ಬುಧವಾರ, ಜುಲೈ 21, 2021

"ಯುವ ಸಾಹಿತಿ ಶ್ರೀ ರಾಘವೇಂದ್ರ ದೇವಪ್ಪ ತಳವಾರ"


"ಯುವ ಸಾಹಿತಿ ಶ್ರೀ ರಾಘವೇಂದ್ರ ದೇವಪ್ಪ ತಳವಾರ"

 "ಗುರುಕುಲ ಕಲಾ ಪ್ರತಿಷ್ಠಾನ" ತುಮಕೂರು ನಡೆಸಿದ ಅಪ್ರಕಟಿತ ಕೃತಿಗಳ ಸ್ಪರ್ಧೆಯಲ್ಲಿ  ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಮುರುಡಿ ಎಂಬ ಗ್ರಾಮದ ಯುವ ಕವಿ ರಾಘವೇಂದ್ರ ದೇವಪ್ಪ ತಳವಾರ ಅವರು ತಮ್ಮ ' ಆತ್ಮಾನುಬಂಧದ ಸಖಿ' ಎಂಬ ಕವನ ಸಂಕಲನ ಕೃತಿಗೆ ' ಗುರುಕುಲ ಸಾಹಿತ್ಯ ಕೇಸರಿ' ಎಂಬ ಪ್ರಶಸ್ತಿಯನ್ನು ಪಡೆದಿದ್ದಾರೆ. ಪ್ರತಿಷ್ಠಾನದ ರಾಜ್ಯಾಧ್ಯಕ್ಷ ರಾದ ' ಹುಲಿಯೂರದರ್ಗು ಲಕ್ಷ್ಮಿ ನಾರಾಯಣ' ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಶ್ರೀ ರಾಘವೇಂದ್ರ ದೇವಪ್ಪ ತಳವಾರ ಇವರಿಗೆ ವಿಚಾರ ಮಂಟಪ ಸಾಹಿತ್ಯ ಪತ್ರಿಕೆಯ ಪರವಾಗಿ ಅಭಿನಂದನೆಗಳು ಹಾಗೂ ಶುಭ ಹಾರೈಕರಗಳನ್ನು ತಿಳಿಸುತ್ತಾ..... 

ಮಾನ್ಯರು  ಗುರುಕುಲ ಸಾಹಿತ್ಯ ಕೇಸರಿ ಪ್ರಶಸ್ತಿ ಪಡೆದಿರುವ  ಈ ಸಂದರ್ಭದಲ್ಲಿ ಅವರ ಒಂದು ಸಣ್ಣ ಪರಿಚಯ ಲೇಖನ ನಮ್ಮ ಓದಿಗರಿಗಾಗಿ....

ಮೂಲತಃ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಮುರುಡಿ ಗ್ರಾಮದವರಾದ ರಾಘವೇಂದ್ರ ದೇವಪ್ಪ ತಳವಾರ ಅವರು ಪ್ರಸ್ತುತವಾಗಿ ' ಅಕ್ಷರ ದಾಸೋಹ' ಎಂಬ ಮಾಸಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದು, ಹವ್ಯಾಸಿ ಬರಹಗಾರರಾಗಿ ಸಾಹಿತ್ಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.
ಜೀವನವೆಂಬುದು ಕೆಳಗಿಂದ ಮೇಲೇರಿ, ಮತ್ತೇ ಕೆಳಗಿಳಿಯುವ ಜೋಕಾಲಿಯಂತೆ. ಈ ಬದುಕಿನ ಲೋಲಕದಾಟವು ಎಲ್ಲರಿಗೂ ಅನ್ವಯ, ಇದಕ್ಕೆ ಯಾರೂ ಹೊರತಿಲ್ಲ!!

  ರಾಘವೇಂದ್ರ ದೇವಪ್ಪ ತಳವಾರ, ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಮುರುಡಿ ಎಂಬ ಗ್ರಾಮದಲ್ಲಿ 9 ನೇ ಎಪ್ರಿಲ್ 1997 ರಲ್ಲಿ ದೇವಪ್ಪ ಮತ್ತು ಬಸವಣ್ಣೆವ್ವ ಎಂಬ ದಂಪತಿಗೆ ಮಗನಾಗಿ ಜನಿಸಿದರು. ಸೋಮಶೇಖರ ಎಂಬ ಒಬ್ಬ ಸಹೋದರನೂ ಇದ್ದಾನೆ. ಕೂಲಿ ಕೆಲಸ ಮಾಡುತ್ತಿದ್ದ  ತಂದೆ ತಾಯಿಗಳು ಎಷ್ಟ ಸಲ ತಾವು ಖಾಲಿ ಹೊಟ್ಟೆಯಲ್ಲಿದ್ದು ಅಕ್ಷರ ಜ್ಞಾನವನ್ನು ಉಣಬಡಿಸಿದರು. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ, ಪ್ರೌಢ ಶಿಕ್ಷಣವನ್ನು ಕಡಕೋಳ ಎಂಬ ಗ್ರಾಮದಲ್ಲಿ, ಪಿಯುಸಿ & ಪದವಿಗಳನ್ನು ಗದಗಿನಲ್ಲಿ ಮುಗಿಸಿ ಎಂಎಸ್ಸಿ ಗಣಿತಶಾಸ್ತ್ರವನ್ನು ಅಭ್ಯಸಿಸಲು ಉ. ಕ. ಜಿಲ್ಲೆಯ ಶಿರಸಿಗೆ ತೆರಳಿದರು ಆದರೆ ಕೆಲವು ಕಾರಣಗಳಿಂದ ಅದನ್ನು ಅರ್ಧಕ್ಕೆ ಮೊಟಕುಗೊಳಿಸಬೇಕಾಯಿತು. ಪ್ರಸ್ತುತವಾಗಿ IGNOU, DELHI ಇಂದ ಎಂಎಸ್ಸಿ ಪರಿಸರ ವಿಜ್ಞಾನ ಹಾಗೂ KSOU MYSORE ನಿಂದ PGDBA ಗಳನ್ನು ಅಭ್ಯಾಸ ಮಾಡುತ್ತಿರುವರು. ಜೊತೆ ಜೊತೆಯಲ್ಲಿ 'ಅಕ್ಷರ ದಾಸೋಹ' ಎಂಬ ಮಾಸಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿರುವರು. 4-5 ಸರ್ಕಾರಿ ನೌಕರಿಯ ಪರೀಕ್ಷೆಗಳಲ್ಲೂ ಉತ್ತೀರ್ಣನಾಗಿದ್ದು, ಸದ್ಯಕ್ಕೆ ಇವರ ಕನಸಿನ ಜೀವನದ ಪಯಣದಲ್ಲಿ ಮುನ್ನಡೆಯುತ್ತಿರುವರು.

ಸಾಹಿತ್ಯ ಲೋಕಕ್ಕೆ ಪರಿಚಯ :

ಬಾಲ್ಯದಿಂದಲೂ ಕನ್ನಡವೆಂದರೆ ಕುಣಿಯುತ್ತಿದ್ದ ಇವರು ಪ್ರಾಥಮಿಕ ಶಾಲಾ ವಿದ್ಯಾರ್ಥಿಯಾಗಿದ್ದಾಗಿಂದಲೂ ಕನ್ನಡ, ಕಲೆ, ಸಾಹಿತ್ಯಕ್ಕೆ ಸಂಬಂಧಿಸಿದ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಜೊತೆ ಜೊತೆಗೆ ನಾಟಕ, ದೊಡ್ಡಾಟ, ಕ್ರೀಡೆಗಳಲ್ಲೂ ನನಗೆ ಅತೀವ ಆಸಕ್ತಿ ಹೊಂದಿದ್ದರು. ಅಂದು ಚಿಗುರೊಡೆದ ಕನ್ನಡ ಪ್ರೇಮ  ಮೊದಲ ಕವನವನ್ನು ಬರೆಯುವಂತೆ ಮಾಡಿದ್ದು 9 ನೇ ತರಗತಿಯಲ್ಲಿ. ಅಂದು  ಕನ್ನಡ ಶಿಕ್ಷಕರಾದ ಮಹಾಂತೇಶ ಅಂಗಡಿಯವರು ಸಾಹಿತ್ಯ  ಸಂಗಡಿಗರೂ ಆಗಿದ್ದರು. ಅಂದು ಪ್ರಾರಂಭವಾದ ಈ ಹವ್ಯಾಸ ಇಂದು 'ಆತ್ಮಾನುಬಂಧದ ಸಖಿ' ಎಂಬ ಕವನ ಸಂಕಲನ ಕೃತಿಯ ರಚನೆಯವರೆಗೂ ಬಂದಿದ್ದು, ಈ ಕೃತಿಯು ತುಮಕೂರಿನ 'ಗುರುಕುಲ ಕಲಾ ಪ್ರತಿಷ್ಠಾನ' ವು ನೀಡಲ್ಪಡುವ 'ಗುರುಕುಲ ಸಾಹಿತ್ಯ ಕೇಸರಿ' ಎಂಬ ಪ್ರಶಸ್ತಿಗೂ ಭಾಜನವಾಗಿದೆ. ಇವರ ಕವನಗಳ ವಸ್ತು ಸಾಮಾಜಿಕ ಆಗು ಹೋಗುಗಳು. ಬಡತನ, ನಿರುದ್ಯೋಗ, ಅನಕ್ಷರತೆ, ಸ್ತ್ರೀ ಸ್ವಾತಂತ್ರ್ಯ, ಪ್ರೀತಿ, ಸ್ನೇಹ, ವಿಶ್ವಾಸ, ನಂಬಿಕೆ, ಸಾಧನೆಗಳ ಬಗ್ಗೆ ಬರೆಯುವ ಇವರು ಸಾಹಿತ್ಯವೆಂಬುದು ನಮ್ಮ ಸುತ್ತಲಿನ ಸಮಾಜದ ಕೈಗನ್ನಡಿಯಾಗಿ ನೊಂದವರಿಗೆ ಸಾಂತ್ವನ ಹೇಳಿ, ಸೋತವರನ್ನ ಹುರಿದುಂಬಿಸಿ, ಎಲ್ಲರಿಗೂ ಸ್ಪೂರ್ತಿ ಕಿರಣವಾಗಿರಬೇಕೆಂದು ನಂಬಿದ್ದಾರೆ.

ಸಾಹಿತ್ಯದ ಜೊತೆಗೆ ಕೃಷಿಯಲ್ಲೂ ಅತೀವ ಆಸಕ್ತಿ ಇವರಿಗಿದೆ. ಇವರ  ಪ್ರತಿ ಹೆಜ್ಜೆಯಲ್ಲೂ ಜೊತೆಗಿದ್ದು ಪ್ರೋತ್ಸಾಹಿಸುವ  ತಂದೆ - ತಾಯಿಯರಿಗೆ, ಸ್ನೇಹಿತರಿಗೆ, ಗುರುಗಳಿಗೆ, ಪತ್ರಿಕಾ ಮಾಧ್ಯಮದವರಿಗೆಲ್ಲರೂ ಇವರ ಸಾಧನೆಗೆ ಕಾರಣರು ಎಂದು ಹೆಮ್ಮೆ ಇಂದ ಹೇಳುವರು.


"ಎಲ್ಲರ ಸಹಕಾರ ಪ್ರೋತ್ಸಾಹ ಬೆಂಬಲ ಇರಲಿ, ಸಾಹಿತ್ಯ  ಸುಧೆಯ ಸವಿರುಚಿ ನಿಮಗಿರಲಿ. ನಾವೆಲ್ಲರೂ ಕನ್ನಡವನ್ನು ಉಳಿಸೋಣ, ಕನ್ನಡವನ್ನು ಬೆಳೆಸೋಣ. 
ಜೈ ಭಾರತ, ಜೈ ಕರ್ನಾಟಕ" - ರಾಘವೇಂದ್ರ ದೇವಪ್ಪ ತಳವಾರ.

      ಮತ್ತೊಮ್ಮೆ  ಶ್ರೀ ರಾಘವೇಂದ್ರ ದೇವಪ್ಪ ತಳವಾರ ಅವರಿಗೆ ಶುಭಾಶಯಗಳು ಹಾಗೂ ಶುಭಹಾರೈಕೆಗಳು.   




(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
            

3 ಕಾಮೆಂಟ್‌ಗಳು:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...