ಶನಿವಾರ, ಜುಲೈ 31, 2021

ದಿಟ್ಟ ಹೆಜ್ಜೆ (ನ್ಯಾನೋ ಕತೆ) - ಭವ್ಯ ಟಿ.ಎಸ್. ಶಿಕ್ಷಕರು. ಹೊಸನಗರ, ಶಿವಮೊಗ್ಗ.

ದಿಟ್ಟ ಹೆಜ್ಜೆ  (ನ್ಯಾನೋ ಕತೆ).

ವೈದೇಹಿ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಪ್ರತಿಭಾವಂತ ಹುಡುಗಿ.ಪದವಿ ಮುಗಿಸಿ ಉತ್ತಮ ಹುದ್ದೆಗೆ ಆಯ್ಕೆಯಾಗಿ ಕುಟುಂಬಕ್ಕೆ ಆಧಾರವಾದಳು.
ಸಹೋದರನನ್ನು ಓದಿಸುತ್ತಿದ್ದಳು.ಆಗಲೇ ೨೫ಕ್ಕೆ ಕಾಲಿಟ್ಟಿದ್ದ ಮಗಳ ಮದುವೆಯ ಚಿಂತೆ ತಂದೆಗೆ.ಹುದ್ದೆ ಯಲ್ಲಿದ್ದ ಸ್ಫುರದ್ರೂಪಿ ಹುಡುಗನ ಸಂಬಂಧ ಹುಡುಕಿ
ಬಂದಿತ್ತು.ಪರಿಚಯ ಆಪ್ತತೆ ಬೆಳೆಸಿದ ಹುಡುಗ ಮತ್ತು 
ಅವನ ಮನೆಯವರು ವೈದೇಹಿಯನ್ನು ವೈಯಕ್ತಿಕ 
ಭೇಟಿಗಾಗಿ ಒಂದು ಸ್ಥಳಕ್ಕೆ ಕರೆದರು.ಮದುವೆಯ ನಂತರ ತವರು ಮನೆಯರೊಂದಿಗೆ ಯಾವುದೇ
ವ್ಯವಹಾರ ಇರಕೂಡದು, ಸಂಬಾವನೆಯನ್ನು ಸಂಪೂರ್ಣ ನಮಗೆ ಕೊಡಬೇಕು ಎಂದರು.
ಮೌನವಾಗಿ ಅಲ್ಲಿಂದ ಮನೆಗೆ ಬಂದ ವೈದೇಹಿ
ಮರುದಿನ ತಂದೆಯ ಮೂಲಕ ಸಂಬಂಧದ ನಿರಾಕರಣೆ
ತಿಳಿಸಿದ್ದಳು.ವೈದೇಹಿಯ ಮದುವೆ ೫ವರ್ಷ ತಡವಾಯಿತು. ಆದರೆ ಆಕೆ ಈಗ ಜಿಲ್ಲಾಧಿಕಾರಿ.ಆಕೆಯ
ತವರನ್ನು ತನ್ನವರಂತೆ ಕಾಣುತ್ತಿದ್ದ ಬಡ ಕುಟುಂಬದ
ವ್ಯಕ್ತಿ ಆಕೆಯ ಜೀವನ ಸಂಗಾತಿ.

- ಭವ್ಯ ಟಿ.ಎಸ್.
ಶಿಕ್ಷಕರು.ಹೊಸನಗರ,
ಶಿವಮೊಗ್ಗ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...