ಶಿರಸಿ ಮಾರಿಕಾಂಬೆಗೊಂದು ಮನವಿ.🙏
ಶಿರಸಿ ಮಾರಿಕಾಂಬೆ,
ಶಿರಬಾಗಿ ಬೇಡಿಕೊಂಬೆ,
ಸಲಹು ನಿನ್ನ ಮಕ್ಕಳನು,
ಕೈಹಿಡಿದು ನಡೆಸು ನಮ್ಮನು.
ಕರೋನಾ ಎಂಬ ವೈರಾಣು,
ಕೊಲ್ಲುತ್ತಿದೆ ಮನುಜನ ಅಣು ಅಣು,
ಇಡೀ ಜಗತ್ತೇ ಇದರಿಂದ ತತ್ತರಿಸುತ್ತಿದೆ,
ಏನು ಮಾಡಬೇಕೆಂದು ತಿಳಿಯದೇ?.
ಕುಳಿತಿಹೆ ಏಕೆ ಹೀಗೆ ಸುಮ್ಮನೆ,
ಕಾಪಾಡು ಎಂಬುದೊಂದೆ ಪ್ರಾರ್ಥನೆ,
ಸಿಡಿದೇಳು ಕೋವಿಡ್ 19 ರ ವಿರುದ್ಧ,
ಕಡಿದಾಕು ಜಗಲಿರುವ ಅದರ ಬಂಧ.
ಸಹಿಸಲಾರೆವು ಅದರ ಅಟ್ಟಹಾಸ,
ಅದರ ಮಾರಣಹೋಮವಾಗಲಿ ಇತಿಹಾಸ,
ನಿರೂಪಿಸು ಜಗತ್ತಿಗೆ ನಿನ್ನ ಇರುವಿಕೆ,
ನೆಮ್ಮದಿಯ ಕೊಡು ತಾಯೇ ನಮ್ಮ ಜನ್ಮಕೆ.
ಉದಯಿಸಲಿ ಜಗತ್ತಿಗೆ ಹೊಸ ವರುಷ,
ನೀಡಲಿ ಎಲ್ಲರ ಬಾಳಿಗೆ ಸಂತಸ ಹರ್ಷ,
ಈ ಪುಟ್ಟ ಮನವಿಯನ್ನು ಈಡೇರಿಸು,
ಅಂಬೆ, ಜಗದ ಮನುಕುಲವನ್ನು ಉದ್ದ್ಧರಿಸು
🙏🙏
ಶಿವಕುಮಾರಿ. ಆರ್
ಕನ್ನಡ ಶಿಕ್ಷಕಿ
ದೊಮ್ಮಲೂರು ಬೆಂಗಳೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448713659 ವಾಟ್ಸಪ್ ಮಾತ್ರ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ