ಶನಿವಾರ, ಜುಲೈ 24, 2021

ಗುರುವೇ ಸರ್ವವು (ಕವಿತೆ) - ಶ್ರೀ ಜಿ ಟಿ ಆರ್ ದುರ್ಗ, ಬಂಗಾರಪೇಟೆ.

ಗುರುವೆ ಸರ್ವವು

ಗುರುವೆ ನಿನ್ನ ಚರಣಕ್ಕೆ ನಮಿಸುವೆ 
ಕರುಣಿಸು ಜ್ಞಾನಾದಯ ಗುರುವೆ
ಜಗಕ್ಕೆ ಉದಯಿಸು ವಿದ್ಯಾದಯವೆ

ಮನ್ನಿಸೆನ್ನ ಗುರುವೆ ನಮ್ಮೀ ತಪ್ಪನು
ತಿದ್ದಿ ತೀಡುವ ಗುರುವೆ ಶಿಲ್ಪಿಯು ನೀನು
ಅಜ್ಞಾನದ ಬೊಂಬೆಗಳು ನಾವು ಗುರುದೇವ 
ನಿತ್ಯ ಚೆರಿತ್ರೆಯಲ್ಲಿ ಸುಜ್ಞಾನಿ ಗುರುದೇವ

ಲೋಕದೊಳಗೆ ನಿನ್ನಂತ ಜ್ಞಾನಿ ಇಲ್ಲಾವೆ
ಮನುಜಗೆ ವರದಾನ ಹರುಷಕೆ ಸಿರಿಯು
ಸ್ವೀಕರಿಸು ಭಕ್ತಿಯ ಓ ಬ್ರಹ್ಮನ ನುಡಿಯು
ಜ್ಞಾನದೊಳಗೆ ಕಿರಣ ಗುರುವೆ ಪರಿಶುದ್ಧವು

ತೃಣಕಾಷ್ಠದೊಳಗು ಗುರುವೆ ಶ್ರೇಷ್ಠವು
ಆಧ್ಯಾತ್ಮಿಕ ಬೆಳಕಿನಿಂದ ಆತ್ಮನಂದ ಗುರುವು
ಗುರುವೆ ಸತ್ಯದ ಹಾದಿ ನೀತಿ ಮಾರ್ಗವ ತೋರಿ
ಮನುಜನ ದುಷ್ಟತನ ತೊಳೆಯುವ ಗುರುವೆ

ಗುರುವಿಗಿಂತಧಿಕ ಧರಣಿಯಲ್ಲಿ ಯಾರಿಲ್ಲ
ಮನಸ್ಸಿನೊಳಗೆ ಪರಿಶುದ್ಧ ಮಾಣಕ್ಯ ಮಾಲೆ
ಗುರುಕುಲದ ಜ್ಞಾನಕ್ಕೆ ದೊರೆ ಗುರುವರ್ಯರು
ಅರಿವಿಗು ಗುರುವೆ ಜಗಕ್ಕೆಲ್ಲ ಮಹಾ ಶ್ರೇಷ್ಠವೆ
ಜಿ ಟಿ ಆರ್ ದುರ್ಗ
ಬಂಗಾರಪೇಟೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...