ನಾನೆಂಬ ಗರ್ವಿ(ಕವಿತೆ)
ನಾನು ನಾನೇ ಎಂಬ ಗರ್ವವ
ಹೊತ್ತ ಮನುಜನೇ,
ಒಮ್ಮೆಯಾದರೂ ನೀ ಬಂದ
ದಾರಿಯ ಗಮನಿಸು,
ನೀ ಮಾಯೆಯ ಭ್ರಮೆಯಲ್ಲಡಗಿ
ನನ್ನದು ಎನ್ನುವ ಮೋಹಕ್ಕೊಳಗಾಗಿ
ನಿನ್ನತನವ ಹರಾಜಿಗಿಟ್ಟದ್ದು
ಅರಿವಿಗೆ ಬರಲಿಲ್ಲವೇ,
ಎಲ್ಲರನ್ನು ಮೋಸದೀ ತುಳಿದು
ಜಾಲದೀ ಸೆಳೆದು
ಉತ್ತುಂಗ ಪಟ್ಟಕ್ಕೆರಲು ನೀ
ಪಡುವ ನಾಟಕೀಯ ಮಜಲುಗಳು
ಪದರಪದರವಾಗಿ ಎಲ್ಲರಿಗೂ ತಿಳಿದಿಹುದು,
ಮೇಲೆರುವ ನೀ ಮತ್ತೊಬ್ಬರ ತುಳಿಯದೆ
ನಿನ್ನೊಂದಿಗೆ ಮೇಲೆತ್ತುವ ಗುಣವ ನೀ ಒಲ್ಲೆ!
ನಾನು ಎಂಬೆರೆಡು ಅಕ್ಷರವ ತೊರೆದು
ನಾವಾಗಿ ವ್ಯಕ್ತಿತ್ವವ ಬದಲಿಸಬಾರದೆ??
-ವಿಜಯಲಕ್ಷ್ಮಿ ಡೋಣಿ
ಕನ್ನಡ ಶಿಕ್ಷಕಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ