🌹ತಾಯಿ🌹
ತಾಯಿಯು ಗರ್ಭವ ಕಂದನಿಗಾಗಿ
ಮೀಸಲಿಟ್ಟ ದೇವರ ಪ್ರತಿರೂಪ
ಮಗುವ ಖುಷಿಯ ನಗುವಿಗಾಗಿ
ಜೀವವ ಸವೆಸುವ ದಿವ್ಯ ಸ್ವರೂಪ...
ಮಗುವೆ ಜಗವೆಂದು ಬೀಗಿದ ಮಾತೆ
ಮರೆತಳು ಕಂದನ ನಗುವಲ್ಲಿ ವ್ಯಥೆ
ಮಗುವಿಗಾಗಿಯೇ ನಾಡಿಯ ಮಿಡಿತ
ಅವಳ ಮಮತೆ ಬೆಲೆಗೆ ನಿಲುಕದ ತುಡಿತ...
ತಾಯಿಯ ಪ್ರೀತಿಯು ಕಡಲುಕ್ಕುವ
ಚೇತನದಂತೆ ಚಿಗುರುವ ಬಾಳಿಗೆ
ಅವಳ ತ್ಯಾಗವು ರವಿಯ ಕಿರಣದಂತೆ
ಶ್ರಮಿಸುವುದು ಅಂಧಕಾರದ ಮನಸ್ಸಿಗೆ...
ಪ್ರತಿಫಲವ ಹಂಬಲಿಸದ ಕರುಣಾಮಯಿ
ಜಗದಿ ಮಾತೃ ರಕ್ಷಕನೆ ನಿಜ ಸಿಪಾಯಿ
ಬಾಲ್ಯದಿ ಮಡಿಲಲ್ಲಿ ಸಾಕಿದ ದೇವತೆ
ಉಸಿರಿಗೆ ಉಸಿರ ಕೊಟ್ಟ ಜೀವಧಾತೆ...
ನಿಸರ್ಗವೇ ನಾಚಿತು ಅವಳ ಪ್ರೇಮಕೆ
ಸೂರ್ಯ ಚಂದ್ರರೇ ಕರಗಿದರು ಒಲುಮೆಗೆ
ಹಸಿದ ಜೀವಕೆ ಕಾಮಧೇನುವಾದವಳು
ವಿಶ್ವ ಪ್ರೇಮದಿ ಹೃದಯ ಶ್ರೀಮಂತಿಕೆಯಲಿ ಮೆರೆದವಳು..
ಬದುಕೆಂಬ ವೃಕ್ಷಕೆ ತಾಯಿ ಬೇರಂತೆ
ಬೆಳವಣಿಗೆಯ ಗಟ್ಟಿ ಹಿಡಿದವಳು
ಸನ್ನಡತೆಯ ಪಾಠಕೆ ಸ್ಫೂರ್ತಿಯ ನೆಲೆ
ತಾಯಿಯು ಬ್ರಹ್ಮಾಂಡವೇ ಮೆಚ್ಚಿದ ಹಿರಿತಲೆ...
🌹ಪುರುಷೋತ್ತಮ ಪೆಮ್ನಳ್ಳಿ🌹
ಪಾವಗಡ ತಾ ತುಮಕೂರು ಜಿ.
ದೂ .೯೬೩೨೨೯೬೮೦೯
( ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ