ಬುಧವಾರ, ಜುಲೈ 21, 2021

ಮುತ್ತು (ಕವಿತೆ) - ಶ್ರೀ ಶ್ರೀಧರ ಗಸ್ತಿ ಧಾರವಾಡ.

ಮುತ್ತು

ಕಡಲಾಚೆ ಮುಗಿಲ ಮುಳ ಮುಳಗಿ ತೇಲಿ
ನೀಲಿ ನೀಲಮೋಡ ಬಾನ,ಮೋಡ ಮೋಡ ಗೂಡು
ಗುಡು ಗುಡುಗಿ ಸಿಡಿಲ,ಮರಿಯಾಚೆ ತನನನನನ

ಕಾಮನಬಿಲ್ಲು ಬಿಗಿದಪ್ಪಿ ನಿನ್ನ 
ತಂಪೆರಗಿ ತನನನನನ
ಹೂಬಿಸಿಲಿನಲ್ಲಿ ತುಂತುರು  ಹನಿಯ 
ನೆಲ ನೆಲವ ಹಸಿಯ ತನನ,

ಅಲೆ ಅಲೆಯ ಮೇಲೆ ಮಿರಮಿರನೆ ಮಿನುಗಿ
ಒಳ ಒಳಗೆ ಹೊಯ್ಯ ತನನ
ಸ್ವಾತಿಮುತ್ತು ಮಳೆ ಹನಿ ಹನಿಯ ಜಾರಿ
ಒಡಲಾಳ ಸೇರಿ ತನನನ

ಕಪ್ಪೆ ಚಿಪ್ಪಿನೊಳಗೆ ಜೀವಭಾವ ತುಂಬಿ,ಮುತ್ತು ಮಳೆಯ ತನನ ತನನ,
ಬೆಳ್ಳಿಚುಕ್ಕೆಯಂತೆ ಫಳಫಳನೆ ಹೊಳೆದು ಚಂದಚಂದ ಬಾಳ ತನನನ.
           -  ಶ್ರೀಧರ ಗಸ್ತಿ ಧಾರವಾಡ.




(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...