ಮಂಗಳವಾರ, ಜುಲೈ 27, 2021

ಆಪೇಕ್ಷೆಯಿಂದಲೇ ನಿರಾಸೆ (ಲೇಖನ) - ಸವಿತಾ ಆರ್ ಅಂಗಡಿ ಮುಧೋಳ.

ಆಪೇಕ್ಷೆಯಿಂದಲೇ ನಿರಾಸೆ.

 ಕುಟುಂಬದಲ್ಲಿ ಎಲ್ಲರೂ ಸಂತೋಷವಾಗಿರಲು ಏನು ಮಾಡಲು ಸಾಧ್ಯ?
 ಮೊದಲು ಮಕ್ಕಳಾದವರು ತಂದೆ-ತಾಯಂದಿರ ಹತ್ತಿರ ಅತಿಯಾಗಿ ಬೇಡುವುದು ಕಾಡುವುದು ಅದು ಬೇಕು ಇದು ಬೇಕು ಏನೇ ಕೊಡಿಸಿದರೂ ತೃಪ್ತಿ ಇಲ್ಲ. ಅವರು ತಮಗೆ ಸಾಧ್ಯವಾದಷ್ಟು ಮಕ್ಕಳಿಗೆ ಏನು ಬೇಕು ಏನು ಬೇಡ ಅನ್ನುವುದನ್ನು ತಿಳಿದು ಅವರ ಅವಶ್ಯಕತೆಗಳನ್ನು ಪೂರೈಸುವವರು ಅದಕ್ಕೂ ಮೀರಿ ಆಸೆ ಪಟ್ಟರೆ ಅದು ದುರಾಸೆ ಆಗುವುದು ಮಿತಿ ಮೀರುವುದು ಆದರ್ಶ ಸಮಾಧಾನ ನಿರಾಸೆ ಆಗುವುದು ಇದರಿಂದ ಮಕ್ಕಳು ತಂದೆ ತಾಯಂದಿರಲ್ಲಿ ಹಟ ಬಿಟ್ಟರೆ ಒಳ್ಳೆಯದು. ಇನ್ನು ತಂದೆ-ತಾಯಂದಿರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವುದು ಅವರು ತಮ್ಮ ಮಕ್ಕಳಿಗೆ ಬೇಕು ಬೇಡವಾದದ್ದನ್ನು ಅನುಕೂಲ ಮಾಡಿಕೊಟ್ಟು ಅವರು ಶಿಕ್ಷಣದಲ್ಲಿ ಹಿಂದುಳಿದರೆ ಆದರೂ ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪರಿಶ್ರಮದಿಂದ ಹಿಂದೆ ಹುದ್ದೆಗೆ ಸೇರಿಕೊಳ್ಳುತ್ತಾರೆ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಮುಂದುವರೆಯುತ್ತಾರೆ. ಇದರಿಂದ ತಂದೆ-ತಾಯಿ ಸಮಾಧಾನಗಳ ಬಾರದು ತಾವು ಅಂದುಕೊಂಡಂತೆ ಆಗಲಿ ಅಂತ ಏನು ಇಲ್ಲ ಅವರ ಪ್ರಯತ್ನಕ್ಕೆ ಅವರನ್ನು ಗುಣವಾಗಿ ಮುಂದೆ ಸಾಗುವರು ಇದರಿಂದ ತಂದೆ-ತಾಯಿಗಳು ನಿರಾಶೆಗೊಂಡು ಅವರಿಂದ ಹೆಚ್ಚಿನದಾಗಿ ಅಪೇಕ್ಷೆಯನ್ನು ಪಡುವರು. ಇದು ಕೂಡ ನಿರಾಸೆಗೆ ಕಾರಣ.
 ಯಾವುದಾದರೂ ಒಂದು ಕೆಲಸದಲ್ಲಿ ತೊಡಗಿದರೆ ಸಾಕು ಅದನ್ನೇ ಸರಿಯಾಗಿ ಮಾಡಿಕೊಂಡು ಹೋದರೆ ಅವರು ಬೆಳೆದು ಬೆಳೆಯಲು ಸಾಧ್ಯ. ಇದಕದಕ್ಕಿಂತ ಹೆಚ್ಚಾಗಿ ತಂದೆ-ತಾಯಿಯರು ಹೆಚ್ಚಿನ ಅಪೇಕ್ಷೆಯನ್ನು ಪಡಬಾರದು ನಿರಾಸೆಗೆ ಕಾರಣವಾಗುತ್ತದೆ.
 ಹಾಗೂ ಅಣ್ಣತಮ್ಮಂದಿರು ಕೂಡ ಭೂಮಿಗೆ ಬಂದ ಆಸ್ತಿಪಾಸ್ತಿಗಳನ್ನು ಕೂಡ ತೃಪ್ತಿಯನ್ನು ಹೊಂದಬೇಕು.. ಹೆಚ್ಚಾದರೆ ಏನು ಕಡಿಮೆಯಾದರೆ ಏನು ಇದ್ದದ್ದನ್ನು ಉಳಿಸಿಕೊಂಡು ಹೋಗುವದೇ ಬುದ್ಧಿವಂತರ ಲಕ್ಷಣ. ಇದರಿಂದ ನಿರಾಸೆ ಹೊಂದಬಾರದು.
ಹೆಣ್ಣು ಮಕ್ಕಳು ತಮ್ಮ ತಂದೆ ತಾಯಂದಿರಿಂದ ಎಲ್ಲ ವಸ್ತುಗಳನ್ನು ಪಡೆಯಲಿ ಮತ್ತು ತಮ್ಮನ್ನು ಸಾಕಿ ಸಲುಹಿ ಒಂದು ಒಳ್ಳೆಯ ಮನೆತನ ನೋಡಿ ಮದುವೆ ಮಾಡುತ್ತಾರೆ ಚಂದನ ಮನೆಯಲ್ಲೂ ಕೂಡ ಸಂತೃಪ್ತಿಯಿಂದ ಇರಬೇಕು ಅದು ಬಿಟ್ಟು ತವರುಮನೆಯಿಂದ ಅತಿಯಾಸೆ ಮಾಡಿದರೆ ಅದು ದುಃಖಕ್ಕೆ ಕಾರಣವಾಗುತ್ತದೆ ಕೊಟ್ಟಿದ್ದನ್ನು ತೃಪ್ತಿಯಿಂದ ಪಡೆದುಕೊಳ್ಳಬೇಕು ಗಂಡನ ಮನೆಯಲ್ಲಿ ಒಳ್ಳೆಯ ಜೀವನ ನಡೆಸಬೇಕು ಅತಿಯಾಸೆ ಮಾಡುವುದರಿಂದ ತವರು ಮನೆ ಸಂಬಂಧವನ್ನು ಕಳೆದುಕೊಳ್ಳುತ್ತಾರೆ. ಮತ್ತೆ ಮಾವಂದಿರು ಕೂಡ ಮಗ-ಸೊಸೆ ಇಷ್ಟು ಚೆನ್ನಾಗಿ ನೋಡಿಕೊಂಡರು ಕೂಡ ಅತಿಯಾಗಿ ಕಾಡುವುದು ಬೇಡುವುದು ಹೀಗೆ ಮಾಡುವುದರಿಂದ ಬೇಸರಗೊಳ್ಳುತ್ತಾರೆ ಎಷ್ಟು ಮಾಡಿದರು ಕಡಿಮೆ ಅನ್ನೋಹಾಗೆ ತೋರಿಸುವರು ಇದರಿಂದ ಅತಿಯಾದ ಅಪೇಕ್ಷೆ ಒಳ್ಳೆಯದಲ್ಲ. ಕೊಡುವಷ್ಟು ಪ್ರೀತಿಯೂ ಕೂಡ ದೂರವಾಗಿ ಬಿಡುತ್ತದೆ ಇದ್ದದ್ದರಲ್ಲಿ  ತೃಪ್ತಿ ಯಿಂದ ಜೀವನ ನಡೆಸಬೇಕು. ಮತ್ತು ಹೆಂಡತಿಯಾದವಳು ಮದುವೆಯಾದ ತಕ್ಷಣ ಅವರು ಹೇಳಿದ್ದು ಕೇಳಬೇಕು ಬೇಡಿದ್ದು ಕೊಡಿಸಬೇಕು ಅನ್ನುವ ಹಟ ಒಳ್ಳೆಯದಲ್ಲ. ಎಲ್ಲವೂ ತಾನು ಹೇಳಿದ ಹಾಗೆಯೇ ನೆಡೆಯ ಬೇಕು ಅನ್ನೋದು ಸರಿಯಲ್ಲ ಸಮಯ ಸಂಧರ್ಭ ಕ್ಕೆ ತಕ್ಕಂತೆ ನೆಡೆಯ ಬೇಕಾಗುವದು. ಇದರಿಂದ ಸಂಸಾರ ದಲ್ಲಿ ಓದುಕು ಕಾಣುವದು. ಇದ್ದದ್ದರಲ್ಲಿಯೇ ಸಂತೃಪ್ತಿ ಯಿಂದ ಸಹ ಬಾಳ್ವೆ ನೆಡೆಸಬೇಕು. ಅತಿಯಾದರೆ ದುಃಖಕ್ಕೆ ಕಾರಣ. ಇದ್ದದ್ದರಲ್ಲಿ ನೆಮ್ಮದಿ ಜೀವನ ನಡೆಸಬೇಕು ಇದರಿಂದ ಸಂಸಾರ ಸುಖಮಯವಾಗಿ ಸಾಗುವುದು ಇದ್ದದ್ದರಲ್ಲಿಯೇ ಸಂತೃಪ್ತಿ ಹೊಂದಿದರೆ ಮನಸ್ಸಿಗೆ ನೋವು ಆಗುವುದಿಲ್ಲ  ನಿರಾಸೆಯು ಆಗುವುದಿಲ್ಲ ಆಸೆಯೇ ದುಃಖಕ್ಕೆ ಕಾರಣ ಇದರಿಂದ ಅನೇಕ ಅನಾಹುತಗಳು ಆಗಬಹುದು ಜೀವನದಲ್ಲಿ ಜಿಗುಪ್ಸೆ ಒಳಗಾಗುವವರು ನೆಮ್ಮದಿಯ ಬದುಕು ಬೇಕೆಂದರೆ ಅಪೇಕ್ಷೆಯನ್ನು ಬಿಡಬೇಕು ನೆಮ್ಮದಿಯ ಬದುಕು ನಡೆಸಬೇಕು ಇದರಿಂದ ಇರುವಷ್ಟು ದಿನ ಸಂತೋಷದಿಂದ ಇರಬಹುದು ನೆಮ್ಮದಿಯ ಜೀವನ ನಡೆಸಬಹುದು.

✍️ ಸವಿತಾ  ಆರ್ ಅಂಗಡಿ  ಮುಧೋಳ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...