"ಬದುಕಲಿ ನೀ..ಬದುಕಲು ಕಲಿ"...
ಹಚ್ಚ ಹಸಿರಿಲತೆಯಲಿ ಹೂವೊಂದ ಅರಳಿ
ಸುಗಂಧ ಬಿರುತಿಹುದು..
ಬಾಡುವ ಚಿಂತೆಯ ಬದಿಗೊತ್ತಿ..
ಆ ಹೂವ ನೋಡಿ ಕಲಿಯಬೇಕು ನೀ..
ಬದುಕಿ ಬಾಳಲು ಭುವಿಯಲಿ..
ನೋವು ತುಂಬಿದ ಮನಕೆ..
ಬಾಡುವಾಸೆಯೆತಕೆ..
ನೋವು ಮನದಲಿ ಮರೆಯಾಗಿಸು..
ಮೊಗದಲಿ ಹೂವಿನಂತಹ ನಗುವ ಬಿರುತಿರು...
ಬಾನಂಗಳದಿ ಚಂದ್ರ ಬರುವನು...
ಸೂರ್ಯನ ಬೆಳಕ ಸಡಿಲಿಸಿ ಕತ್ತಲೆ ಆವರಿಸುತ..
ಬೆಳದಿಂಗಳ ಹೊಂಗಿರಣ ಚೆಲ್ಲುತ್ತಾ..
ಆ ಸೂರ್ಯ ಚಂದ್ರರ ನೋಡಿ ಕಲಿಯಬೇಕು ನೀ..
ಬದುಕಿ ಬಾಳಲು ಭುವಿಯಲಿ..
ಸೂರ್ಯ ಚಂದ್ರ ಇರ್ವರು ಬೇಕು ಜಗಕೆ..
ಸೋಲು ಗೆಲುವುಗಳೆರೆಡು ಇರಬೇಕು ಜೀವನಕೆ..
ಸೋತರೆ ಕತ್ತಲೆಂದು ಕೊರಗದೆ..
ಸೋಲಿನ ಪಾಠವ ತಿಳಿಯುತ್ತಾ..
ಸೂರ್ಯ ಪ್ರಕಾಶದಿ ಉದಯಿಸುವಂತೆ..
ಮನದಲಿ ಗೆಲ್ಲುವ ಉತ್ಸಾಹ ಉದಯವಾಗುತಿರಲಿ..
ಮರದಕೊಂಬೆಯಲಿ ಕುಳಿತಿಹವು ಖಗಗಳು....
ಒಂದನ್ನೊಂದು ತೊರೆದು ಅಗಲದೆ..
ಒಗ್ಗಟ್ಟಾಗಿ ಒಂದುಗೂಡಿವೆ...
ಪ್ರೀತಿ ವಿಶ್ವಾಸದಿ ಭಾಂಧವ್ಯದಿ ಬೆರೆತಿವೆ...
ಆ ಖಗಗಳ ಹಿಂಡು ನೋಡಿ ಕಲಿಯಬೇಕು ನೀ..
ಬದುಕಿ ಬಾಳಲು ಭುವಿಯಲಿ..
ಬಂಧುಮಿತ್ರರ ಬಿಡದಿರು ಮನಸ್ತಾಪಕೆ..
ಪ್ರೀತಿ ವಿಶ್ವಾಸ ಸಹಕಾರಬೇಕು ಬಾಳಪಯಣಕೆ..
ದ್ವೇಷವ ದೂರವಿಟ್ಟು ಬಂಧುತ್ವವ ಅಗಲದೆ..
ಪ್ರೀತಿಯಿಂದ ಭಾಂದ್ಯವದ ಬಂಧನ ಒಂದುಗೂಡಿಸು..
- ಸ್ಫೂರ್ತಿ ಎಸ್ ಕನಸಾವಿ
ಬಿಎ ದ್ವಿತೀಯ ವರ್ಷದ ವಿಧ್ಯಾರ್ಥಿನಿ ಎಸ್ ಕೆ ಪದವಿ ಮಹಾವಿದ್ಯಾಲಯ ತಾಳಿಕೋಟಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
amazing ..,really I appreciate you ..congratulations spoorthi
ಪ್ರತ್ಯುತ್ತರಅಳಿಸಿWonderful 👍
ಪ್ರತ್ಯುತ್ತರಅಳಿಸಿ