ಭಾನುವಾರ, ಆಗಸ್ಟ್ 1, 2021

ಮಗಳು (ಕವಿತೆ) - ಶ್ರೀ ಪುರುಷೋತ್ತಮ ಪೆಮ್ನಳ್ಳಿ.

🌹ಮಗಳು🌹

ಮನೆಯಲ್ಲಿ ಗೆಜ್ಜೆಯ ನಾದದಿ ಕಲರವವ
ಮೊಳಗಿಸಿದ ನನ್ನಯ ಮುದ್ದಿನ ಕೂಸು
ನಗುಮೊಗದ ಸುಂದರಿ ಕನಸಿನ ಒಡತಿ 
ಮಾತೃ ಹೃದಯದ ಗಣಿಯು ನನ್ನ ಮಗಳು...

ಹೆಣ್ಣು ಮಗಳೇ ಮನೆಗೆ ಧನಲಕ್ಷ್ಮಿಯಂತೆ
ಮನೆಗೆ ಸಿರಿತನ ಭಾಗ್ಯವ ತಂದವಳು
ಲೋಕವ ಬೆಳಗಿದ ಧರಣಿಯಂತಹ
ಸಂಯಮಶೀಲೆ ನನ್ನ ಮುದ್ದು ಮಗಳು...

ಅಂದದಿ ಮನೆಗೆ ಕಾಂತಿಯ ತಂದಳು
ಮನೆಯಲಿ ನಗು ನಗುತ ಶಾಂತಿಯ ತಂದಳು
ಕುಟುಂಬದ ಖುಷಿಯ ಕ್ಷಣಕ್ಕೆ ಕಾರಣಳು
ನನ್ನ ಪಾಲಿನ ಸೌಭಾಗ್ಯ ದೇವತೆ ಮುದ್ದು ಮಗಳು...

ಕಿವಿಗೆ ಇಂಪಾದ ನಿನಾದ ಅವಳ ಸವಿಯ ನುಡಿ
ಚಂದಿರನೇ ನಾಚುವನು ಕಂಡು ಅವಳ ಅಂದ
ನಕ್ಷತ್ರಗಳೇ  ನಾಚಿದವು ಇವಳ ಕಾಂತಿಯ ಕಣ್ಣಿಂದ
ಹೃದಯ ಸೌಂಧರ್ಯವತಿ ನನ್ನ ಮುದ್ದು ಮಗಳು...

ನಾಟ್ಯದಿ ನವಿಲೇ ಸೋಲುವುದು ಇವಳ ಮುಂದೆ
 ಮಾತಿನ ಕಂಪಲ್ಲಿ ಜಗವೇ ಸರಿಯುವುದು ಹಿಂದೆ
ಕರುನಾಡ ಮಣ್ಣಿನ ಹೆಮ್ಮೆಯ ಕುವರಿಯಾಗಿ
ಇತಿಹಾಸದಿ ಮೆರೆಯವಂತಾಗಲಿ ನನ್ನ ಮುದ್ದು ಮಗಳು...

🌹ಪುರುಷೋತ್ತಮ ಪೆಮ್ನಳ್ಳಿ🌹
ಪಾವಗಡ ತಾ ತುಮಕೂರು ಜಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

2 ಕಾಮೆಂಟ್‌ಗಳು:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...