ಭಾನುವಾರ, ಜುಲೈ 18, 2021

ಹಕ್ಕಿಯ ಬದುಕು (ಕವಿತೆ) - ಪುರುಷೋತ್ತಮ ಪೆಮ್ನಳ್ಳಿ.

ಹಕ್ಕಿಯ ಬದುಕು

ಸುತ್ತಲಿನ ಕಡ್ಡಿ ಎಳೆಗಳ ಹಾರಾಡಿ ಹೆಕ್ಕಿತು
ಬದುಕ ನೆಮ್ಮದಿಗೆ ಹಕ್ಕಿಯು ಗೂಡ ಕಟ್ಟಿತು 
ಗೂಡಲ್ಲಿ ಮರಿ ಹಕ್ಕಿಗಳ  ಕಲರವ ಕೇಳಿತು
ಶಾಂತಿಯೇ  ಹಕ್ಕಿ ಬದುಕ ಸ್ವಭಾವವೆಂದು ತಿಳಿಯಿತು

ಜಗವೆಲ್ಲ ಹಾರಡಿ ಗೂಡು ಸೇರಿತು
ಆಸೆಗಳ ಮರೆತು ಖುಷಿಯಲಿ ತೇಲಿತು
ನಮ್ಮ ಉಳಿಸೆಂದು ಮನುಕುಲಕೆ ಬೇಡಿತು
ನಿಷ್ಕಲ್ಮಶವ ಮನುಕುಲಕೆ ತಿಳಿಸಿ ಸಾರಿತು...

ಮರಿ ಹಕ್ಕಿಗಳಿಗೆ ಬದುಕ ಕಟ್ಟಿಕೊಟ್ಟಿತು
ಸ್ವತಂತ್ರ ಜೀವನದ ಪಾಠವ ತಿಳಿಸಿತು
ತನ್ನ ಬಳಗಕ್ಕೆ ಜೀವನವೇ ಸವೆಸಿತು
ಮಮಕಾರ ಮೌಲ್ಯವ ವಿಶ್ವಕೆ  ಸಾರಿತು...

ಮರಗಿಡಗಳ ವಾಸದ ನಿಲಯ ಮಾಡಿಕೊಂಡು
ಜೀವಿಸುತ್ತಿವೆ ಖುಷಿಯಲಿ ಕಾಳು ಕಡಿಗಳ ಉಂಡು
ಕಲಿಯಬೇಕಿದೆ ನಾವು  ಹಕ್ಕಿಗಳ ಒಗ್ಗಟ್ಟು ಕಂಡು
ಸಂಗೀತವ ಹರಿಸಿವೆ ಕೂಗಲಿ ಹಕ್ಕಿಗಳ ದಂಡು...

ಆಗಸದಲಿ ಹಕ್ಕಿಗಳ ಸುಂದರ ಪಯಣ
ವನ ಉದ್ಯಾನಗಳೇ ಸಂತಸದ ಆಟದ ತಾಣ 
ಹಕ್ಕಿಯ ಜೀವನಶೈಲಿ ಮನುಜಗೆ ಪ್ರೇರಣ
ಗತದಿ ಹಕ್ಕಿಗಳ ಗೂಡೆ ಮನೆಗೆ ತೋರಣ...
ಪುರುಷೋತ್ತಮ ಪೆಮ್ನಳ್ಳಿ
ಪಾವಗಡ ತಾ ತುಮಕೂರು ಜಿ
ದೂ.೯೬೩೨೨೯೬೮೦೯.



(ನಿಮ್ಮ ಬರಹಗಳ ಪ್ರಕಟಣೆ ಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ )

4 ಕಾಮೆಂಟ್‌ಗಳು:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...