ಗಝಲ್
ನಮ್ಮ ಜೋಡಿ ಬಲು ಅಪರೂಪದ ಕೃಷ್ಣರುಕ್ಮಿಣಿಯಾಗೇ ಜೊತೆಯಾದೆ ನಲ್ಲೆ/
ವನದಲ್ಲಿದ್ದ ನನ್ನ ಒಲವಿಂದ ಸೆಳೆದು ಪ್ರೀತಿಯ ಮಳೆಯಾದೆ ನಲ್ಲೆ//೧//
ಬಾಡಿದ್ದ ಮನಕೆ ಸಸಿಯೊಂದ ನೆಟ್ಟು ನೀ ಮೊಗ್ಗಾಗಿ ಅಂಕುರಿಸಿದೇಕೆ /
ಕಂಗಳಲಿ ಪ್ರೇಮದ ಬೆಳಕ ಹರಿಸಿ ಬಾಳಿಗೆ ಜ್ಯೋತಿಯಾದೆ ನಲ್ಲೆ//೨//
ನಿನ್ನ ಸಂಪಿಗೆಯಂತ ನಾಸಿಕವು ನಾಚುವ ದಿನಕರನಂತೆ ಕಂಗೊಳಿಸಿ ಕೆಂಪೇರಿದೆ/
ಬಿಸಿಗಾಳಿಗೆ ಮುಂಗುರುಳು ಹಾರಿ ಹೃದಯಕೆ ತಾಕಿ ಗಿಳಿಯಾದೆ ನಲ್ಲೆ//೩//
ನಿನ್ನ ಅಧರದಲಿ ಸವಿ ಮಕರಂದ ತುಂಬಿ ಸೆಳೆದಿದೆ ದುಂಬಿಯ/
ಚೆಲುವೆ ನನ್ನೊಲವ ಬಾಳದೋಣಿಯಲಿ ನೀ ಅನವರತ ಜೊತೆಯಾದೆ ನಲ್ಲೆ//೪//
ಕಾಲಮೇಘ ಆವರಿಸಿ ಸಾಗರ ಉಕ್ಕಿದರು ಕಡಲಾಷ್ಟು ಅರ್ತಿ ಮುತ್ತಿದೆ/
ರವಿಚಂದ್ರ ಮರೆಯಾದರು ಅಂಜಿಕೆಯ ಬಿಟ್ಟು ಕಟ್ಟೆಯ ಪ್ರಿಯೆಯಾದೆ ನಲ್ಲೆ//೫//
ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ
ಅಂಚೆ ಜೀವ ವಿಮೆ ಮಂಡ್ಯ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ