ದೇಶ ಸೇವಕನಿಗೆ ಮಡದಿಯ ಮಮತೆ :
(ಕಾರ್ಗಿಲ್ ಯುಧ್ಧದಲ್ಲಿ ಮಡಿದ ನನ್ನೆಲ್ಲಾ ಧೈರ್ಯವಂತ ಹೃದಯಗಳಿಗೆ)
ಜ್ವಾಕೀಲೆ ನನ ಒಡೆಯ ಯುಧ್ಧಕ್ಕ ಹೊರಟಾಗ
ಗೆದ್ದ ಸುದ್ದಿಯ ತರಬೇಕ ನೀ ಎನಗ,
ಗೆದ್ದ ಸುದ್ದೀಯ ತರಬೇಕ ನನ ಇನಿಯ ಸುಗ್ಗೀಯ ಮಾಡಿ ನಲಿವೇನಾ...!
ದೇಶದ ಸೇವೆಗೆ ನೀ ಹೊರಟ ಹಾದಿಗೆ ನನ ಸೆರಗ ಹಾಸಿ ನಡಿಸೇನ,
ನನ ಸೆರಗ ಹಾಸಿ ನಡಿಸೇನ ನನ ಇನಿಯ ನಿನ ಶೌರ್ಯವ ನೋಡಿ ಮೆಚ್ಚೇನಾ...!
ಚಿಂತೆಯು ನನಗಿರಲಿ ಭ್ರಾಂತಿಯೂ ನನಗಿರಲಿ
ಸುಖ-ಶಾಂತಿಯ ಸಂಪ್ರೀತಿ ನಿನಗಿರಲಿ
ಸುಖ-ಶಾಂತಿಯ ಸಂಪ್ರೀತಿ ನಿನಗಿರಲಿ ನನ ಒಡೆಯ ನೀತಿಯ ಮರೆತ ನೀ ಬರಬ್ಯಾಡ...!!
ನನ ಹೊಟ್ಯಾಗ ನೆಲೆಸ್ಯಾನ ನಿನ ಮತ್ತೊಬ್ಬ ಸೈನಿಕ
ಶ್ರಧ್ಧೆಯಿಂದಿರಲಿ ದೇಶದ ಕಾಯಕ
ಶ್ರಧ್ಧೆಯಿಂದಿರಲಿ ನಿನ ದೇಶದ ಕಾಯಕ
ಭಾರತ ಮಾತೆಯ ಮಡಿಲಿಗೆ ನೀನಾಗು ಸೇವಕ...!!
ಕಾಯುವೆನು ನಿನ ದಾರಿ ನಗಬೇಕ ನನ ಮಾರಿ
ನೀ ಬರುವ ಆ ಘಳಿಗೆ ಕಾಯುತೇನ ಬಾಗಿಲಕ
ನೀ ಬರುವ ಆ ಘಳಿಗೆ ಕಾಯುತೇನ ಬಾಗಿಲಕ ನೀ ಕೊಟ್ಟ ಜೀವವ ಕೈಯಾಗ ಹಿಡಕೊಂಡ....!!
- ಹನುಮಂತ ದಾಸರ, ಹೊಗರನಾಳ.
ಸಾ//ಪೋ//ಹೊಗರನಾಳ.
ತಾ//ಮಸ್ಕಿ
ಜಿ//ರಾಯಚೂರು-584132.
ಮೊ: 9945246234.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ತುಂಬಾ ಧನ್ಯವಾದಗಳು ಗುರುಗಳೇ.. ಹಾಗೂ ತಮಗೂ ಮತ್ತು ತಮ್ಮ ಇಡೀ ಪತ್ರಿಕಾ ಬಳಗಕ್ಕೂ ಹೃತ್ಪೂರ್ವಕ ಧನ್ಯವಾದಗಳು ಗುರುಗಳೇ🙏🙏❤❤
ಪ್ರತ್ಯುತ್ತರಅಳಿಸಿSuper brother
ಪ್ರತ್ಯುತ್ತರಅಳಿಸಿ