ ಅವರ ಬರವಣಿಗೆಯ ಶೈಲಿ "ಪಿಸುದನಿಯಂತೆ ಕಚಗುಳಿ ಇಡುತ್ತದೆ.ಕೆಲವು ಅಪಸ್ವರಗಳನ್ನು ಮುಟ್ಟಿಸಿಕೊಳ್ಳದಂತೆ ಸ್ಪರ್ಶಿಸಿ ನೈಜತೆ ಕಟ್ಟಿಕೊಟ್ಟ" ಅನಂತರಾಜ್ ಅವರ ಅಂತರಾಳದ ಸಮಷ್ಠಿಯಲ್ಲಿ ಅಂತರಗಂಗೆ ಹರಿಯುತ್ತಲೆ ಇದೆ.ಅದನ್ನವರು ಈ ಲೇಖನಗಳ ಮೂಲಕ ಸೂಕ್ಷ್ಮವಾಗಿ ಚಿಂತಿಸಿದ್ದಾರೆ ತಾರ್ಕಿಕವಾಗಿಯೂ ಭಾವುಕರಾಗಿಯೂ ಬರೆಯಬಲ್ಲ ಸರಳವೂ ಗಹನವೂ ಆಗಿರುವ ಬರಹಗಳು ಓದುಗನ ದೃಷ್ಟಿಯನ್ನು ಹಾಸ್ಯದ ಮೂಲಕ ಹಿಡಿದು ಕಟ್ಟಿಹಾಕುವ ಇವರು ಈ ಸಂಕಲನದಲ್ಲಿ ಹಾಸ್ಯ, ವಿಡಂಬನೆ ,ಮುಗ್ಧತೆ, ಚಾತುರ್ಯಾ, ತಂತ್ರ ಪ್ರತಿತಂತ್ರ, ಸವಾಲು ಇಷ್ಟೇ ಅಲ್ಲದೆ ವೈವಿಧ್ಯಮಯ ಭಾವಗಳಲ್ಲಿಯೂ ಮೈದಾಳಿವೆ.
ಚಿಂತಕ ಎಚ್.ಗಂಗಾಧರನ್ ಅವರ ಅನುಭವಾಮೃತ, ನಾಟಿ ವೈದ್ಯ ಸಿ.ಪ್ರಶಾಂತ್ ಬಾಗಡೆ ಅವರ ಸೇವಾಮೃತ , ಷೇಕ್ಸಪಿಯರ್ನ ಕಿಂಗ್ ಲಯರ್ ಕನ್ನಡಕ್ಕೆ ಪ್ರೊ.ಕೆ ಎಸ್ ಭಗವಾನ್,ಅಣ್ಣಾಜ ಪ್ಪ ಗುಂಜೆವು ಇವರ ಹೊಳೆನರಸೀಪುರ ತಾಲ್ಲೂಕು ಇತಿಹಾಸ , ಎಸ್ ಪ್ರಕಾಶ್ ಅವರ ಬೆಳ್ಳಿ ಮೋಡದ ಅಂಚಿನಿಂದ - ಪುಟ್ಟಣ್ಣ ಕಣಗಾಲ್ ಸಿನಿಮಾ ಪಯಣ, ಕೊಪ್ಪ ಜಗದೀಶ್ ಅವರ - ಮರುಭೂಮಿಯ ಹೂ - ವಾರಿಸ್ ಡೆರಿಸ್ ಆತ್ಮಕಥನ ,ಕವಿತಾ ರೈ-ಅವರ ಲೋಪಾ ಮುದ್ರಾ ಕಾವೇರಿ ನದಿಯ ಜನ್ಮಪುರಾಣ , ಕನ್ನಡ ಕುವರ - ಸಿವಿ ಶಿವಶಂಕರ ಸಿನಿಮಾ ಸಾಹಸ,ಮಿರ್ಲೆ ಚಂದ್ರಶೇಖರ್ ಅವರ - ಧರೆ ಹತ್ತ ಉರಿದೊಡೆ , ಗೊರೂರು ನೀವೇಶ್ ಅವರ - ಎದೆಯೊಳಗಿನ ಹಾಡು , ಬೇಲೂರು ನವಾಬ್ ಅವರ - ಮನದಾಳದ ಮಾತು, ಲಕ್ಷ್ಮಣ ಬಳೋಟಗಿಯವರ ವಚನ ಚಂದ್ರಿಕೆ,ಡಾ. ವಿಶ್ವನಾಥ್ ಅವರ ಪಗಡೆ ಪರಿಕಲ್ಪನೆ ,ಎಲ್ ಎನ್ ಮುಕುಂದ ರಾಜ್ ಅವರ ಕವಿತೆ ಹದ್ದು ಮತ್ತು ಜೀಮೂತ , ಗಿರಿ ಮನೆ ಶ್ಯಾಮ್ ರಾವ್ ಅವರ ಸುಖ ಯಾರ ಸ್ವತ್ತು ? , ಎನ್ ಗಂಗಾಧರ - ಅವರ ನಿನ್ನ ಕಂಗಳ ಬಿಸಿಯ ಹನಿಗಳು,ಎರಡು ಸಂಯುಕ್ತ ಸಂಕಲನಗಳು , ಶ್ರೀನಾಥ್ ನಾಗೇಶ ತೇಜವಾಡ್ಕರ್ ಅವರ ತುಂಟ ಶೀನನ ತ್ರಪದಿ,ಎಚ್ ಬಿ ರಮೇಶ್ ಅವರ ಡಾ. ಎಸ್ ಕೆ ಕರೀಂಖಾನ್ ,ಜವರನಹಳ್ಳಿ ಸಿದ್ದಪ್ಪ ಅವರ ಗಿಲ್ಗ ಮಿಷ್ ,ಎನ್ ಶೈಲಜಾಹಾಸನ್ ಅವರ ಹಿಂದಿನ ಬೆಂಚಿನ ಹುಡುಗಿಯರು , ಕೊಟ್ರೇಶ್ ಎಸ್ ಉಪ್ಪಾರ್ ಅವರ ವಚನಾ ದೀಪಿಕಾ ,ಡಾ.ಮಳಲಿ ವಸಂತ್ ಕುಮಾರ್ ಅವರ ಕಚ ಸಂಜೀವಿನಿ , ಲಲಿತ ಎಸ್ ಅವರ ಪ್ರಕೃತಿ ಪ್ರೇಮದ ಅಭಿವ್ಯಕ್ತಿ, ಪಂಪನ ನೆತ್ತಮನಾಡಿ ಪ್ರಸಂಗ ದಾಳ ಭಾಗ 2, ಮುಖಾಮುಖಿ ಕವನ ಸಂಕಲನ ಎರಡು ವಿಮರ್ಶೆಗಳು, ಹಬ್ಬಗಳು ಜನಪದರ ನಂಬಿಕೆಗಳು ಎರಡು ಅನಿಸಿಕೆಗಳು,ಡಾ.ಗೊರೂರು ಮತ್ತು ಇತರೆ ಲೇಖನಗಳು ,ರಂಗಾಂತರಂಗ ನಾಟಕ ವಿಮರ್ಶೆಯ ಅಂಕಣ ಬರಹ , ಹಗಲು ಕನಸಿನಲ್ಲಿ ಕಟ್ಟಿದಾ ಮನೆಯೊಳಗೆ , ಹೀಗೆ ಸ್ಥಳೀಯ ಸಾಹಿತಿಗಳು ಮತ್ತು ಹೊರಗಿನವರ ಕೃತಿಗಳ ವಿಮರ್ಶೆಗೊಂದು ಕಿರು ವಿಮರ್ಶೆ ಈ ಕೃತಿಯಲ್ಲಿವೆ. ಹಿರಿಯ ಸಾಹಿತಿಯಾದ ಲಲಿತ ಎಸ್ ಅವರ ನನ್ನ ಅನಿಸಿಕೆ ಎಂಬ ಮುನ್ನುಡಿಯೂ ಇಲ್ಲಿ ಪ್ರಧಾನವಾಗಿದೆ. ಪ್ರತಿ ಅಧ್ಯಾಯದಲ್ಲಿಯೂ ನವ್ಯತೆ, ವಿಧಾನ, ತತ್ವ, ವಿಶ್ಲೇಷಣೆ, ಸಂಘಟನೆ, ನಿರೂಪಣೆ ಅಲ್ಲದೆ ವಿನ್ಯಾಸ ಎಲ್ಲವೂ ಹೊಸತು!
ಎಲ್ಲಾ ಮಿತಿಗಳನ್ನು ಮೀರಿಯೂ ಈ ಲೇಖನಗಳೊಂದಿಗಿನ ಲೇಖಕನ ಅನುಸಂಧಾನದ ಅನುಭವಗಳನ್ನು ಇಲ್ಲಿ ಹಿಡಿದಿಡುವ ಪ್ರಯತ್ನವನ್ನು ಕೃತಿಕಾರರು ಅಚ್ಚುಕಟ್ಟಾಗಿ ಮಾಡಿದ್ದಾರೆ.ಲೇಖನಗಳಲ್ಲಿ ಸಹೃದಯ ಓದುಗರಿಗೆ ಬರುವ ಸಾಂಸ್ಕೃತಿಕ ಭಿನ್ನತೆ ಇರುವ ಅಂಶಗಳು ಕುರಿತು ತಲಸ್ಪರ್ಶಿ ಮಾಹಿತಿಯ ಜೊತೆಗೆ ಹಲವು ಧ್ವನಿ ಅರ್ಥಗಳನ್ನು ಸ್ಪುರಿಸುತ್ತದೆ. ಒಂದೊಂದು ಲೇಖನಗಳು ಒಂದುಕ್ಕಿಂತ ಒಂದು ಭಿನ್ನವಾಗಿವೆ. ಲೇಖನಗಳ ವಿಷಯ ವಸ್ತು ಅಚ್ಚರಿ ಹುಟ್ಟಿಸುತ್ತ
"ಸಂಪ್ರದಾಯದ ಸೆರಗು ಸರಿಸಿ ಪೂರ್ವ ಗ್ರಹಗಳ ಮುಸುಕೆಳೆದು ವೈಚಾರಿಕ ಬರಹ ಸಂಗ್ರಹ" ಮಾಡಿ ವಿಚಾರ ಒಡನಾಟ ಮಾತುಕತೆ ಮುನ್ನುಡಿ ಸ್ಪಂದನ ಬಿಡಿ ಬರಹಗಳು ಸೇರಿದಂತೆ ಇದರಲ್ಲಿ ನವ, ಯುವ, ಹಿರಿಯ, ಕವಿತೆ, ಆಶಯ, ಭಾವಾಭಿವ್ಯಕ್ತಿಯ ಪರಿಚಯವೂ ಇದೆ. "ತರ್ಕವಾದಗಳ ಪರಿಧಿಯಿಂದ ಆಚೆ ನಿಂತು ಕಂಡುಂಡ ಜೀವಾನನುಭವಗಳನ್ನೇ ವಸ್ತುವಾಗಿಸಿ ಬರೆದ ಇಲ್ಲಿನ ಬರಹಗಳು ಓದುಗರಿಗೆ ಆಪ್ತವಾಗುತ್ತದೆ ಸ್ಫೂರ್ತಿದಾಯಕ ಪ್ರೇರಣಾದಾಯಕ ಬರಹಗಳ ಸಂಕಲನಗಳ ಸರಣಿ ನೀತಿಯನ್ನು ಶುಷ್ಕವಾದ ಭೋಧನೆಯ ಮೂಲಕ ಹೇಳುವುದಕ್ಕಿಂತ ಕಥಾರೂಪದಲ್ಲಿ ಸ್ವಾರಸ್ಯಕರವಾಗಿ ಆಕರ್ಷಕವಾಗಿ ವಿವರಿಸಿವುದರಲ್ಲಿ ಈ ಕೃತಿ ಮುನ್ನೇಲೆಗೆ ಬರುವುದರಲ್ಲಿ ಎರಡು ಮಾತಿಲ್ಲ" ಆಧುನಿಕ ಸಂದರ್ಭದಲ್ಲಿ ನಡೆಯುವ ಧಾರ್ಮಿಕ ಆಧ್ಯಾತ್ಮಿಕ ಚರ್ಚೆ ಚಿಂತನೆಯಿಂದ ಹೊಮ್ಮುವ ಹೊಸ ನೋಟಗಳನ್ನು ಈ ಕೃತಿ ಹೇಳುತ್ತದೆ ಧರ್ಮ ವರ್ಣಗಳ ಜೀವನ ದರ್ಶನ ಹೇಳುವ ಇದು ಇಲ್ಲಿನ ಸಾಂಸ್ಕೃತಿಕ ಪರಂಪರೆಯೊಡನೆ ತಾದಾತ್ಮ ಸಿದ್ದಿಸಿಕೊಂಡ ಸಾರ್ವಜನಿಕ ಜೀವನದ ವ್ಯಕ್ತಿ ತಮ್ಮನ್ನು ಸಾಹಿತ್ಯದಲ್ಲಿ ಸಂಪೂರ್ಣ ತೊಡಗಿಸಿಕೊಂಡು ವಿಲೀನಗೊಂಡ ವಸ್ತು ಈ ಕೃತಿಯಲ್ಲಿ ಉಲ್ಲೇಖತವಾಗಿದೆ. ತಾನೂ ಪ್ರೀತಿಸಿ ಜನರನ್ನು ಪ್ರೀತಿಸುವಂತೆ ಕೊಡೂಗೆಯ ಆಗಿರುವ ಸಂಪನ್ನ ಸಹೃದಯರ 26 ಲೇಖಕರನ್ನು ಇಲ್ಲಿ ಅವರ ಕೃತಿಯ ಮೂಲಕ ಆನಾವರಣ ಗೊಳಿಸಿದ್ದಾರೆ."ಬರಹಕ್ಕೆ ನೋವು ಮರೆಸುವ ಶಕ್ತಿ ಗುಣ ಇದೆ ಅದು ನೋವೊ ಸಂಕಟವೊ ತವಕವೊ ತಲ್ಲಣವೊ ಸಂಭ್ರಮವೊ ಸೂತಕವೊ ಒಟ್ಟಾರೆ ತನ್ನೊಳಗಿನ ತುಡಿತ ಮಿಡಿತ ಕಂಡ ಕಲ್ಪನೆ ಸಂಗತಿಗಳನ್ನು ಹೆತ್ತು ಹಗುರಾಗುವ ಸಹಜ ಜೀವಿಯ ಆಯಾಮವು ಹೌದು". ಸೋತ ಕಣ್ಣಗಳು ಮೀಟಿಕಿಸುವ ನವಿರು ಚಿತ್ರಣ ನಮ್ಮೊಳಗಿನ ಆರ್ಥಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಿನ್ನೆಲೆಯಲ್ಲಿ ವರ್ತಮಾನದ ಸಾಂದರ್ಭಿಕತೆಯನ್ನೂ ಸೌಂದರ್ಯ ಒಳಗೊಂಡಿವೆ. "ತಾಜ ಅನುಭವ ವೈಚಾರಿಕ ಸಿರಿಯ ಅನುಭವಗಳ ಒಟ್ಟಂದ ಹೆಚ್ಚಿಸಿ ಇದು ಓದುಗರನ್ನು ಬೇರೆಯದೆ ಚಿಂತನೆಗೆ ಹಚ್ಚುತ್ತದೆ".
- ಶಾಂತ ಅತ್ನಿ , ಹಾಸನ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ